ಭಾರತೀಯ ಚಿತ್ರರಂಗದಲ್ಲಿ ಸುನಾಮಿಯಂತೆ ಅಪ್ಪಳಿಸಿರುವ ಕೆಜಿಎಫ್-2 ಚಿತ್ರ ಮೂರೇ ದಿನದಲ್ಲಿ 421 ಕೋಟಿ ರೂ. ಬಾಚಿಕೊಂಡಿದೆ.
ಏಪ್ರಿಲ್ 14ರಂದು ಜಗತ್ತಿನಾದ್ಯಂತ ಸುಮಾರು 10 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆ ಆದ ಕೆಜಿಎಫ್-2 ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಸೃಷ್ಟಿಸಿದೆ. ಈಗಾಗಲೇ ಹಲವಾರು ದಾಖಲೆಗಳನ್ನು ಪುಡಿಗಟ್ಟಿರುವ ಕೆಜಿಎಫ್ ಸತತ ೪ ದಿನಗಳ ರಜಾ ದಿನವಾಗಿದ್ದರಿಂದ ಕೊಳ್ಳೆ ಹೊಡೆದಿದೆ.
ಹಿಂದಿಯಲ್ಲಿ ಮೊದಲ ಬಾರಿ ಕನ್ನಡ ಚಿತ್ರವೊಂದು 150 ಕೋಟಿ ರೂ. ಸಂಗ್ರಹಿಸಿದ್ದು, ಕೇವಲ ಬುಕ್ಕಿಂಗ್ ನಿಂದಲೇ 140 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ.
ಕನ್ನಡದಲ್ಲಿ ಮೊದಲ ದಿನ 35 ಕೋಟಿ ರೂ. ಬಾಚಿದ್ದ ರಾಕಿಭಾಯ್ ಯಶ್ ಚಿತ್ರ ಅದೇ ಮಟ್ಟದಲ್ಲೇ ಗಳಿಕೆ ಕಾಯ್ದುಕೊಂಡಿದೆ. ಸೋಮವಾರದಿಂದ ಚಿತ್ರದ ಅಬ್ಬರ ಕಡಿಮೆ ಆಗುವ ಸಾಧ್ಯತೆ ಇದ್ದರೂ ಒಂದೆರಡು ದಿನದಲ್ಲಿ 500 ಕೋಟಿ ರೂ. ಕ್ಲಬ್ ಸೇರಲಿದೆ ಎಂದು ಚಿತ್ರ ಪಂಡಿತರು ತಿಳಿಸಿದ್ದಾರೆ.