ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಜಗತ್ತಿನಾದ್ಯಂತ ಏಪ್ರಿಲ್ 14ರಂದು ಬಿಡುಗಡೆ ಆದ ಕೆಜಿಎಫ್-2 ಚಿತ್ರ 4 ದಿನಗಳಲ್ಲಿ 551.83 ಕೋಟಿ ರೂ. ಬಾಚಿಕೊಂಡಿದೆ.
4 ದಿನಗಳ ಕಾಲ ಸರಕಾರಿ ರಜೆ ಇದ್ದು, ಇದರ ಸಂಪೂರ್ಣ ಲಾಭ ಪಡೆದ ಕೆಜಿಎಫ್-2 ಸುಮಾರು 552 ಕೋಟಿ ರೂ. ಸಂಗ್ರಹಿಸಿದೆ.
![](https://pratidhvani.com/wp-content/uploads/2022/04/kgf-2.jpg)
ಕೆಜಿಎಫ್ ಮೊದಲ ಚಾಪ್ಟರ್ 245 ಕೋಟಿ ರೂ. ಬಾಚಿದ್ದು ಕನ್ನಡ ಚಿತ್ರವೊಂದರ ಗರಿಷ್ಠ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ಕೆಜಿಎಫ್-2 ನಾಲ್ಕೇ ದಿನದಲ್ಲೇ ಮುರಿದಿದ್ದು ಅಲ್ಲದೇ ಅದರ ಎರಡು ಪಟ್ಟು ಸಂಗ್ರಹಿಸಿ ತನ್ನ ನಾಗಲೋಟ ಮುಂದುವರಿಸಿದೆ.