ಕೇರಳ ಈಗ ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಕೇರಳವು ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಏಕೈಕ ರಾಜ್ಯವಾಗಿದೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ DoT India ನಿಂದ ISP ಪರವಾನಗಿಯನ್ನು ಪಡೆದುಕೊಂಡಿದೆ. ಈಗ ನಮ್ಮ ಪ್ರತಿಷ್ಠಿತ KFON ಯೋಜನೆಯ ಮೂಲಕ ಸಮಾಜದಲ್ಲಿನ ಡಿಜಿಟಲ್ ವಿಭಜನೆಯನ್ನು ನಿವಾರಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು” ಎಂದಿದ್ದಾರೆ.

KFON ಯೋಜನೆಯು BPL ಕುಟುಂಬಗಳಿಗೆ ಮತ್ತು 30,000 ಸರ್ಕಾರಿ ಕಚೇರಿಗಳಿಗೆ ಉಚಿತ ಇಂಟರ್ನೆಟ್ ಒದಗಿಸಲು ಕಲ್ಪಿಸಲಾಗಿದೆ. ಹಿಂದಿನ ಎಡ ಸರ್ಕಾರ 2019ರಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮೂಲಭೂತ ಹಕ್ಕು ಎಂದು ಘೋಷಿಸಿತು ಮತ್ತು ₹ 1,548 ಕೋಟಿ KFON ಯೋಜನೆಯನ್ನು ಪ್ರಾರಂಭಿಸಿತು.







