ರಾಜ್ಯದಲ್ಲಿ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ, ರಾಜ್ಯಕ್ಕೆ ಭೇಟಿ ಕೊಟ್ಟಿರೋ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (K C venugopal), ಸಿಎಂ ಸಿದ್ದರಾಮಯ್ಯ (Cm siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (Dem Dk shiakumar) ಜೊತೆಗಿನ ಚರ್ಚೆ ವೇಳೆ ಗೆಲುವಿನ ಟಾಸ್ಕ್ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಉಪಚುನಾವಣೆಯನ್ನ ಹಗುರವಾಗಿ ಪರಿಗಣಿಸಬೇಡಿ. ಶಿಗ್ಗಾವಿ (Shiggavi), ಚನ್ನಪಟ್ಟಣ (Channapattana) ಹಾಗೂ ಸಂಡೂರು (Sanduru) ಗೆಲ್ಲುವುದು ನಮ್ಮ ಗುರಿಯಾಗಿರಲಿ. ಮೂರು ಕ್ಷೇತ್ರಗಳಿಗೂ ಸಚಿವರಿಗೆ ಜವಾಬ್ದಾರಿ ನಿಗದಿ ಮಾಡಿ. ಗೆಲ್ಲುವ ಅಭ್ಯರ್ಥಿಗಳನ್ನ ಗುರುತಿಸುವ ಕೆಲಸವಾಗಲಿ. ಆದಷ್ಟು ಬೇಗ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನ ಕಳುಹಿಸಿಕೊಡಿ ಎಂದು ಸೂಚಿಸಿದ್ದಾರೆ.
ಸುಮಾರು ಒಂದು ಗಂಟೆ ಕಾಲ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ. ಅದಲ್ಲದೇ ಮುಡಾ, ವಾಲ್ಮೀಕಿ ಪ್ರಕರಣಗಳ ಸಂಬಂಧ ಆಗುತ್ತಿರುವ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಲಾಗಿದೆ. ಸಚಿವರು, ಶಾಸಕರು ಸಿಎಂ ಬದಲಾವಣೆ ಕುರಿತು ನೀಡಿರುವ ಬಹಿರಂಗ ಹೇಳಿಕೆಗಳು, ದಲಿತ ಸಿಎಂ ಹೇಳಿಕೆ, ಸಚಿವರ ರಹಸ್ಯ ಸಭೆ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ.