ರಾಜ್ಯದ ಜೀವನದಿ ಕಾವೇರಿ (Cauvery) ಇಂದು ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಿದ್ದಾಳೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಕಾವೇರಿ ಬ್ರಹ್ಮ ಕುಂಡಿಕೆಯಿಂದ ಉಕ್ಕಿ ಬಂದಿದ್ದಾಳೆ.

ಶುಭ ತುಲಾ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ಇಂದು ಬೆಳಗ್ಗೆ ದರ್ಶನ ನೀಡಿದ್ದಾಳೆ. ಇದೇ ವೇಳೇ 9 ಅರ್ಚಕರ ತಂಡ ಮುಂಜಾನೆ 5.30 ರಿಂದ ಪೂಜೆ ಕಾರ್ಯಗಳನ್ನು ನೆರೇರಿಸಿದ್ದು. ಕಾವೇರಿ ಪೂಜೆ, ಹೋಮ ಹವನ, ಮಂತ್ರ ಪಠಣದಿಂದ ಪೂಜೆ ಮಾಡಲಾಯ್ತು.
ಕಾವೇರಿ ಉಕ್ಕಿಬರುವ ಬ್ರಹ್ಮ ಕುಂಡಿಕೆಗೆ ಅರ್ಚಕರ ತಂಡ ಪೂಜೆ ಸಲ್ಲಿಸಿದೆ. ವರ್ಷಕೊಮ್ಮೆ ಘಟಿಸುವ ವಿಸ್ಮಯ ಕಾಣಲು ಭಕ್ತಗಣ ದೊಡ್ಡ ಸಂಖ್ಯೆಯಲ್ಲಿ ನೆರೆದಿತ್ತು. ತೀರ್ಥ ಉದ್ಭವವಾಗುವ ಕ್ಷಣವನ್ನು ಕಣ್ಣುಂಬಿಕೊಂಡ ಭಕ್ತರು ಪುನೀತರಾದರು.