• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾರವಾರ | ಗಣೇಶ ಚತುರ್ಥಿ: ‘ಗುಮಟೆ’, ‘ಶಂಬಳ’ದ ಜೋರು ಸದ್ದು

ಪ್ರತಿಧ್ವನಿ by ಪ್ರತಿಧ್ವನಿ
September 1, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಕಾರವಾರ:ನಗರದ ಮಾರುಕಟ್ಟೆಯಲ್ಲಿ ಈಗ ಗುಮಟೆ, ಶಂಬಳ ವಾದನದ ಸದ್ದು ಜೋರಾಗಿ ಕೇಳಿಸುತ್ತಿದೆ. ಗಣೇಶ ಚತುರ್ಥಿ ಹಬ್ಬ ಕಳೆಗಟ್ಟಿಸುವ ವಾದನಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.ಜಿಲ್ಲೆಯ ಕರಾವಳಿ ಭಾಗದಲ್ಲಿ, ಅದರಲ್ಲಿಯೂ ತಾಲ್ಲೂಕಿನಲ್ಲಿ ಹಬ್ಬದ ಆಚರಣೆಯಲ್ಲಿ ಸಾಂಪ್ರದಾಯಿಕ ಗುಮಟೆ ಮತ್ತು ಶಂಬಳದ ಬಳಕೆ ಚಾಚೂತಪ್ಪದೆ ನಡೆಯುತ್ತದೆ.

ADVERTISEMENT

ಹಬ್ಬ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಅವುಗಳ ಮಾರಾಟ ಚುರುಕುಗೊಳ್ಳುತ್ತದೆ. ಇಲ್ಲಿನ ಜನತಾ ಬಝಾರ್ ಎದುರಿನ ಜಾಗ ಗುಮಟೆ, ಶಂಬಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ.

ಗ್ರಾಮೀಣ ಪ್ರದೇಶದ ವಿವಿಧೆಡೆಯಿಂದ ಬರುವ ಮಾರಾಟಗಾರರು ಇಲ್ಲಿನ ರಸ್ತೆಯ ಬದಿಯಲ್ಲೇ ಕುಳಿತು ಗುಮಟೆ, ಶಂಬಳ ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಮಣ್ಣಿನ ಮಡಕೆಗೆ ಎರಡೂ ಬದಿಯಲ್ಲಿ ಕುರಿಯ ಚರ್ಮವನ್ನು ಬಿಗಿಯಾಗಿ ಕಟ್ಟಿ ‘ಗುಮಟೆ’ ಸಿದ್ಧಪಡಿಸಲಾಗುತ್ತದೆ. ಮರ ಅಥವಾ ಸ್ಟೀಲ್‍ನಿಂದ ಚಂಡೆ ಮಾದರಿಯಂತೆ ಸಿದ್ಧಪಡಿಸಿ ಅದಕ್ಕೆ ಒಂದು ಬದಿಯಲ್ಲಿ ಕುರಿಯ ಚರ್ಮ ಬಿಗಿಯಾಗಿ ಕಟ್ಟಿ ‘ಶಂಬಳ’ ತಯಾರಿಸಲಾಗುತ್ತದೆ.

ಹೀಗೆ ಸಿದ್ಧಗೊಂಡ ವಾದನಗಳನ್ನು ಮಾರಾಟಗಾರರು ಬಡಿಯುತ್ತ ಕುಳಿತರೆ ಅವುಗಳಿಂದ ಹೊರಹೊಮ್ಮುವ ವಾದನ ಗ್ರಾಹಕರನ್ನು ಸೆಳೆಯುತ್ತದೆ ಕಾರವಾರ, ಜೊಯಿಡಾ, ಅಂಕೋಲಾ, ಕುಮಟಾ ಭಾಗದಲ್ಲಿ ಹಬ್ಬದ ಪೂಜೆಯ ವೇಳೆ ಬಳಕೆ ಹೆಚ್ಚಿದ್ದು, ದೂರದ ಊರುಗಳಿಂದ ಬಂದ ಗ್ರಾಹಕರು ಸಾಂಪ್ರದಾಯಿಕ ವಾದನ ಖರೀದಿಗೆ ಮುಂದಾಗುತ್ತಾರೆ.

ಗುಮಟೆ ತಯಾರಿಕೆಗೆ ಹಿಂದೆ ಉಡದ ಚರ್ಮ ಬಳಕೆ ಮಾಡಲಾಗುತ್ತಿತ್ತು ಈಗ ಅವುಗಳನ್ನು ಬಳಸುತ್ತಿಲ್ಲ. ಕುರಿಯ ಚರ್ಮದಿಂದ ಸಿದ್ಧಪಡಿಸಿದ ಗುಮಟೆಗೆ ಬೇಡಿಕೆ ಈಗಲೂ ಹೆಚ್ಚಿದೆ. ₹500 ರಿಂದ ಆರಂಭಿಸಿ ₹2 ಸಾವಿರ ಮೊತ್ತದವರೆಗಿನ ಗುಮಟೆ ಮಾರಾಟ ಮಾಡಲಾಗುತ್ತಿದೆ’ ಎಂದು ಗುಮಟೆ ವ್ಯಾಪಾರಿ ಉದಯ ಗುನಗಾ ಹೇಳಿದರು.

ಚತುರ್ಥಿಗೆ ಹದಿನೈದು ದಿನ ಮುಂಚಿತವಾಗಿ ಶಂಬಳ ಮಾರಾಟ ಆರಂಭಿಸುತ್ತೇವೆ. ಅವುಗಳ ತಯಾರಿಕೆಗೆ ಬೇಕಾದ ಮರದ ಸಾಮಗ್ರಿಯನ್ನು ಉಡುಪಿ ಭಾಗದಿಂದ ತರಿಸಿಕೊಳ್ಳಲಾಗುತ್ತದೆ. ಮಾರುಕಟ್ಟೆಯಲ್ಲೇ ಜನರೆದುರು ಶಂಬಳ ಸಿದ್ಧಪಡಿಸಿ ನೀಡುತ್ತೇವೆ. ಮರದ ಶಂಬಳಕ್ಕೆ ₹2 ಸಾವಿರದಿಂದ ₹2,500 ವೆಚ್ಚವಾಗುತ್ತದೆ. ಸ್ಟೀಲ್‍ನಿಂದ ತಯಾರಿಸಿ ವಾದನಕ್ಕೆ ಕಡಿಮೆ ದರವಿದೆ’ ಎಂದು ವ್ಯಾಪಾರಿ ಮಹೇಶ್ ಹೇಳುತ್ತಾರೆ.

ವ್ಯಾಪಾರಿಸಾಂಪ್ರದಾಯಿಕ ಆಚರಣೆಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ ಗುಮಟೆ ಶಂಬಳದಂತಹ ಸಾಂಪ್ರದಾಯಿಕ ವಾದನಗಳ ಖರೀದಿ ಕಡಿಮೆ ಆಗಿಲ್ಲ ‘ಕೊಂಕಣ ಪ್ರದೇಶದಲ್ಲಿ ಗುಮಟೆ ಶಂಬಳದಂತಹ ಸಾಂಪ್ರದಾಯಿಕ ವಾದನಗಳು ಗಣೇಶ ಚತುರ್ಥಿ ಹಬ್ಬವನ್ನು ಕಳೆಗಟ್ಟುವಂತೆ ಮಾಡುತ್ತವೆ.ಹಬ್ಬದ ವೇಳೆ ಮಹಾನಗರಗಳಲ್ಲಿ ನೆಲೆಸಿರುವ ಯುವಕರೆಲ್ಲ ಊರಿಗೆ ಮರಳುತ್ತಾರೆ.ಆಯಾ ಊರಿನ ಯುವಕರ ಗುಂಪು ಒಂದಾಗಿ ಹಬ್ಬದ ವೇಳೆ ಮೂರ್ತಿ ಪ್ರತಿಷ್ಠಾಪಿಸುವ ಮನೆಗಳಿಗೆ ತೆರಳಿ ಗುಮಟೆ ಬಾರಿಸುತ್ತಾರೆ. ತಾಳಬದ್ಧವಾಗಿ ಬಾರಿಸುವ ಪ್ರಕ್ರಿಯೆಗೆ ‘ಗಮಟೆ ಪಾಂಗ್‘ ಎಂದು ಕರೆಯಲಾಗುತ್ತದೆ.ಅನುಭವಿ ಗುಮಟೆ ಪಾಂಗ್ ಕಲಾವಿದರಿಗೆ ಬೇಡಿಕೆಯೂ ಹೆಚ್ಚು’ ಎನ್ನುತ್ತಾರೆ ಸುನೀಲ ನಾಯ್ಕ. ಕಳೆಗಟ್ಟಿಸುವ ಗುಮಟೆ ಪಾಂಗ್

Tags: Government of KarnatakaGumate and ShambhalaMinistry of Industry
Previous Post

ಮುಡಾ ಮಾಜಿ ಆಯುಕ್ತರ ವಿರುದ್ಧ ದೂರು – ಲೋಕಾಯುಕ್ತಗೆ ದೂರು ಕೊಟ್ಟ ಬಿಜೆಪಿ ಶಾಸಕ ಶ್ರೀವತ್ಸ !

Next Post

ಸಾಂಸ್ಥಿಕ ವೈಫಲ್ಯಗಳ ನಡುವೆ ಮಹಿಳಾ ದೌರ್ಜನ್ಯಗಳ ಸವಾಲು

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

114 ನ್ಯಾಯಾಧೀಶರ ವರ್ಗಾವಣೆ: ವಿನಯ್ ಕುಲಕರ್ಣಿ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೂ ವರ್ಗಾವಣೆ

April 16, 2026
ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

April 16, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
Next Post
ಸಾಂಸ್ಥಿಕ ವೈಫಲ್ಯಗಳ ನಡುವೆ ಮಹಿಳಾ ದೌರ್ಜನ್ಯಗಳ ಸವಾಲು

ಸಾಂಸ್ಥಿಕ ವೈಫಲ್ಯಗಳ ನಡುವೆ ಮಹಿಳಾ ದೌರ್ಜನ್ಯಗಳ ಸವಾಲು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada