ಇಂದು ದೇಶದೆಲ್ಲೆಡೇ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಇವತ್ತು ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಿಸಲಾಗಿದೆ. ರಾಷ್ಟ್ರಪತಿ ಬ್ರೌಪದಿ ಮುರ್ಮು ಸಾರೋಟ್ ನಲ್ಲಿ ಬಂದು ಧ್ವಜಾರೋಹಣ ನೆರವೇರಿಸಿದ್ರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ದ್ರೌಪದಿ ಮುರ್ಮುಗೆ ಸಾಥ್ ನೀಡಿದ್ರು.ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗಿಯಾಗಿ, ಗಣರಾಜ್ಯೋತ್ಸವ ದಿನಾಚರಣೆಯ ವೈಭವವನ್ನ ಕಣ್ಣುಂಬಿಕೊಂಡ್ರು. ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಭಾಗಿಯಾಗಿದ್ರು.
ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯ ಕರ್ತವ್ಯ ಪಥದಲ್ಲಿ ಅದ್ದೂರಿಯಾಗಿ ಪಥಸಂಚಲನ ನಡೀತು. ಪರೇಡ್ನಲ್ಲಿ ದೇಶದ ಮಿಲಿಟರಿ ಶಕ್ತಿ ಜೊತೆಗೆ ಭವ್ಯ ಪರಂಪರೆ, ಸಂಸ್ಕೃತಿಯ ಅನಾವರಣಗೊಂಡಿತು.
ಪಥಸಂಚಲನದಲ್ಲಿ ಮಿಲಿಟರಿ ಪಡೆ, ಸಶಸ್ತ್ರ ಪೊಲೀಸ್ ಪಡೆಗಳು ಭಾಗಿಯಾಗಿದ್ದು. ಇನ್ನು ಸೇನೆಯ ಬ್ಯಾಂಡ್ ಪ್ರದರ್ಶನ ಎಲ್ಲರ ಗಮನ ಸೆಳೀತು. ಇನ್ನು ಗಣ್ಯರು ಪಥಸಂಚಲನದ ವೈಭವನ್ನ ಕಣ್ಣುಂಬಿಕೊಂಡು ಸಂತಸ ವ್ಯಕ್ತಪಡಿಸಿದರು.