ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಪ್ರಚಂಡ ಕುಳ್ಳ ಎಂದೇ ಖ್ಯಾತಿ ಗಳಿಸಿದ್ದ ದ್ವಾರಕೀಶ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ದ್ವಾರಕೀಶ್, ಬೆಳಗ್ಗೆ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಆಗಸ್ಟ್ 19, 1942ರಲ್ಲಿ ಜನಿಸಿದ್ದ ದ್ವಾರಕೀಶ್ ಅವರಿಗೆ 81 ವರ್ಷ ವಯಸ್ಸಾಗಿತ್ತು..
ಬೆಳಗ್ಗೆ 6.30ಗೆ ನಿದ್ರೆಯಿಂದ ಎಚ್ಚರಗೊಂಡಿದ್ದ ನಟ ದ್ವಾರಕೀಶ್, 7 ಗಂಟೆಗೆ ಕಾಫಿ ಕೊಡಿ ಎಂದು ಕೇಳಿ ಕುಡಿದಿದ್ದರು. ಆ ಬಳಿಕ ಮತ್ತೆ ಮಲಗುತ್ತೇವೆ 10 ಗಂಟೆಗೆ ಎಬ್ಬಿಸು ಎಂದು ಹೇಳಿದ್ದರು. ನಾನು ಬೆಳಗ್ಗೆ 9.45 ಎಬ್ಬಿಸಲು ಹೋದಾಗ ರೆಸ್ಪಾನ್ಸ್ ಬರಲಿಲ್ಲ.. ಪಲ್ಸ್ ಚೆಕ್ ಮಾಡಿದೆ, ಆದರೆ ಪಲ್ಸ್ ಸಿಗಲಿಲ್ಲ ಎಂದಿದ್ದಾರೆ ದ್ವಾರಕೀಶ್ ಪುತ್ರ.
ಪಲ್ಸ್ ಸಿಗದಿದ್ದಾಗ ಚೆಸ್ಟ್ ಕಂಪ್ರೇಶನ್ ಮಾಡೋಕೆ ಟ್ರೈ ಮಾಡಿದ ಕುಟುಂಬಸ್ಥರು, ತಕ್ಷಣ ವೈದ್ಯರಿಗೆಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದರು. ವೈದ್ಯರ ತಂಡ ಕೂಡ ಬಂದು ತಪಾಸಣೆ ಮಾಡಿತ್ತು. ಆದರೆ ಅಷ್ಟೊತ್ತಿಗೆ ಆಗಲೇ ಕರುನಾಡು ಕಂಡ ಪ್ರಚಂಡ ಕುಳ್ಳ ತನ್ನ ಅಧ್ಯಾಯ ಮುಗಿಸಿ ವಾಪಸ್ ಹೋಗಿದ್ದರು.
ಇಡೀ ಚಿತ್ರರಂಗ ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಕುಟುಂಬಸ್ಥರಿಗೆ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಅಷ್ಟೇ ಅಲ್ಲದೆ ಹಿರಿಯ ನಟ, ನಟಿಯರು ದ್ವಾರಕೀಶ್ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ನಟಿ ಭವ್ಯ, ಸುಂದರ್ ರಾಜ್ ಸೇರಿದಂತೆ ಹಲವಾರು ಮಂದಿ ಕಂಬನಿ ಮಿಡಿದಿದ್ದಾರೆ. ನಟ ದರ್ಶನ್ ದ್ವಾರಕೀಶ್ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.