ಬೆಂಗಳೂರು: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಥಬ್ದ ಚಿತ್ರಕ್ಕೆ ಅವಕಾಶ ಸಿಗದಿರುವುದು ವಿವಾದಕ್ಕೆ ತಿರುಗಿದೆ. ಈ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ಟ್ಯಾಬ್ಲೋಗೆ ಅವಕಾಶ ಸಿಗದೆ ಇರುವುದನ್ನ ಇಬ್ಬಂದಿ ನೀತಿಯೆಂದೇ ಸುನಿ ಟೀಕಿಸಿದ್ದಾರೆ. ಈ ಬಗ್ಗೆ X ನಲ್ಲಿ ಬರೆದುಕೊಂಡಿರುವ ಸಿಂಪಲ್ ಸುನಿ, “ಸರ್ವರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು. ವಿವಿಧತೆಯಲ್ಲಿ ಏಕತೆ ಭಾರತದ ಹೆಮ್ಮೆ. ಆದರೆ ಈ ಬಾರಿಯ ಪರೇಡ್ ನಲ್ಲಿ ನಮ್ಮ ನೆಚ್ಚಿನ ಕರ್ನಾಟಕ ಟ್ಯಾಬ್ಲೋ ಸ್ತಬ್ಧ ದಿಬ್ಬಣ ಕಾಣೆಯಾಗಿದ್ದು ಮಾತ್ರ ವಿಷಾದನೀಯ. ಪರ್ಯಾಯ ನೀತಿಯಂತೆ ನಮಗೆ ತಪ್ಪಿದ್ದು ಎಂದುಕೊಂಡರೂ ಗುಜರಾತ್ & ಉತ್ತರಪ್ರದೇಶಕ್ಕೆ ಮಾತ್ರ ಪ್ರತಿ ವರ್ಷ ಅವಕಾಶ ದೊರಕುತ್ತಿರುವ ಇಬ್ಬಂದಿ ನೀತಿಗೆ ಮಾತ್ರ ಧಿಕ್ಕಾರ.”

ಹೀಗೆ ಕೇಂದ್ರ ಸರ್ಕಾರ ಕರ್ನಾಟಕದ ಟ್ಯಾಬ್ಲೋಗೆ ಅವಕಾಶ ನೀಡದಿರುವುದನ್ನ ಸಿಂಪಲ್ ಸುನಿ ಖಂಡಿಸಿದ್ದು, ಬಿಜೆಪಿ ನೇತೃತ್ವದ ಸರ್ಕಾರವಿರುವ ಟ್ಯಾಬ್ಲೋಗೆ ಪ್ರತಿ ವರ್ಷ ಅವಕಾಶ ನೀಡುತ್ತಿರುವುದನ್ನೂ ಟೀಕಿಸಿದ್ದಾರೆ













