ನಿನ್ನೆ ಒಂದೇ ದಿನ ರಾಜ್ಯದಲ್ಲಿ 1,785 ಹೊಸ ಕೊರೊನ ವೈರಸ್ ಪ್ರಕರಣಗಳು ಪತ್ತೆಯಾದರೆ ಸೋಂಕಿಗೆ 25ಜನರು ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟುಸೋಂಕಿತರ ಸಂಖ್ಯೆ 29.13 ಲಕ್ಷಕ್ಕೆ ಏರಿದರೆ 28,52,368ಲಕ್ಷ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 36,705ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರು ನಗರದಲ್ಲಿ 414 ಹೊಸ ಪ್ರಕರಣಗಳು ಪತ್ತೆಯಾಗಿದ್ದು ,5ಜನ ಸೋಂಕಿಗೆ ಬಲಿಯಾದರೆ , 554 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ ಉಳಿದಂತೆ ದಕ್ಷಿಣಕನ್ನಡದಲ್ಲಿ 337ಹೊಸ ಪ್ರಕರಣಗಳು ಪತ್ತೆಯಾದರೆ ,ಉಡುಪಿಯಲ್ಲಿ 134, ಹಾಸನದಲ್ಲಿ125 , ಮೈಸೂರಿನಲ್ಲಿ 105 , ಕೊಡಗಿನಲ್ಲಿ 100 ಹೊಸ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆ ಕಂಡಿದ್ದು ಇದರಿಂದ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,414ಕ್ಕೆ ಏರಿಕೆಯಾಗಿದೆ.
ಬೆಳಗಾವಿ ,ದಕ್ಷಿಣ ಕನ್ನಡ, ಕೋಲಾರದಲ್ಲಿ ಸೋಂಕಿಗೆ 3ಜನ ಬಲಿಯಾದರೆ ಮಂಡ್ಯ,ಮೈಸೂರು ಮತ್ತು ಉಡುಪಿಯಲ್ಲಿ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ ಉಳಿದಂತೆ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಇದರಿಂದ ಗುರುವಾರ ಪಾಸಿಟಿವಿಟಿದರವು 1.10% ಕ್ಕೆ ಏರಿಕೆಯಾದರೆ ಸಾವಿನ ಪ್ರಮಾಣವು 1.40% ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾರತದಲ್ಲಿನಿನ್ನೆ ಒಂದೆ ದಿನ 44,643 ಹೊಸ ಪ್ರಕರಣಗಳು ಪತ್ತೆಯಾಗಿದ್ದು , ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 3,18,56,757 ಕ್ಕೆ ತಲುಪಿದೆ, ಆದರೆ ಸಕ್ರಿಯ ಪ್ರಕರಣಗಳು ಸತತ ಮೂರನೇ ದಿನವು ಏರಿಕೆಯನ್ನು ಕಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಮಾಹಿತಿ ಬಿಡುಗಡೆ ಮಾಡಿತ್ತು.
ದೇಶದಲ್ಲಿ 464 ಜನ ಸೋಂಕಿಗೆ ಬಲಿಯಾದರೆ ಒಟ್ಟಾರೆ ಸಾವಿನ ಸಂಖ್ಯೆ 4,26,754 ಲಕ್ಷಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇಕಡ 1.30 ರಷ್ಟಿದ್ದು, ರಾಷ್ಟ್ರದಲ್ಲಿ ಕೋವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.36 ರಷ್ಟು ದಾಖಲಾಗಿದೆ, ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ದತ್ತಾಂಶದಲ್ಲಿ ತಿಳಿಸಲಾಗಿದೆ.
24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ -19 ಕೇಸ್ 3,083 ಪ್ರಕರಣಗಳ ಹೆಚ್ಚಳ ದಾಖಲಾಗಿದೆ.


