ಜೂನ್ 2ರಂದು ರಾಜ್ಯದಲ್ಲಿ ಮುಂಗಾರು ಮಾರುತಗಳು ರಾಜ್ಯದ ಕರಾವಳಿ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಕೇರಳಕ್ಕೆ ಮಾನ್ಸೂನ್ ಎಂಟ್ರಿ ಕೊಟ್ಟಿರುವ ಪರಿಣಾಮ ಅಲ್ಲಿ ಭಾರೀ ಮಳೆ ಆಗುತ್ತಿದೆ. ದೇವರನಾಡಿನ ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇದರ ಬೆನ್ನಲ್ಲೇ ಜೂನ್ 2ರಂದು ಮುಂಗಾರು ಮಾರುತಗಳು ರಾಜ್ಯದ ಕರಾವಳಿ ಪ್ರವೇಶಿಸಲಿವೆ. ಜೂನ್‌ನಲ್ಲಿ ವಾಡಿಕೆ ಮಳೆ ಸುರಿದರೆ, ಜುಲೈನಲ್ಲಿ ಜೋರು ಮಳೆ ಆಗಬಹುದು ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮೇ 19ರಿಂದ ಮಾನ್ಸೂನ್ ಆರಂಭವಾಗಿದೆ. ಪೂರಕ ವಾತಾವರಣ ಇರುವುದು, ಮಾರುತಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ವ್ಯಾಪಿಸಿರುವ ಮಾನ್ಸೂನ್ ವಾಡಿಕೆಗಿಂತ ಮುನ್ನವೇ ಕೇರಳ ಪ್ರವೇಶಿಸಿದೆ. ಆ ಭಾಗದಲ್ಲಿ ಈಗಾಗಲೇ ಭಾರೀ ಮಳೆಯಾಗುತ್ತಿದೆ. ಪ್ರವಾಹ ಪರಿಸ್ಥಿತಿಯೂ ಉಂಟಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.ಜೂ.7ರ ವೇಳೆಗೆ ರಾಜ್ಯಾದ್ಯಂತ ಮುಂಗಾರು ಮಾರುತಗಳು ಪ್ರವೇಶಿಸಲಿವೆ. ಜೂ.2ರಿಂದಲೇ ಮಳೆ ಚುರುಕು ಪಡೆಯಲಿದೆ.
ಪತ್ನಿ ಕಿರುಕುಳಕ್ಕೆ ಬಲಿಯಾದ ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ತಂದೆಯಿಂದ ಪೋಲೀಸರ ಮೇಲೆ ಆರೋಪ..
ಸಮಷ್ಟಿಪುರ್: ಬಿಹಾರದ ಸಮಷ್ಟಿಪುರ ಜಿಲ್ಲೆಯ ವೈನಿ ಪೊಲೀಸ್ ಠಾಣೆಯ ನಿವಾಸಿ, ಮೃತ ಇಂಜಿನಿಯರ್ ಅತುಲ್ ಸುಭಾಷ್ ಅವರ ತಂದೆ ಪವನ್ ಮೋದಿ ಅವರು ಸಮಷ್ಟಿಪುರ ಪೊಲೀಸರ ಕಾರ್ಯಾಚರಣೆಯ...
Read moreDetails