ಜುಲೈನಲ್ಲಿ ಪ್ರವಾಹದಿಂದಾಗಿ ಬಟ್ಟೆ ಮತ್ತು ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ 10,000 ರೂ ಪರಿಹಾರವನ್ನು ನೀಡುವುದಾಗಿ ರಾಜ್ಯ ಸರ್ಕಾರವು ಆದೇಶಿಸಿದೆ. ಇದು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್‌ಡಿಆರ್‌ಎಫ್) ಅಡಿಯಲ್ಲಿ ರೂ 3,800 ಮತ್ತು ರಾಜ್ಯ ಸರ್ಕಾರ ಬೊಕ್ಕಸದಿಂದ ರೂ 6,200 ಅನ್ನು ನೀಡಲಿದೆ.
11 ಜಿಲ್ಲೆಗಳಾದ್ಯಂತ 47 ತಾಲ್ಲೂಕುಗಳಲ್ಲಿ ಭಾರೀ ಮಳೆಯಿಂದಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ.
ಪ್ರವಾಹದಿಂದಾಗಿ ಮನೆಗಳಿಗೆ ಹಾನಿಯಾದ ಜನರಿಗೆ ಪರಿಹಾರವನ್ನು ಸರ್ಕಾರವು ಆದೇಶಿಸಿದೆ.
ಪರಿಹಾರವನ್ನು ನಿರ್ಧರಿಸಲು ಹಾನಿಯನ್ನು ನಾಲ್ಕು ರೀತಿ ವರ್ಗೀಕರಿಸಲಾಗಿದೆ. ಶೇ .75 ಮತ್ತು ಹೆಚ್ಚು ಹಾನಿಗೊಳಗಾದ ಮನೆಗಳು ವರ್ಗ ಎ, ರೂ. 95,100 ರೂ. ರಿಂದ ರೂ. 5 ಲಕ್ಷ ನೀಡಬಹದು.
25-75% ವರ್ಗ ಬಿ, ಶೇ. 25-75 ರ ನಡುವೆ ಹಾನಿಗೊಳಗಾದ ಮನೆಗಳಿಗೆ ರಿಪೇರಿ ಅಗತ್ಯವಿರುತ್ತದೆ ರೂ. 95,100 ರಿಂದ 3 ಲಕ್ಷ ರೂ ನೀಡಬಹದು. 15-25 ಶೇಕಡ ಭಾಗಶಃ ಹಾನಿ ಹೊಂದಿರುವ ಮನೆಗಳು (ವರ್ಗ C) 5,200 ರೂ.ಗಳಿಂದ 50,000 ರೂ ನೀಡಬಹದು ಎಂದಿದೆ. ವರ್ಗ ಸಿ, ಪ್ರವಾಹದಿಂದಾಗಿ ಬಟ್ಟೆ ಮತ್ತು ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ 10,000 ರೂ ಪರಿಹಾರವನ್ನು ನೀಡುವುದಾಗಿ ರಾಜ್ಯ ಸರ್ಕಾರವು ಆದೇಶಿಸಿದೆ.
ಇದು ಕಳೆದ ವರ್ಷ ಸರ್ಕಾರ ಅನುಸರಿಸಿದ ಪರಿಹಾರ ಕ್ರಮವಾಗಿದ್ದು. ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ನಿಯಮಗಳನ್ನು ಮೀರಿ ಪಾವತಿಸುತ್ತಿರುವುದರಿಂದ ಹೊಸ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶವು ಉಪ ಆಯುಕ್ತರು ಸರ್ಕಾರ ನಿರ್ಧರಿಸಿದ ಪರಿಹಾರದ ಅಂಕಿಅಂಶಗಳನ್ನು ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಬದ್ಧವಾಗಿರುವುದನ್ನು ಖಚಿತಪಡಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ (ಕಂದಾಯ) ತುಷಾರ್ ಗಿರಿನಾಥ್ ಹೇಳಿದ್ದಾರೆ.