ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ(UAS) 56ನೇ ವಾರ್ಷಿಕ ಘಟಿಕೋತ್ಸವ ಶುಕ್ರವಾರ ನಡೆಯಲಿದ್ದು ಇದೇ ಮೊದಲ ಭಾರಿಗೆ ಪ್ರಗತಿಪರ ರೈತರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಉಪಕುಲಪತಿಗಳಾದ ಎಸ್.ರಾಜೇಂದ್ರ ಪ್ರಸಾದ್ ನಾವು ಈ ಭಾರೀ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ವಾಸಿಸುವ ಎನ್.ಸಿ.ಪಾಟೀಲ್ ಎಂಬುವವರನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಎನ್.ಸಿ.ಪಾಟೀಲ್ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ವಾಸವಿದ್ದು ಇವರ ಬಳಿ 75 ಎಕರೆ ಕೃಷಿ ಜಮೀನನ್ನು ಹೊಂದಿದ್ದಾರೆ. ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಜಿ ಪದವಿದರರಾಗಿದ್ದು ಆಧುನಿಕ ವಿಧಗಳನ್ನು ಬಳಸಿ ವಿವಿಧ ತಳಿಯ ಹಣ್ಣು ಹಾಗೂ ರಾಗಿಯನ್ನು ಬೆಳೆದಿದ್ದಾರೆ.
ಇವರು ತೆಲಂಗಾಣ, ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ ಎಂದು ಉಪಕುಲಪತಿಗಳಾದ ಎಸ್.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಘಟಿಕೋತ್ಸವದಲ್ಲಿ ಒಟ್ಟು 1,144 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಿದ್ದು ಈ ಪೈಕಿ 751 ಮಂದಿ ಯುಜಿ ಪ್ರಮಾಣ ಪತ್ರ ಪಡೆಯಲಿದ್ದು, 304 ಮಂದಿ ಪಿಜಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ಒಟ್ಟು 156 ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ 90 ಗೌಡಾ ಪ್ರಧಾನ ಮಾಡಲಾಗುವುದು ಎಂದು ಉಪಕುಲಪತಿಗಳು ಹೇಳಿದ್ದಾರೆ.