ಆರಂಭಿಕ ಬ್ಯಟ್ಸ್ಮ್ಯಾನ್ ಆರ್.ಸಮರ್ಥ್ ಮಧ್ಯಮಕ್ರಮಾಂಕ ಬ್ಯಾಟ್ಸ್ಮ್ಯಾನ್ ಶ್ರೇಯಸ್ ಗೋಪಾಲ್ಉಪಯುಕ್ತ ಬ್ಯಾಟಿಂಗ್ ಫಲವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂಜಾಬ್ ಎದುರು ಕರ್ನಾಟಕ ಗೆಲುವು 4 ವಿಕೆಟ್ಗಳ ಗೆಲುವು ಸಾಧಿಸಿ ಸೆಮಿಫಿನಾಲೆಗೆ ಲಗ್ಗೆ ಇಟ್ಟಿದೆ.
ಅಹಮದಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಕರ್ನಾಟಕ ತಂಡವು ವಿದ್ವತ್ ಕಾವೇರಪ್ಪ(10-1-40-4) ಬಿಗಿ ಬೌಲಿಂಗ್ ದಾಳಿಯ ಫಲವಾಗಿ ಪಂಜಾಬ್ ತಂಡವು 50 ಓಬರ್ಗಳಲ್ಲಿ 235 ರನ್ಗಳಿಗೆ ಸರ್ವಪತನವಾಯಿತ್ತು.
ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡವು ಆರಂಭಿಕ ಆರ್.ಸಮರ್ಥ್(71 ರನ್, 106 ಎಸೆತ, ಬೌಂಡರಿ), ಶ್ರೇಯಸ್ ಗೋಪಾಲ್ (42 ರನ್, 52 ಎಸೆತ, 4 ಬೌಂಡರಿ) ಉಪಯುಕ್ತ ಆಟದ ಫಲವಾಗಿ 49.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 238 ರನ್ಗಳಿಸಿ ಗೆಲುವಿನ ನಗೆ ಬೀರಿತ್ತು.