• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಇಂಧನ ಇಲಾಖೆಯಲ್ಲಿ ಭಾರೀ ಬದಲಾವಣೆ.. ತಿದ್ದಿ ನಡೆಯೋ ಪ್ರಯತ್ನ..

ಕೃಷ್ಣ ಮಣಿ by ಕೃಷ್ಣ ಮಣಿ
December 31, 2023
in ಕರ್ನಾಟಕ
0
ಇಂಧನ ಇಲಾಖೆಯಲ್ಲಿ ಭಾರೀ ಬದಲಾವಣೆ.. ತಿದ್ದಿ ನಡೆಯೋ ಪ್ರಯತ್ನ..
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಸಾಕಷ್ಟು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ನೆನಪಿನಲ್ಲಿ ಉಳಿಯುವುದು ಕೆಲವು ಮಾತ್ರ. ಕಾರಣ ತಾನು ಮಾಡದೆ ಇರುವ ತಪ್ಪಿಗೆ ಪ್ರಾಣ ಕೊಟ್ಟ ಘಟನೆಗಳು ಎಲ್ಲರ ಮನಸ್ಸಲ್ಲೂ ಹಚ್ಚ ಹಸಿರಾಗಿ ಇರುತ್ತದೆ. ಈ ರೀತಿಯ ಪ್ರಕರಣಗಳ ಸಾಲಿಗೆ ನವೆಂಬರ್​ ಮಧ್ಯಂತರದಲ್ಲಿ ನಡೆದೆ ಕರೆಂಟ್​ ಶಾಕ್​ ಪ್ರಕರಣ ನಿಲ್ಲುತ್ತದೆ. ಈ ರೀತಿಯ ಘಟನೆಗಳು ಸರ್ಕಾರದ ಕಣ್ಣು ತೆರೆಸುವುದಕ್ಕೂ ಮುನ್ನಡಿ ಬರೆಯುತ್ತವೆ. ನವೆಂಬರ್​ 19ರಂದು ನಡೆದ ವಿದ್ಯುತ್​ ಅವಘಡದ ಬಳಿಕ ಇಂಧನ ಇಲಾಖೆ ಎಚ್ಚೆತ್ತುಕೊಂಡಿದೆ. 19 ಮಹತ್ವದ ಬದಲಾವಣೆಗಳನ್ನು ಮಾಡಲು ಅಧಿಕೃತವಾಗಿ ಅದೇಶ ಮಾಡಿದೆ.

ADVERTISEMENT

ತನಿಖಾ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ..!

ನವೆಂಬರ್​​ 19ರಂದು ತಮಿಳುನಾಡಿನ ದಂಪತಿ ಬೆಂಗಳೂರಿಗೆ ವಾಪಸ್​ ಆಗಿದ್ದರು. ಈ ವೇಳೆ ಬಸ್​ ಇಳಿದು ಕಾಡುಗೋಡಿ ಬಳಿಕ ಹೋಫ್ ಫಾರ್ಮ್​​ ಬಳಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುವಾಗ ವಿದ್ಯುತ್​ ತಂತಿ ತುಂಡಾಗಿ ಬಿದ್ದಿತ್ತು. ಪಾದಚಾರಿ ಮಾರ್ಗದಲ್ಲೇ ನಡೆದುಕೊಂಡು ಹೋಗ್ತಿದ್ದ ಮಹಿಳೆ ತುಳಿದು ಕರೆಂಟ್​ ಶಾಕ್​ಗೆ ಒಳಗಾಗಿದ್ದರು. ಆ ಮಹಿಳೆ ಎತ್ತಿಕೊಂಡಿದ್ದ ಮಗು ಕೂಡ ಕರೆಂಟ್​ ಶಾಕ್​ಗೆ ಒಳಗಾಗಿತ್ತು. ಕೆಲವೇ ಕ್ಷಣಗಳಲ್ಲಿ ಮಹಿಳೆ ಹಾಗು ಮಗು ಸುಟ್ಟು ಹೋಗಿದ್ದರು. ಈ ಸಾವಿಗೆ ಇಂಧನ ಇಲಾಖೆ ( BESCOM ) ನಿರ್ಲಕ್ಷ್ಯವೇ ಕಾರಣ ಎನ್ನುವುದು ಮೇಲ್ನೋಟಕ್ಕೇ ಸಾಬೀತಾಗಿತ್ತು. ಪರಿಹಾರ ಕೊಟ್ಟಿದ್ದ ಸರ್ಕಾರ ತಪ್ಪಿನ ಹೊಣೆ ಜೊತೆಗೆ ಸಮಸ್ಯೆ ಏನು..? ಪರಿಹಾರ ಹೇಗೆ ಅನ್ನೋ ಬಗ್ಗೆ ತನಿಖಾ ಸಮಿತಿ ನೇಮಕ ಮಾಡಿತ್ತು. ಇದೀಗ ವರದಿ ಸಲ್ಲಿಕೆಯಾಗಿದ್ದು, ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.

ಹೇಳಿದ್ದ ಮಾತನ್ನು ಉಳಿಸಿಕೊಂಡ ಸಚಿವ ಕೆ.ಜೆ ಜಾರ್ಜ್​..

ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್​ ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದರು. ಅದೇ ಸಮಯದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳು ಆಗದಂತೆ ಏನು ಮಾಡಬೇಕು ಅನ್ನೋ ಬಗ್ಗೆಯೂ ತನಿಖೆ ಮಾಡಿ ವರದಿ ಪಡೆಯುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದಿದ್ದರು. ಅದರಂತೆ ಬೆಂಗಳೂರು ಪೂರ್ವ ವಿಭಾಗದ ಉಪ ವಿದ್ಯುತ್​ ಪರಿ ವೀಕ್ಷಕರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿತ್ತು. ಇದೀಗ ವರದಿ ಸಲ್ಲಿಕೆಯಾಗಿದ್ದು, ಇಂಧನ ಇಲಾಖೆ ಮಾಡುತ್ತಿರುವ ತಪ್ಪುಗಳನ್ನು ಎತ್ತಿ ತೋರಿಸಿದೆ. ಜೊತೆಗೆ ಇಂಧನ ಇಲಾಖೆ ಮೈ ಮರೆತಿರುವ ಬಗ್ಗೆಯೂ ಚಾಟಿ ಬೀಸಿದೆ. ಮಾಡಬೇಕಿದ್ದ ಕೆಲಸವನ್ನು ಮಾಡಿಲ್ಲ ಅನ್ನೋ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ಕಿಂಚಿತ್ತೂ ತಡ ಮಾಡದೆ ಎಲ್ಲಾ ಶಿಫಾರಸುಗಳ ಜಾರಿಗೆ ಇಂಧನ ಇಲಾಖೆ ಹಾಗು ಸಚಿವ ಕೆ.ಜೆ ಜಾರ್ಜ್​ ನಿರ್ಧಾರ ಮಾಡಿದ್ದಾರೆ.

19 ಶಿಫಾರಸುಗಳಲ್ಲಿ ಏನೆಲ್ಲಾ ಸೇರಿದೆ ಗೊತ್ತಾ..?

ವಿದ್ಯುತ್​ ಸರಭರಾಜು ಮಾಡುವ ತಂತಿಗಳನ್ನು ಪರಿಶೀಲಿಸಿ ಬದಲಾವಣೆ ಮಾಡಬೇಕು. ಈ ಪ್ರಕರಣದಲ್ಲಿ ಬದಲಾವಣೆ ಮಾಡಿಲ್ಲ ಎನ್ನಲಾಗಿದೆ. ಈ ರೀತಿಯ ಅವಘಡಗಳು ಸಂಭವಿಸಿದಾಗ ಸೇಫ್ಟಿ ಸಿಸ್ಟಂ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಂದು ಮುಂದಿನ ದಿನಗಳಲ್ಲೂ ಈ ರೀತಿ ವೈರ್​ ತುಂಡಾಗಿ ಬಿದ್ದಾಗ ಕೂಡಲೇ ಅರ್ತ್​​ ಗಾರ್ಡಿಂಗ್​ ವ್ಯವಸ್ಥೆ ಇರಬೇಕು. 11 KV ಹಾಗು 400 V ವಿದ್ಯುತ್​ ಸರಭರಾಜು ಮಾರ್ಗದಲ್ಲಿ ವಿದ್ಯುತ್​ ವೈರ್​ ಜಾಯಿಂಟ್​ಗಳನ್ನು JE, AE ಉಸ್ತುವಾರಿಯಲ್ಲಿ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಲೋ ಎಂಡ್​ ಥರ್ಮೋ ಕ್ಯಾಮೆರಾ ಬಳಸಿ ವಯರ್​ ಜಾಯಿಂಟ್​​ ಪರಿಶೀಲನೆ ಮಾಡ್ಬೇಕು. ಇನ್ನು ವಿದ್ಯುತ್​ ಕಂಬಗಳ ಮೇಲೆ ಸಾಕಷ್ಟು ವೈರ್​ಗಳು ಇರಲಿದ್ದು, ಮುಂದಿನಗಳಲ್ಲಿ ಯಾವುದೇ ಖಾಸಗಿ ವೈರ್​ಗಳನ್ನು ಕಂಬಕ್ಕೆ ಹಾಕದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. 6 ತಿಂಗಳಿಗೆ ಒಮ್ಮೆ ತಪಾಸಣೆ ನಡೆಸಿ ಅಪಘಾತಕ್ಕೆ ಕಾರಣ ಏನು ಅನ್ನೋದನ್ನು ಮನವರಿಕೆ ಮಾಡಿಕೊಡಬೇಕು. ಅನ್ನೋ ಅಂಶಗಳ ಜೊತೆಗೆ ಒಟ್ಟು 19 ಅಂಶಗಳನ್ನು ಜಾರಿ ಮಾಡುವಂತೆ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ನೋಡಿಗಾದ ಇಂಧನ ಇಲಾಖೆಗೆ ತಪ್ಪಿನ ಅರಿವಾಗಿದೆ. ಆಗಿರುವ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದೆ. ಈ ಬೆಳವಣಿಗೆ ಎಲ್ಲಾ ಇಲಾಖೆಗಳಲ್ಲೂ ಆಗಬೇಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಿರಲಿ, ತಜ್ಞರ ಸಮಿತಿ ಕೊಟ್ಟಿರುಯವ ವರದಿ ಮತ್ತೆ ಮತ್ತೆ ಉಲ್ಲಂಘನೆ ಆಗದಂತೆ ಇಂಧನ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಲಿ ಅನ್ನೋದು ಪ್ರತಿಧ್ವನಬಿ ಕಾಳಜಿ ಕೂಡ ಆಗಿದೆ.

ಕೃಷ್ಣಮಣಿ

Tags: babyBescomdiedelectricityEnergy ministryExpert committeeImplimentKEBKJ GergemotherOrderreportಇಂಧನ ಇಲಾಖೆಕೆ.ಜೆ ಜಾರ್ಜ್ದುರಂತಮುನ್ನೆಚ್ಚರಿಕೆಸಿದ್ದರಾಮಯ್ಯ
Previous Post

ತಪ್ಪಿನ ಬಳಿಕ ಎಚ್ಚೆತ್ತುಕೊಂಡ ಇಂಧನ ಇಲಾಖೆ..! ಮಹತ್ವದ ಬದಲಾವಣೆಗೆ ಆದೇಶ..

Next Post

ಬನಾರಸ್ ವಿವಿಯಲ್ಲಿ ಲೈಂಗಿಕ ದೌರ್ಜನ್ಯ : ಬಂಧಿತ ಮೂವರು ಬಿಜೆಪಿಯವರೇ : ಅಖಿಲೇಶ್ ಟೀಕೆ

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ಬನಾರಸ್ ವಿವಿಯಲ್ಲಿ ಲೈಂಗಿಕ ದೌರ್ಜನ್ಯ : ಬಂಧಿತ ಮೂವರು ಬಿಜೆಪಿಯವರೇ : ಅಖಿಲೇಶ್ ಟೀಕೆ

ಬನಾರಸ್ ವಿವಿಯಲ್ಲಿ ಲೈಂಗಿಕ ದೌರ್ಜನ್ಯ : ಬಂಧಿತ ಮೂವರು ಬಿಜೆಪಿಯವರೇ : ಅಖಿಲೇಶ್ ಟೀಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada