
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ಖಂಡಿಸಿ, ಇಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು.. ವಾಟಾಳ್ ನಾಗರಾಜ್ ಕರೆಕೊಟ್ಟಿದ್ದ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು.. ಬೆಂಗಳೂರಿನಲ್ಲಿ ವಾಟಾಳ್ ಸೇರಿದಂತೆ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ರೆ, ಇನ್ನುಳಿದಂತೆ ಎಲ್ಲವೂ ಸಹಜವಾಗಿತ್ತು. ಬಸ್, ಕಾರು, ಬೈಕ್ ಸೇರಿ ವಾಹನಗಳ ಸಂಚಾರ ಸಹಜವಾಗಿತ್ತು. ಅಲ್ಲಲ್ಲಿ ಕನ್ನಡ ಪರ ಸಂಘಟನೆಗಳು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ್ರೆ, ಇನ್ನುಳಿದಂತೆ ವ್ಯಾಪಾರ ವಹಿವಾಟು ಎಂದಿನಂತೆ ಇತ್ತು. ಪ್ರತಿಭಟನೆಯಲ್ಲಿ ಎಂಇಎಸ್ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ರು.

ಕರ್ನಾಟಕ ಬಂದ್ಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.. ಬೆಂಗಳೂರಿನಲ್ಲಿ ಎಂದಿನಂತೆ ವಾಹನ ಸಂಚಾರ ಇತ್ತು. ವಾಟಾಳ್ ನಾಗರಾಜ್ ಹಾಗೂ ಸಾರಾ ಗೋವಿಂದ್ ನೇತೃತ್ವದಲ್ಲಿ ಟೌನ್ಹೌಲ್ನಿಂದ ಫ್ರೀಡಂಪಾರ್ಕ್ವರೆಗೆ ರ್ಯಾಲಿ ಕರೆ ಕೊಟ್ರಿದ್ರು.. ಆದ್ರೆ ವಾಟಾಳ್ ನಾಗರಾಜ್ ಟೌನ್ಹಾಲ್ಗೆ ಬರ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದ್ರು.. ವಾಟಾಳ್ ನಾಗರಾಜ್ ಜೊತೆ ಬಂದಿದ್ದ ಕಾರ್ಯಕರ್ತರನ್ನ ವಶಕ್ಕೆ ಪಡೆದು ಕರೆದೊಯ್ದ್ರು.. ಇನ್ನು ವಾಟಾಳ್ ಬಂಧನಕ್ಕೂ ಮುನ್ನ ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ರು.
ವಾಟಾಳ್ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಬಂದ್ ಇಡೀ ರಾಜ್ಯಾದ್ಯಂತ ಯಶಸ್ವಿಯಾಗಿದೆ.. ಎಲ್ಲಾ ಕನ್ನಡ ಪರ ಸಂಘಟನೆಗಳಿಗೂ ಅಭಿನಂದನೆ ಸಲ್ಲಿಸ್ತೇನೆ.. ಕೆಲವು ಕಡೆ ಹೋಟೆಲ್ ತೆರೆದಿದ್ದಾರೆ.. ಕೆಲವು ಕಡೆ ಬಸ್ ಓಡಾಡ್ತಿದೆ.. ಆದ್ರೆ ಜನರಿಲ್ಲ.. ಒಟ್ಟಾರೆ ಕನ್ನಡ ಒಕ್ಕೂಟದ ಹೋರಾಟಗಾರರು ಕರೆ ನೀಡಿದ ಬಂದ್ ಯಶಸ್ವಿಯಾಗಿದೆ. ಆದ್ರೆ ಕಮಿಷನರ್ ಬಂದ್ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ಆದ್ರೂ, ನಮ್ಮ ಹೋರಾಟಕ್ಕೆ ಅದ್ಭುತ ಬೆಂಬಲ ಸಿಕ್ಕಿದೆ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಸಾರಾ ಗೋವಿಂದ್ ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ, ವಿಜಯಸೇನೆ ಸಂಘಟನೆ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದೆ.. ಎಂಇಎಸ್ ಪುಂಡರಿಗೆ ತಿಥಿ ಮಾಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಧಿ ಮೇಲೆ ತಿಥಿ ಪದಾರ್ಥಗಳನ್ನ ಇಟ್ಟು, ಎಂಇಎಸ್ ಪುಂಡರ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಆಗಮಿಸಿದ ಕನ್ನಡ ಪರ ಸಂಘಟನೆಗಳು, ಸಾರಿಗೆ ನೌಕರರು ಬಂದ್ಗೆ ಬೆಂಬಲ ಕೊಡುವಂತೆ ಮನವೊಲಿಸಿದ್ದಾರೆ. ಆದ್ರೆ ಪೊಲೀಸರು ಕಾರ್ಯಕರ್ತರನ್ನ ತಡೆದಿದ್ದು, ಮೆಜೆಸ್ಟಿಕ್ ನಿಲ್ದಾಣದ ಹೊರ ಭಾಗದಲ್ಲೇ ಕನ್ನಡ ಪರ ಸಂಘಟನೆಗಳ ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ.