ಬೆಂಗಳೂರು: ಮೇ.22 ; ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ (Congress Government) ಶನಿವಾರ ಅಸ್ತಿತ್ವಕ್ಕೆ ಬಂದಿದೆ. ಇದರಂತೆ, ಹೊಸ ಸರ್ಕಾರ ಇಂದಿನಿಂದ (ಮೇ22) ಮೂರು ದಿನಗಳಕಾಲ ಕರ್ನಾಟ ವಿಧಾಸಭಾ ಅಧಿವೇಶನವನ್ನು ನಡೆಸಲಿದೆ. ಇದು ಕಾಂಗ್ರೆಸ್ ಸರ್ಕಾರದ ಮೊದಲ ವಿಧಾನಸಭಾ ಕಲಾಪವಾಗಿದ್ದು, ಇದ್ರಲ್ಲಿ ನೂತನ ಸದಸ್ಯರ ಪ್ರಮಾಣ ವಚನ ಮತ್ತು ವಿಧಾನಸಭಾ ಸ್ಪೀಕರ್ ಆಯ್ಕೆ ಈ ಅಧಿವೇಶನ ಮುಖ್ಯ ಕಾರ್ಯಸೂಚಿಯಾಗಿದೆ.
ಇಂದು ಮತ್ತು ನಾಳೆ ವಿಧಾನಸಭೆಯ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ನಡೆಯಲಿದೆ. ಈ ಪ್ರಮಾಣ ವಚನ ಬೋಧನೆ ಕಾರ್ಯವನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ನೆರವೇರಿಲಿಸದ್ದಾರೆ. ಇದಾಗಿ ಮೂರನೇ ದಿನ ವಿಧಾನಸಭೆಯ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹಿಂದಿನ ವಿಧಾನಸಭೆಯ ಕಾಲಾವಧಿ ಮೇ 23ಕ್ಕೆ ಮುಕ್ತಾಯವಾಗುತ್ತದೆ. ಅದರೊಳಗೆ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ನಡೆಯಲಿದೆ.
ಶನಿವಾರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನ ಕರೆಯಲು ಹಾಗೂ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲು ಸರ್ಕಾರ ತೀರ್ಮಾನಿಸಿತು. ಈ ಸಂಬಂಧ ರಾಜ್ಯಪಾಲರು ಅಧಿಕೃತ ಆದೇಶ ಹೊರಡಿಸಿದ್ದಾರೆ.