• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ: ಕ್ರಿಯಾ ಯೋಜನೆ ಬಿಡುಗಡೆ

ಪ್ರತಿಧ್ವನಿ by ಪ್ರತಿಧ್ವನಿ
March 7, 2023
in Top Story, ಕರ್ನಾಟಕ
0
1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ: ಕ್ರಿಯಾ ಯೋಜನೆ ಬಿಡುಗಡೆ
Share on WhatsAppShare on FacebookShare on Telegram


ಬೆಂಗಳೂರು: 1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಅಭಿವೃದ್ಧಿ ಪಡಿಸಲು ರೂಪಿಸಿದ ಕ್ರಿಯಾಯೋಜನೆಯು ಈ ಗುರಿಸಾಧನೆಯತ್ತ ಸರಿಯಾದ ದಿಸೆಯಲ್ಲಿ ಸಾಗಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವಿವಿಧ ವರದಿಗಳು ಹಾಗೂ ಪ್ರಕಟಣೆಗಳು, 1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಗುರಿ ಸಾಧನೆಯ ಕ್ರಿಯಾ ಯೋಜನೆ ಹಾಗೂ ರಾಜ್ಯದ ಉದ್ಯೋಗ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಉದ್ಯೋಗ ಸೃಜನೆ ಹಾಗೂ ಕೌಶಲ್ಯಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ಜಾರಿಗೊಳಿಸಿದೆ. ಇದರೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಸಾಂಸ್ಥೀಕರಣದ ಮೂಲಕ ಗುಣಮಟ್ಟ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT


ದುಡಿಯುವ ವರ್ಗ ಸಮಾಜದ ಪಿರಮಿಡ್‌ ನ ತಳಹದಿಯಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳೆಯರು, ಯುವಕರು ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸರ್ಕಾರ ಹೆಚ್ಚಿನ ಬೆಂಬಲ ನೀಡುತ್ತಿದೆ. ಇದಲ್ಲದೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ವಿವರಿಸಿದರು.
1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಕ್ರಿಯಾ ಯೋಜನೆ ಹಾಗೂ ಉದ್ಯೋಗ ವರದಿ ನೀಡುವಲ್ಲಿ ಸಹಕರಿಸಿದ ಎಲ್ಲ ಅಧಿಕಾರಿಗಳೂ ಹಾಗೂ FICCI ಪ್ರತಿನಿಧಿಗಳು ಮತ್ತು ಇತರ ತಜ್ಞರ ಸಹಯೋಗವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ಸಭೆಯಲ್ಲಿ ಮಾತನಾಡಿದ ಟಿ.ವಿ. ಮೋಹನ್‌ ದಾಸ್‌ ಪೈ ಅವರು ರಾಜ್ಯದಲ್ಲಿ ಉದ್ಯೋಗ ಸೃಜನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ರಾಜ್ಯದ ಅಭಿವೃದ್ಧಿ ಮಾದರಿಯು ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಯುವ ಜನೋತ್ಸವ 2023ರಲ್ಲಿ ಪ್ರಪ್ರಥಮ ಬಾರಿಗೆ ಯುವ ಸಮ್ಮೇಳನದ ಚಟುವಟಿಕೆಗಳನ್ನು ಒಳಗೊಂಡ ಕಾಫೀ ಟೇಬಲ್‌ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ನವಭಾರತಕ್ಕೆ ನವ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯಲ್ಲಿ(SITK) 8 ತಜ್ಞರನ್ನು ಆಯ್ಕೆ ಮಾಡಲು ಪೋರ್ಟಲ್‌ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲು, ಪೋರ್ಟಲ್‌ನ ಉದ್ಘಾಟನೆ ಹಾಗೂ SITK ಲಾಂಛನದ ಲೋಕಾರ್ಪಣೆ ಮಾಡಲಾಯಿತು. ಕರ್ನಾಟಕ ರಾಜ್ಯದ 26 ಅತ್ಯುತ್ತಮ ಆಡಳಿತ ಅಭ್ಯಾಸಗಳಿರುವ ಕೈಪಿಡಿಯನ್ನು ಮುಖ್ಯ ಮಂತ್ರಿಗಳು ಬಿಡುಗಡೆ ಮಾಡಿದರು. ಕರ್ನಾಟಕ ಅಂಕಿ ಅಂಶಗಳ ನೋಟ 2021-22 ನ್ನು ಬಿಡುಗಡೆ ಮಾಡಲಾಯಿತು. ಸಾಂಖ್ಯಿಕ ಮತ್ತು ಆರ್ಥಿಕ ನಿರ್ದೇಶನಾಲಯದ ಸಹಯೋಗದೊಂದಿಗೆ Federation of Indian Chambers of Commerce & Industry (FICCI) ಮೂಲಕ ತಯಾರಿಸಲಾದ ಕರ್ನಾಟಕ ಉದ್ಯೋಗಗಳ ವರದಿ (job report) ಯನ್ನು ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಟಿ.ವಿ. ಮೋಹನ್ ದಾಸ್ ಪೈ, ನಿಶಾ ಹೊಳ್ಳ, ಅಜಿತ್‌ ಐಸಾಕ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Tags: Basavaraja Bommaiಬಿಜೆಪಿ
Previous Post

ಸಿದ್ಧಿ ಪುರುಷರ ಕೈವಾರ ತಾತಯ್ಯ ಮಹಾ ಕಾಲಜ್ಞಾನಿಗಳು: ರಘು ಕೌಟಿಲ್ಯ

Next Post

ಬೀದರ್‌’ನಲ್ಲಿ ಮಹಿಳೆಯರಿಗೆ ಉಚಿತ ಕುಕ್ಕರ್ ಹಂಚಿಕೆ ; ಕಾಲ್ತುಳಿತ ಸಂಭವಿಸಿ ಇಬ್ಬರ‌ ಸ್ಥಿತಿ ಗಂಭೀರ

Related Posts

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   
ಕರ್ನಾಟಕ

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

by ಪ್ರತಿಧ್ವನಿ
May 1, 2026
0

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆಡಿ ಚಿತ್ರ ಏಪ್ರಿಲ್ 30ರಂದು ಭರ್ಜರಿಯಾಗಿ ಬಿಡುಗಡೆಯಾಗಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ...

Read moreDetails
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್  

May 1, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
Next Post
ಬೀದರ್‌’ನಲ್ಲಿ ಮಹಿಳೆಯರಿಗೆ ಉಚಿತ ಕುಕ್ಕರ್ ಹಂಚಿಕೆ ; ಕಾಲ್ತುಳಿತ ಸಂಭವಿಸಿ ಇಬ್ಬರ‌ ಸ್ಥಿತಿ ಗಂಭೀರ

ಬೀದರ್‌'ನಲ್ಲಿ ಮಹಿಳೆಯರಿಗೆ ಉಚಿತ ಕುಕ್ಕರ್ ಹಂಚಿಕೆ ; ಕಾಲ್ತುಳಿತ ಸಂಭವಿಸಿ ಇಬ್ಬರ‌ ಸ್ಥಿತಿ ಗಂಭೀರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada