• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿದ್ಧಿ ಪುರುಷರ ಕೈವಾರ ತಾತಯ್ಯ ಮಹಾ ಕಾಲಜ್ಞಾನಿಗಳು: ರಘು ಕೌಟಿಲ್ಯ

ಪ್ರತಿಧ್ವನಿ by ಪ್ರತಿಧ್ವನಿ
March 7, 2023
in Top Story, ಇತರೆ / Others
0
ಸಿದ್ಧಿ ಪುರುಷರ ಕೈವಾರ ತಾತಯ್ಯ ಮಹಾ ಕಾಲಜ್ಞಾನಿಗಳು: ರಘು ಕೌಟಿಲ್ಯ
Share on WhatsAppShare on FacebookShare on Telegram

ಮೈಸೂರು: ರತದಲ್ಲಿ ಅನೇಕ ಅವತಾರ ಪುರುಷರು ಜನಿಸಿದ್ದಾರೆ. ಅದರಲ್ಲೂ ಕನ್ನಡ ನಾಡಿನಲ್ಲಿ ಅನೇಕ ಸಿದ್ಧಿ ಪುರುಷರು ಕಾಲಜ್ಞಾನಿಗಳು ಜನ್ಮ ತಾಳಿ ಅನೇಕ ಸಂದೇಶಗಳನ್ನು ಸಾರಿದ್ದಾರೆ. 110 ವರ್ಷಗಳ ಕಾಲ ಬದುಕಿದ್ದ ಕೈವಾರ ತಾತಯ್ಯನವರು ಇದಕ್ಕೆ ಉತ್ತಮ ಸಾಕ್ಷಿ ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ರಘು ಕೌಟಿಲ್ಯ ರವರು ತಿಳಿಸಿದರು.

ADVERTISEMENT

 ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಮನುಕುಲವು ನೆನೆಯುವಂತಹ ಕಾಲಜ್ಞಾನಿ, ಮಹಾಸಿದ್ಧಿ ಹಾಗೂ ಅವತಾರ ಪುರುಷರೆನಿಸಿರುವ ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿಯನ್ನು ಕೇವಲ ಜಾತಿಯವರೇ ಆಚರಿಸುತ್ತಿರುವುದು ಅಜ್ಞಾನವೇ ಸರಿ ಎಂದರು.

ಕಾಯಕ ಮಾಡುವ ಸಮುದಾಯಗಳೆಲ್ಲವೂ ನನ್ನ ಸಮುದಾಯಗಳೇ. ಪ್ರತಿಯೊಂದು ಸಮಾಜವೂ ಮತ್ತೊಂದು ಸಮಾಜದ ಮೇಲೆ ಅವಲಂಬಿತವಾಗಿದೆ ಮತ್ತು ಪೂರಕವಾಗಿದೆ. ಕಾಯಕ ಸಮುದಾಯಗಳೇ ನಿಜವಾದ ಸಮಾಜ ಎಂದು ಅಭಿಪ್ರಾಯಪಟ್ಟರು.

 ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಆರ್ ಶಿವಪ್ಪ ರವರು ಮಾತನಾಡಿ, ಕಾಲಜ್ಞಾನಿ ಕೈವಾರ ತಾತಯ್ಯನವರ ಜಯಂತಿಯಂತಹ ಗುಣಾತ್ಮಕ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು. 200 ವರ್ಷಗಳ ಹಿಂದೆಯೇ ದೇಶ ಆಳುವವರೇ ದೇಶದ್ರೋಹಿಗಳಾಗುತ್ತಾರೆ, ಆಹಾರವಿದ್ದರೂ ಉಣ್ಣಲಾಗುವುದಿಲ್ಲ, ದುಬಾರಿ ಜಗತ್ತಲ್ಲಿ ಒಂದು ವಿಚಿತ್ರ ಬರಗಾಲ ಬರುತ್ತದೆ ಎಂದು ನುಡಿದಿದ್ದ ಕೈವಾರ ತಾತಯ್ಯನವರ ಮಾತುಗಳು ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದರು.

 ಹಿಂದೆ ನಡೆದಿದ್ದನ್ನು ಆಧಾರವಾಗಿಟ್ಟುಕೊಂಡು ಅವುಗಳ ತಳಹದಿಯ ಮೇಲೆ ಪ್ರಸ್ತುತ ನಡೆಯುತ್ತಿರುವುದನ್ನ ಅರ್ಥೈಸಿ ಭವಿಷ್ಯವನ್ನು ಅಂದಾಜು ಮಾಡುತ್ತಿದ್ದ ಕೈವಾರ ತಾತಯ್ಯನವರು ರಾಜ ಇಲ್ಲ ರಾಜ್ಯವಿರುತ್ತದೆ, ಭೂಮಿಯ ಭಾರ ಹೆಚ್ಚುತ್ತದೆ, ಪಾಪ ಕೃತ್ಯಗಳು ಹೆಚ್ಚಾಗುತ್ತವೆ, ಪ್ರಕೃತಿ ಸಂಪತ್ತನ್ನು ಮನುಷ್ಯ ನಾಶ ಮಾಡುತ್ತಾನೆ, ಸರ್ಕಾರಗಳು ವಿಫಲವಾಗುತ್ತವೆ ಹಾಗೂ ನೈತಿಕತೆಯಿದ್ದ ಸಮಾಜ ಪತನವಾಗುತ್ತದೆ ಎಂದು ಸಾರುವುದರ ಮೂಲಕ ಅವರು ವೈಚಾರಿಕತೆಯ ಆಳವನ್ನ ಪರಿಚಯಿಸಿದ್ದಾರೆ ಎಂದು ತಿಳಿಸಿದರು.

 1726 ರಲ್ಲಿ ಜನಿಸಿದ ಕೈವಾರ ತಾತಯ್ಯನವರ ಬಾಲ್ಯದ ಹೆಸರು ನಾರೇಯಣ. ಕನ್ನಡ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದ ಕೈವಾರ ತಾತಯ್ಯನವರನ್ನು ವರ್ಷಗಳು ಕಳೆದರೂ ನಾಡು ನೆನೆಯುತ್ತಿದೆ. ಸ್ವಯಂ ಸಿದ್ಧಿ ಹಾಗೂ ಸ್ವಯಂ ಯೋಗ ವಿದ್ಯೆಯನ್ನು ಕಲಿತ ತಾತಯ್ಯನವರು ಜಾತಿ ಹೀನನ ಮನೆಯ ಜ್ಯೋತಿ ಹೀನವೇ ಎಂಬುದರ ಮೂಲಕ ಜಾತೀಯತೆ ಹಾಗೂ ಮೂಢನಂಬಿಕೆಯ ವಿರುದ್ಧ ಧ್ವನಿ ಎತ್ತಿದವರು ಎಂದು ತಿಳಿಸಿದರು.

 ಅಜ್ಞಾನ ಹಾಗೂ ಮೂಢನಂಬಿಕೆಯನ್ನು ತೊಲಗಿಸುವಲ್ಲಿ ವಿಚಾರವುಳ್ಳವರಾಗಿದ್ದ ಹಾಗೂ ಸಮಚಿತ್ತ ಸಾಧಿಸಿದ ಕೈವಾರ ತಾತಯ್ಯನವರು ಜ್ಞಾನದ ಪಕ್ಷಪಾತಿ. ಇಹಪರ ಅರಿತವರಾಗಿದ್ದರು ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಮಾಜಿ ಅಧ್ಯಕ್ಷರಾದ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ ಡಿ ಸುದರ್ಶನ್, ಮೀನಾ ತೂಗುದೀಪ್ ಶ್ರೀನಿವಾಸ್ ಸಮಾಜದ ಮುಖಂಡರುಗಳಾದ ಯತಿರಾಜ್, ನಾರಾಯಣ್ ಹಾಗೂ ಇತರರು ಉಪಸ್ಥಿತರಿದ್ದರು.

Tags: Mysoreraghu koutilya
Previous Post

54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ 10 ಸಾವಿರ ಸಹಾಯಧನ: ಸಿ ಎಂ ಬಸವರಾಜ ಬೊಮ್ಮಾಯಿ

Next Post

1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ: ಕ್ರಿಯಾ ಯೋಜನೆ ಬಿಡುಗಡೆ

Related Posts

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ
Top Story

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

by ಪ್ರತಿಧ್ವನಿ
May 1, 2026
0

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಒಳಕಲಹದಿಂದ ರಾಜ್ಯ ರಾಜಕೀಯದಲ್ಲಿ ಗೊಂದಲ ಹೆಚ್ಚಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು. ಈ ಕಲಹದ ನಡುವೆ ಎಐಸಿಸಿ...

Read moreDetails
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
Next Post
1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ: ಕ್ರಿಯಾ ಯೋಜನೆ ಬಿಡುಗಡೆ

1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ: ಕ್ರಿಯಾ ಯೋಜನೆ ಬಿಡುಗಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada