ಕೋಲಾರ (Kolar) ಮೂಲದ ವೀರ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 57 ವರ್ಷದ ಅಮರನಾಥ್ (Amaranath) ಹೃದಯಾಘಾತದಿಂದ ಮೃತಪಟ್ಟ ಯೋಧ. ಕೋಲಾರದ ಗಲ್ ಪೇಟೆ ನಿವಾಸಿಯಾಗಿದ್ದು, ಶುಕ್ರವಾರ ರಾತ್ರಿ ಜಮ್ಮು- ಕಾಶ್ಮೀರದ (Jammu & Kashmir) ಶಿಲಾನ್ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ 30 ವರ್ಷಗಳಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತನ್ನ ದೇಹ ಹಾಗೂ ಅಂಗಾಂಗಳನ್ನ ಈಗಾಗಲೇ ದಾನ ಮಾಡಿದ್ದಾರೆ.
ಹಲವು ವರ್ಷಗಳ ಹಿಂದೆಯೆ ದೇಹವನ್ನು ವೀರ ಯೋಧರಿಗಾಗಿ ದಾನ ಮಾಡಲು ನಿರ್ಧಾರ ಮಾಡಿದ್ದರು. ಕೋಲಾರದ ಜಯನಗರದಲ್ಲಿ ನಿರ್ಮಾಣ ಮಾಡಲಾಗಿರುವ ಯೋಧರ ಸ್ಮಾರಕಕ್ಕೆ ಯೋಧ ಅಮರ್ನಾಥ್ ಸಹಾಯ ಮಾಡಿದ್ದರು. ಕಾರ್ಗಿಲ್ ಯುದ್ಧ (Kargil war) ಭೂಮಿಯಿಂದಲೇ ಮಣ್ಣನ್ನು ತಂದು ಸ್ಮಾರಕ ಮಾಡಿದ್ದರು ಎನ್ನಲಾಗಿದೆ. ಭಾರತಾಂಭೆ ಅಪ್ಪಟ ಅಭಿಮಾನಿಯಾಗಿದ್ದ ಅಮರ್ನಾಥ್, ದೇಶ ಕಾಯುವ ಜೊತೆಗೆ ಹಲವು ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಮರನಾಥ್ ತಂದೆ ಸೇರಿದಂತೆ ಇಡೀ ಕುಟುಂಬದ ಜೊತೆಗೆ ದೇಶವೇ ಕಂಬನಿ ಮಿಡಿಯುವಂತಾಗಿದೆ.