ಕಮಲ್ ಹಾಸನ್ (Kamal hasan) ನಟನೆಯ ಥಗ್ ಲೈಫ್ (Thug life) ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಯಾವುದೇ ತೊಂದರೆಯಾಗದ ರೀತಿ ಪೊಲೀಸ್ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಹೈಕೋರ್ಟ್ (Highcourt) ಏಕ ಸದಸ್ಯ ಪೀಠದಲ್ಲಿ ನ್ಯಾ.ಎಂ.ನಾಗಪ್ರಸನ್ನ ವಿಚಾರಣೆ ನಡೆಸಲಿದ್ದಾರೆ.

ತಮಿಳು ನಟ ಕಮಲ್ ಹಾಸನ ಕನ್ನಡದ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆ ಖಂಡಿಸಿ ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ನಿರ್ಬಂಧ ಹೇರಲಾಗಿತ್ತು. ಅದರಂತೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ಪೊಲೀಸ್ ಭದ್ರತೆ ಕೋರಿ, ಕಮಲ್ ಹಾಸನ್ ಥಗ್ ಲೈಫ್ ಸಿನಿಮಾ ನಿರ್ಮಾಪಕರು ಹೈಕೊರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಈ ವಿವಾದಕ್ಕೆ ಸಂಬಂಧಪಟ್ಟಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತುಕತೆಗೆ ನಟ ಕಮಲ್ ಹಾಸನ್ ಮತ್ತು ಚಿತ್ರತಂಡ ನ್ಯಾಯಾಲಯದಲ್ಲಿ ಸಮಯ ಕೋರಿದ್ದರು.ಅಲ್ಲಿಯವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡಲ್ಲ ಎಂದು ನಿರ್ಮಾಪಕರು ಹೇಳಿದ್ದರು.

ಆದ್ರೆ ಈವರೆಗೂ ವಾಣಿಜ್ಯ ಮಂಡಳಿ ಹಾಗೂ ಕಮಲ್ ಹಾಸನ್ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ. ಮೊದಲು ಕ್ಷಮೆ ನಂತರ ಮಾತುಕತೆ ಎಂದು ಈ ಹಿಂದೆಯೂ ವಾಣಿಜ್ಯ ಮಂಡಳಿ ಸ್ಪಷ್ಟವಾಗಿ ಹೇಳಿತ್ತು. ಇನ್ನಾದ್ರೂ ಕಮಲ್ ಹಾಸನ್ ಕ್ಷಮೆ ಕೋರುತ್ತಾರಾ..? ಅಥವಾ ಚಿತ್ರ ಬಿಡುಗಡೆ ಆಸೆ ಬಿಡ್ತಾರಾ.? ಎಂಬುದನ್ನು ಕಾದು ನೋಡಬೇಕಿದೆ.