ಪಟ್ಟಣಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಹುಸಾಮುದ್ದಿನ್ ವರ್ಗಾವಣೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಕನ್ನಡ ಸೇನೆ ವತಿಯಿಂದ ತಹಸೀಲ್ದಾರ್ ಮಂಜುನಾಥ್ ಪಾಂಚಾಳ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷರ ರವಿಸ್ವಾಮಿ ನಿರ್ಣ ಮಾತನಾಡಿ ಮುಖ್ಯಾಧಿಕಾರಿ ಪಟ್ಟಣದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್,ಚರಂಡಿ ಸ್ವಚ್ಛತೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ತೆರಿಗೆ ಸಂಗ್ರಹದಲ್ಲೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಇಂತಹ ಅಧಿಕಾರಿಯನ್ನು ಇನ್ನೂ ಕೆಲ ಇಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸೇನೆಯ ತಾಲೂಕು ಅಧ್ಯಕ್ಷ ಪವನ್ ಪೂಜಾರಿ ಉಪಾಧ್ಯಕ್ಷ ನಾಗರಾಜ್ ಹುಡುಗಿ, ಸತೀಶ್ ಗಂಜಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಣ್ಣಿನೋರ್, ನಗರ ಅಧ್ಯಕ್ಷ ಕಾಶಿನಾಥ್ ರೇಕುಳಗಿ, ಸಿದ್ದು ಸೋನಾರ್, ಗಣೇಶ್ ಬಾಬುರಾವ್, ಕಲ್ಲಪ್ಪ ಸಾಗರ್,ಸೋಮ್ನಾಥ ಮಡಿವಾಳ, ಸೈಯದ್ ದಸ್ತಗಿರ್ ನಿರ್ಣಾ, ನಿಖಿಲ್ ಸ್ವಾಮಿ, ವಿಶಾಲ್ ಪೂಜಾರಿ, ಬಸವರಾಜ್ ಸೇರಿದಂತೆ ಇತರ ಕಾರ್ಯಕರ್ತರಿ ದ್ದರು.