• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕನ್ನಡ ಪ್ರೇಮ ಮೆರೆದಿದ್ದ ಕಾಂಗ್ರೆಸ್‌ಗೆ ಹಿಂದಿ ಹೇರಿಕೆ ಮುಳುವು ಆಗುತ್ತಾ..!?

Krishna Mani by Krishna Mani
March 8, 2024
in Top Story, ಕರ್ನಾಟಕ, ರಾಜಕೀಯ
0
ಕನ್ನಡ ಪ್ರೇಮ ಮೆರೆದಿದ್ದ ಕಾಂಗ್ರೆಸ್‌ಗೆ ಹಿಂದಿ ಹೇರಿಕೆ ಮುಳುವು ಆಗುತ್ತಾ..!?
Share on WhatsAppShare on FacebookShare on Telegram

ADVERTISEMENT

-ಕೃಷ್ಣಮಣಿ

ಕರ್ನಾಟಕದಲ್ಲಿ (Kannada) ಕನ್ನಡಿಗನೇ ಸಾರ್ವಭೌಮ. ಇದನ್ನೇ ಘೋಷ ವಾಕ್ಯ ಮಾಡಿಕೊಂಡಿರುವ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳು ಬೆಂಗಳೂರು (bengaluru) ಸೇರಿದಂತೆ ಕರ್ನಾಟಕದಲ್ಲಿ ಕನ್ನಡ ಭಾಷಾ ನಾಮಫಲಕಗಳು ಇರ್ಬೇಕು ಎಂದು ಪ್ರತಿಭಟನೆ ನಡೆದಿತ್ತು. ಕನ್ನಡಿಗರು ಸಾಥ್‌ ಕೂಡ ನೀಡಿದ್ದರು. ಕರ್ನಾಟಕ ಸರ್ಕಾರ ಕೂಡ ಹಿಂದಿ ಹೇರಿಕೆ ಸಹಿಸಲ್ಲ. ಕರ್ನಾಟಕದಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡಲೇಬೇಕು ಎಂದು ಆದೇಶ ಹೊರಡಿಸಿತ್ತು. ಆಗ ಸರ್ಕಾರದ ಬಗ್ಗೆ ಕನ್ನಡಿಗರು ಮೆಚ್ಚುಗೆಯ ಮಾತನಾಡಿದ್ದರು. ಇದೀಗ ಅದೇ ಕನ್ನಡಿಗರು ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಕುಟುಕುವ ಕೆಲಸ ಮಾಡಿದ್ದಾರೆ. ಕಾರಣ ಇಷ್ಟೆ. ಹಿಂದಿ (Hindi) ಹೇರಿಕೆ ಯಾಕೆ..? ಕನ್ನಡಿಗರು ಇಲ್ಲವೇ..? ಎನ್ನುವುದು ಪ್ರಶ್ನೆ.

ರಾಜ್ಯಸಭಾ ಚುನಾವಣೆಗೆ (Rajya Election) ಕಾಂಗ್ರೆಸ್‌ (Congress) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹಾಲಿ ರಾಜ್ಯಸಭಾ ಸದಸ್ಯರಾದೆ ಸಯ್ಯದ್‌ ನಸೀರ್‌ ಅಹ್ಮದ್‌‌ (Syed Naseer Ahmed) ಹಾಗೂ ಜಿ.ಸಿ.ಚಂದ್ರಶೇಖರ್‌ (G.C.Chandrashekar) ಅವರನ್ನು ಮರು ಆಯ್ಕೆಗೆ ಸಮ್ಮತಿ ಸೂಚಿಸಲಾಗಿದೆ. ಜೊತೆಗೆ ದೆಹಲಿ ಮೂಲದ ಅಜಯ್ ಮಾಕನ್‌‌​ಗೆ (Ajay Maken) ಕರ್ನಾಟಕ ಕಾಂಗ್ರೆಸ್​​ ಮಣೆ ಹಾಕಿದೆ. ಅಜಯ್ ಮಾಕನ್‌ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿ ಮಾಡಿದ್ದಕ್ಕೆ ಕನ್ನಡಿಗರ ವಿರೋಧ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ (siddaramaiah) ಅವರಿಗೆ ಎಕ್ಸ್​ ಪೋಸ್ಟ್ ಮೂಲಕ ಕನ್ನಡಿಗರು ಸರಣಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಅನ್ಯ ರಾಜ್ಯದವರಿಗೆ ಮಣೆ ಹಾಕುವ ಮೂಲಕ ಕನ್ನಡಿಗರ ಕಡೆಗಣನೆ ಅಂತ ಜನಾಕ್ರೋಶ ವ್ಯಕ್ತವಾಗ್ತಿದೆ. ಕಾಂಗ್ರೆಸ್​ ಮೇಲೆ ಕನ್ನಡಪರ ಸಂಘಟನೆಗಳು, ಹೋರಾಟಗಾರರ ಸಿಟ್ಟು ಹೊರಹಾಕಿದ್ದಾರೆ. ‘ನಮ್ಮ ತೆರಿಗೆ ನಮ್ಮ ಹಕ್ಕು ಅಂತೀರ.. ನಮ್ಮ ಹುದ್ದೆ ನಮ್ಮ ಹಕ್ಕು ಅಂತೇಳಿ’ ‘ಕನ್ನಡಕ್ಕಾಗಿ ಕಾಂಗ್ರೆಸ್​ ಅನ್ನೋ ಘೋಷವಾಕ್ಯ ಏನಾಯ್ತು ಹೇಳಿ ಸಿಎಂ ಸರ್​’..? ಎಂದು ಪ್ರಶ್ನೆ ಮಾಡ್ತಿದ್ದಾರೆ, ‘ಜನರ ಜೊತೆ ಕಾಂಗ್ರೆಸ್​ ಕಾರ್ಯಕರ್ತರೂ ಕೂಡ ಅಜಯ್‌ ಮಾಕನ್‌​ ಆಯ್ಕೆಗೆ ಆಕ್ರೋಶಗೊಂಡಿದ್ದಾರೆ ಎನ್ನುವು ಎಕ್ಸ್ ಪೋಸ್ಟ್‌‌ನಲ್ಲೇ ಗೊತ್ತಾಗ್ತಿದೆ.

ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಭಾರಿ ವಿರೋಧ ವ್ಯಕ್ತವಾಗ್ತಿದ್ದು, ಅಜಯ್ ಮಾಕನ್‌ ಆಯ್ಕೆಗೆ ಟೀಕಾಸ್ತ್ರಗಳು ಕೇಳಿ ಬರುತ್ತಿವೆ. ಅನ್ಯ ರಾಜ್ಯದ ವ್ಯಕ್ತಿಗೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗ್ತಿದೆ. ಸರ್ಕಾರ ಕನ್ನಡಿಗರ ವಿರೋಧಿ ಎಂದು ಆಕ್ರೋಶ ವ್ಯಕ್ತವಾಗ್ತಿದೆ. ಕನ್ನಡಿಗರ ಸ್ಥಾನ ಕನ್ನಡಿಗರಿಗೆ ಕೊಡಬೇಕು. ಅನ್ಯರಾಜ್ಯದವರಿಗೆ ಕೊಡುವುದು ಆಕ್ರೋಶಕ್ಕೆ ಕಾಂಗ್ರೆಸ್‌ ನಾಯಕರು ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗ್ತಿದೆ. ಇದೇ ಬಿಜೆಪಿ ಕಳೆದ ರಾಜ್ಯಸಭಾ ಚುನಾವಣೆ ವೇಳೆ ನಿರ್ಮಲಾ ಸೀತಾರಾಮನ್‌ (Nirmala sitharaman) ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ಆಗ ಇಲ್ಲದೆ ಟೀಕೆ ಈಗ ಬರ್ತಿರೋದ್ರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತಿವೆ.

Previous Post

ರಾಜ್ಯಸಭೆಗೆ ಡಾ.ಸುಧಾ ಮೂರ್ತಿ ನಾಮನಿರ್ದೇಶನ

Next Post

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ, ಪ್ರಶಸ್ತಿ ಗೆದ್ದ ಸಿನಿಮಾ ಯಾವುದು..?

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

April 19, 2026
Next Post
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ, ಪ್ರಶಸ್ತಿ ಗೆದ್ದ ಸಿನಿಮಾ ಯಾವುದು..?

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ, ಪ್ರಶಸ್ತಿ ಗೆದ್ದ ಸಿನಿಮಾ ಯಾವುದು..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada