• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸರ್ಕಾರ ಕನ್ನಡ ಕಡ್ಡಾಯ ಆದೇಶ ಮರು ಪರಿಶೀಲಿಸುವಂತೆ ಹೈ ಕೋರ್ಟ್‌ ಸೂಚನೆ!

ಕರ್ಣ by ಕರ್ಣ
October 27, 2021
in ಕರ್ನಾಟಕ
0
ಸರ್ಕಾರ ಕನ್ನಡ ಕಡ್ಡಾಯ ಆದೇಶ ಮರು ಪರಿಶೀಲಿಸುವಂತೆ ಹೈ ಕೋರ್ಟ್‌ ಸೂಚನೆ!
Share on WhatsAppShare on FacebookShare on Telegram

ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಯಾಯ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಾಜ್ಯ ಸರ್ಕಾರ ತನ್ನ ಆದೇಶವನ್ನು ಮರುಪರಿಶೀಲಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಸೂಚಿಸಿದೆ. ಪದವಿ ಕೋರ್ಸ್ ಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಯಾಯ ಮಾಡಿರುವ ಸರ್ಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಶ್ಮಿ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ADVERTISEMENT

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ರಾಜ್ಯ ಸರ್ಕಾರದ ಕ್ರಮ ಸಮರ್ಥಿಸಿಕೊಳ್ಳಲು ಮುಂದಾದರು. ಇದಕ್ಕೆ ಆಕ್ಷೇಪ ಎತ್ತಿದ ಸಿಜೆ ರಿತುರಾಜ್ ಅವಸ್ಮಿ, ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಯುವಂತೆ ಒತ್ತಾಯಿಸುವುದು ಸರಿ ಎನ್ನಿಸದು ಎಂದು ಅಭಿಪ್ರಾಯಪಟ್ಟರು. ಅಡ್ವಕೇಟ್ ಜನರಲ್, ಸರ್ಕಾರ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಉದ್ದೇಶವನ್ನಷ್ಟೇ ಹೊಂದಿದೆ. ರಾಜ್ಯದಲ್ಲಿ ಉದ್ಯೋಗ ಮಾಡುವುದಕ್ಕೂ ಕನ್ನಡ ಕಲಿಕೆ ಬೇಕಾಗುತ್ತದೆ. ಹೀಗಾಗಿ ಕನ್ನಡ ಭಾಷೆಯನ್ನು ಪದವಿ ಹಂತದಲ್ಲಿ ಕಲಿಸಲು ಮುಂದಾಗಿದೆ. ಸರ್ಕಾರದ ಆದೇಶ ಸೂಕ್ತವಾಗಿದೆ ಎಂದು ವಿವರಿಸಿದರು.

ವಾದ ಒಪ್ಪದ ಪೀಠ, ಉದ್ಯೋಗದಲ್ಲಿ ಕನ್ನಡ ಕಲಿಕೆಯನ್ನು ಪರಿಗಣಿಸಬಹುದು. ಈ ಸಂಬಂಧ ನೀವು ಷರತ್ತು ವಿಧಿಸಬಹುದು. ಆದರೆ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡುವುದು ಸೂಕ್ತವಲ್ಲ. ಹೊರಗಿನಿಂದ ಬಂದಂತ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಯಾಯಗೊಳಿಸುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪದವಿಗೂ ಮೊದಲು ಕನ್ನಡ ಕಲಿಯದ ವಿದ್ಯಾರ್ಥಿಗಳಿಗೂ ಇದರಿಂದ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ, ಸರ್ಕಾರ ತನ್ನ ವಾದವನ್ನೇ ಮುಂದುವರೆಸುವುದಾದರೆ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕಾಗುತ್ತದೆ ಎಂದು ಮೌಖಿಕವಾಗಿ ತಿಳಿಸಿತು. ನಂತರ, ಸರ್ಕಾರದ ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತು.

ಅರ್ಜಿದಾರರ ಆಕ್ಷೇಪ :

ರಾಜ್ಯದಲ್ಲಿ ಎಲ್ಲಾ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಯಾಯ ಮಾಡಿ ರಾಜ್ಯ ಸರ್ಕಾರ ಆಗಸ್ಟ್ 7ರಂದು ಆದೇಶ ಹೊರಡಿಸಿದೆ. ಇದು ಸಂವಿಧಾನದ ವಿಧಿ 14, 19, 21, 29 ಹಾಗೂ 30ರ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸಂಸ್ಕೃತಿ ಭಾರತಿ ಕರ್ನಾಟಕ ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀಹಯಗ್ರೀವ ಟ್ರಸ್ಟ್, ವ್ಯೋಮ ಲಿಂಗ್ವಿಸ್ಟಿಕ್ ಲ್ಯಾಬ್ ಫೌಂಡೇಶನ್ ಸಂಸ್ಥೆಗಳು ಆರೋಪಿಸಿವೆ. ಅಲ್ಲದೇ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕನ್ನಡ ಭಾಷೆ ಕಲಿಕೆ ಕಡ್ಡಾಯ ಎಂದಿಲ್ಲ. ಹಾಗಿದ್ದೂ ಸರ್ಕಾರ 12ನೇ ತರಗತಿ ಮುಗಿಸಿ ರಾಜ್ಯದಲ್ಲಿ ಶಿಕ್ಷಣ ಮುಂದುವರೆಸಲು ಬರುವ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಮಾಡುತ್ತಿದೆ. ರಾಜ್ಯದಲ್ಲಿ ಶಾಲಾ ಹಂತದಲ್ಲೇ ಕನ್ನಡ ಭಾಷೆ ಕಡ್ಡಾಯವಿಲ್ಲ. ಹೀಗಾಗಿ, ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡುವುದು ಸರಿಯಲ್ಲ. ಸರ್ಕಾರದ ಆದೇಶ ವಿದ್ಯಾರ್ಥಿಗಳು ಪದವಿಯಲ್ಲಿ ಭಾಷೆ ವಿಷಯ ಆಯ್ಕೆ ಮಾಡಿಕೊಳ್ಳುವುದಕ್ಕೂ ಅಡ್ಡಿಯಾಗಲಿದೆ. ಆದ್ದರಿಂದ ಪದವಿ ಹಂತದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಯಾಯ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Tags: BJPCongress PartyCovid 19ಕರ್ನಾಟಕ ಸರ್ಕಾರಕೋವಿಡ್-19ನರೇಂದ್ರ ಮೋದಿಬಿಜೆಪಿಹೈ ಕೋರ್ಟ್
Previous Post

ಮತ್ತೆ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಮೋದಿ ಸರ್ಕಾರ!

Next Post

ಮೈತ್ರಿ ಸರ್ಕಾರದ ʻಜನಸ್ಪಂದನʼ ಯೋಜನೆಗೆ ಬೊಮ್ಮಾಯಿ ಸರ್ಕಾರದಿಂದ ಚಾಲನೆ: ಅಷ್ಟಕ್ಕೂ ಏನಿದು `ಜನಸ್ಪಂದನ’?

Related Posts

Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ
Top Story

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

by ಪ್ರತಿಧ್ವನಿ
June 13, 2026
0

ಬೆಂಗಳೂರು: ರಾಜ್ಯದ ಟಿಯರ್-2 ಹಾಗೂ ಟಿಯರ್-3 ನಗರಗಳು ಮತ್ತು ಪಟ್ಟಣಗಳ ಯುವಕರಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರವೇಶವನ್ನು ವಿಸ್ತರಿಸುವ ಹಾಗೂ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು...

Read moreDetails
ಜೈವಿಕ ತಂತ್ರಜ್ಞಾನ, ಕೈಗಾರಿಕೆ – ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ 27 ಕೋಟಿಗೂ ಅಧಿಕ ಅನುದಾನ : ಪ್ರಿಯಾಂಕ್‌ ಖರ್ಗೆ

ಜೈವಿಕ ತಂತ್ರಜ್ಞಾನ, ಕೈಗಾರಿಕೆ – ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗಾಗಿ 27 ಕೋಟಿಗೂ ಅಧಿಕ ಅನುದಾನ : ಪ್ರಿಯಾಂಕ್‌ ಖರ್ಗೆ

June 13, 2026
Actor Doddanna: ಸಾವು ವದಂತಿ ಬೆನ್ನಲ್ಲೇ ದೇವಾಲಯ ಸುತ್ತಿದ ನಟ ದೊಡ್ಡಣ್ಣ

Actor Doddanna: ಸಾವು ವದಂತಿ ಬೆನ್ನಲ್ಲೇ ದೇವಾಲಯ ಸುತ್ತಿದ ನಟ ದೊಡ್ಡಣ್ಣ

June 13, 2026
ಕರ್ನಾಟಕ ಎಐಸಿಸಿ ಉಸ್ತುವಾರಿ ಸುರ್ಜೆವಾಲರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಲಾಸ್‌ !

ಇದು ಸಾಮಾನ್ಯ ಮನುಷ್ಯನ ಬಜೆಟ್ ಉಳಿವಿನ ಹೋರಾಟ: ಬಿಜೆಪಿ ವಿರುದ್ಧ ಸುರ್ಜೆವಾಲ ಕಿಡಿ

June 13, 2026
ಭಾಷಾ ಸೌಜನ್ಯ-ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವ..!

ಭಾಷಾ ಸೌಜನ್ಯ-ಅಧಿಕಾರ ದರ್ಪ ಮತ್ತು ಉತ್ತರದಾಯಿತ್ವ..!

June 13, 2026
Next Post
ಮೈತ್ರಿ ಸರ್ಕಾರದ ʻಜನಸ್ಪಂದನʼ ಯೋಜನೆಗೆ ಬೊಮ್ಮಾಯಿ ಸರ್ಕಾರದಿಂದ ಚಾಲನೆ: ಅಷ್ಟಕ್ಕೂ ಏನಿದು `ಜನಸ್ಪಂದನ’?

ಮೈತ್ರಿ ಸರ್ಕಾರದ ʻಜನಸ್ಪಂದನʼ ಯೋಜನೆಗೆ ಬೊಮ್ಮಾಯಿ ಸರ್ಕಾರದಿಂದ ಚಾಲನೆ: ಅಷ್ಟಕ್ಕೂ ಏನಿದು `ಜನಸ್ಪಂದನ’?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada