ಮಲಯಾಳಂ ಸಿನಿಮಾ ಇಂಡಸ್ಟ್ರಿ (Mollywood) ಬೆನ್ನಲ್ಲೇ ಸ್ಯಾಂಡಲ್ ವುಡ್ (Sandalwood) ನಲ್ಲಿ ಮತ್ತೆ ಮೀಟೂ ವಿಚಾರ ಸದ್ದು ಮಾಡುತ್ತಿದ್ದು, (Sexual harassment)ಈ ಹಿನ್ನೆಲೆ ಇದೇ 16 ರಂದು ಫಿಲ್ಡ್ ಚೇಂಬರ್‌ನಲ್ಲಿ (Film chamber) ಮಹತ್ವದ ಸಭೆ ನಿಗದಿಯಾಗಿದೆ.

ಈ ವಿಚಾರದ ಬಗ್ಗೆ ಫಿಲ್ಡ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ (N M Suresh) ಮಾತನಾಡಿದ್ದು, ಮಹಿಳಾ ಆಯೋಗದಿಂದ ಪತ್ರ ಬಂದಿದೆ. ನಟ ನಟಿಯರಿಗೆ ಸಭೆ ಕರೆಯುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದರು.16ನೇ ತಾರೀಖು ಸಭೆ ನಡೆಯುತ್ತೆ.ಯಾರಿಗೆ ತೊಂದರೆ ಆಗಿದ್ದಿಯೋ ಅವ್ರು ಬಂದು ಸಮಸ್ಯೆ ಹೇಳಲಿ ಎಂದಿದ್ದಾರೆ.


16ನೇ ತಾರೀಖಿನ ಸಭೆಗೆ ನಾವು ಫೈರ್ (FIRE) ಸಂಘವನ್ನ ಕರೆಯಲ್ಲ. ಅಧಿಕೃತ ಆಹ್ವಾನ ಇಲ್ಲ.ಒಳ್ಳೆ ಉದ್ದೇಶದಿಂದ 16ನೇ ತಾರೀಖಿನ ಸಭೆಗೆ ಎಲ್ಲ ನಟಿಯರು ಬರಬೇಕು.ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಲಿ.ಫೈರ್ ಸಂಸ್ಥೆ ಮತ್ತು ವಾಣಿಜ್ಯ ಮಂಡಳಿಗೂ ಸಂಬಂಧ ಇಲ್ಲ. ಇಲ್ಲಿಯವರಿಗೆ ವಾಣಿಜ್ಯ ಮಂಡಳಿಗೆ ಯಾವುದೇ ರೀತಿಯ ದೂರು ಬಂದಿಲ್ಲ ಎಂದಿದ್ದಾರೆ.






