ನಟ ಕಮಲ್ ಹಾಸನ್ (Kamal hasan) ಕನ್ನಡ ತಮಿಳಿನಿಂದ (Tamil) ಹುಟ್ಟಿದ್ದು ಎಂಬ ಉದ್ಧಟತನದ ಹೇಳಿಕೆ ನೀಡಿದ್ದಲ್ಲದೆ ತಾವು ಕ್ಷಮೆ ಯಾಚಿಸಲ್ಲ ಎಂದು ಮೊಂಡುತನ ಪ್ರದರ್ಶನ ಮಾಡಿರುವ ಮಧ್ಯೆ ಅವರ ವಿರುದ್ಧ ಕನ್ನಡಿಗರ ಕಿಚ್ಚು ಹೆಚ್ಚಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ರಾಜ್ಯ ಸರ್ಕಾರದ ನಡೆಯನ್ನ ಟೀಕಿಸಿದ್ದಾರೆ.

ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳುವುದಿಲ್ಲ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಬಿ.ವೈ. ವಿಜಯೇಂದ್ರ ಮಾತನಾಡಿದ್ದು, ನಮ್ಮ ಸರ್ಕಾರದ ನಡುವಳಿಕೆ ಏನು ಅಂದರೆ, ಹಾವು ಸಾಯಬಾರದು ಕೋಲು ಮುರಿಯಬಾರದು ಆ ರೀತಿಯಿದೆ ಎಂದಿದ್ದಾರೆ.

ಕಮಲ್ ಹಾಸನ್ ಒಬ್ಬ ಖ್ಯಾತ ನಟ.ತಮಿಳು ಭಾಷೆ ಬಗ್ಗೆ ಅವರ ಪ್ರೀತಿ ಅರ್ಥವಾಗುತ್ತದೆ.ಆದ್ರೆ ಕನ್ನಡಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಈಗ ಅವರ ವರ್ತನೆ ಬಿಟ್ಟು ಕನ್ನಡಿಗರಿಗೆ ಕ್ಷಮೆ ಕೋರಬೇಕಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಗಟ್ಟಿ ನಿಲುವು ತಾಳಬೇಕು ಎಂದು ಆಗ್ರಹಿಸಿದ್ದಾರೆ.