ಕಲಬುರಗಿ: ಕೊಲೆಯತ್ನ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ಅನ್ನು ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ಬಂಧಿಸಿದ್ದಾರೆ.

ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಇರುವ ನಾಟಿ ಔಷಧಿ ವೈದ್ಯ ರಶೀದ್ ಮುತ್ಯಾ ಬಂಧನಕ್ಕೆ ಮಣಿಕಂಠ ರಾಠೋಡ್ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಮಣಿಕಂಠ ರಾಠೋಡ್ ಹಾಗೂ ಬೆಂಬಲಿಗರು ನಾರಾಯಣಪುರ ಗ್ರಾಮಕ್ಕೆ ತೆರಳಿ ಗಲಾಟೆ ನಡೆಸಿದ್ದರು.

ಈ ವೇಳೆ ನಡೆದ ಗಲಾಟೆಯಲ್ಲಿ ರಶೀದ್ ಮತ್ಯಾ ಕಾರು ಚಾಲಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಮಣಿಕಂಠ ರಾಠೋಡ್‌ಅನ್ನು ಬಂಧಿಸಲಾಗಿದೆ. ಅಲ್ಲದೇ ನೆಲೋಗಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.












