
ಬೆಂಗಳೂರು: ಏ.೦5: ನಟ ಕಿಚ್ಚ ಸುದೀಪ್ ಅವನ್ನ ಬಿಜೆಪಿಗೆ ಸೇರಿಸಿಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ನಮಗೆ ಲಾಭವಾಗುತ್ತದೆ ಎಂಬ ಉದ್ದೇಶದಿಂದ ತರಾತುರಿಯಲ್ಲಿ ಸುದೀಪ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಸಿಎಂ ಬೊಮ್ಮಾಯಿ ಮತ್ತು ಅವರ ಸಚಿವರು ಮುಂದಾಗಿದ್ದರು. ಆದ್ರೆ ಬಿಜೆಪಿಯವರ ಲೆಕ್ಕಾಚಾರ ಈಗ ತಲೆಕೆಳಗಾಗಿದೆ. ಯಾಕಂದ್ರೆ ಸುದೀಪ್ ಕೊಟ್ಟ ಆ ಹೇಳಿಕೆಯಿಂದ, ಹೌದು ಇಂದು ನಡೆದ ಪ್ರತಿಕಾಗೋಷ್ಠಿಯಲ್ಲಿ ಮತನಾಡಿದ ಸುದೀಪ್, ನಾನು ಯಾವುದೇ ಪಕ್ಷಕ್ಕೆ ಸೇರಲ್ಲ. ಆದರೆ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಸುದೀಪ್ ಅವರ ಈ ಹೇಳಿಕೆಯಿಂದ ಸಿಎಂ ಬೊಮ್ಮಾಯಿ ಸೇರಿದಂತೆ ಅಲ್ಲಿದ್ದ ಸಚಿವರಿಗೂ ಮಜುಗರ ಉಂಟಾಗಿದೆ ಎಂದು ಹೇಳಬಹದು.
ನಟ ಕಿಚ್ಚ ಸುದೀಪ್ ನಾಯಕ ಸಮುದಾಯಕ್ಕೆ ಸೇರಿದ್ದು, ಉತ್ತರ ಕರ್ನಾಟಕದಲ್ಲಿ ಲಾಭದ ಲೆಕ್ಕ ಹಾಕಿದ್ದ ಬಿಜೆಪಿ ಲೆಕ್ಕ ತಲೆಕೆಳಗಾಗಿದೆ. ನಟ ಸುದೀಪ್ ಬಳಸಿಕೊಂಡು ನಾಯಕ ಸಮುದಾಯದ ಮತ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ ನಟ ಸುದೀಪ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿದ್ದಾರೆ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿಭಾರಿ ಸದ್ದು ಮಾಡುತ್ತಿದ್ದು, ನಟ ಸುದೀಪ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಟ ಸುದೀಪ್ ಅವರು ಬಿಜೆಪಿ ಪಕ್ಷದ ಪರವಾಗಿ ಬ್ಯಾಟ್ ಬೀಸುತ್ತಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಹಳೆಯ ಸಿನಿಮಾ ಡೈಲಾಗ್ಗಳನ್ನು ಬಳಸಿಕೊಂಡು ವ್ಯಂಗ್ಯಮಾಡುತ್ತಿದ್ದಾರೆ. ಸಿನಿಮಾ ನಟರನ್ನು ಕರೆದುಕೊಂಡು ತಪ್ಪನ್ನು ಮುಚ್ಚಿಕೊಳ್ಳುವ ಯತ್ನ ಬಿಜೆಪಿ ಮಾಡುತ್ತಿದೆ. 40% ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸುದೀಪ್ ಭಾಗಿದಾರರೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ರಾಜಕಾರಣಕ್ಕೆ ಸೇರುವುದರಿಂದ ಭಾರೀ ಮುಜುಗರಕ್ಕೆ ಒಳಗಾಗುವ ಭೀತಿ ಶುರುವಾಗಿದೆ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.

ಸುದೀಪ್ ಬೆಂಬಲ ಘೋಷಣೆಗೆ ಇಷ್ಟೊಂದು ಬಿಲ್ಡಪ್ ಕೊಟ್ಟಿದ್ಯಾಕೆ? ನಟ ಸುದೀಪ್ ನೇರವಾಗಿಯೇ ಪ್ರಚಾರಕ್ಕೆ ಹೋಗಬಹುದಿತ್ತು, ಅಥವಾ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಕೊಡಬಹುದಿತ್ತು. ಮುಖ್ಯಮಂತ್ರಿ ಹಾಗು ನಾಲ್ವರು ಸಚಿವರನ್ನು ಕೂರಿಸಿಕೊಂಡು ಅಬ್ಬರ ಮಾಡಿದ್ದಾರೆ. ಆದರೆ ಕೇವಲ ಪ್ರಚಾರಕ್ಕೆ ಬರ್ತೇನೆ ಎನ್ನುವ ಹೇಳಿಕೆಗೆ ಇಷ್ಟೊಂದು ಬಿಲ್ಡ್ಅಪ್ ಬೇಕಿತ್ತಾ? ಅಥವಾ ಪಕ್ಷಕ್ಕೆ ಸೇರ್ಪಡೆ ಆಗ್ತೇನೆ ಎಂದು ನಟ ಸುದೀಪ್ ಕೈಕೊಟ್ರಾ? ಅನ್ನೋ ಅನುಮಾನವೂ ಎಲ್ಲರನ್ನು ಕಾಡುತ್ತಿದೆ. ಇದ್ರ ನಡುವೆ ನಟ ಸುದೀಪ್ ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲ ಎಂದು ನಟ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ಪ್ರಕಾಶ್ ರಾಜ್ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಕಿಕ್ ಆಗಿ ಚರ್ಚೆ ನಡೆಯುತ್ತಿದೆ.