ಶಿವಮೊಗ್ಗ (shimogga) ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್ ಈಶ್ವರಪ್ಪ (KS Eshwarappa) ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಕೊನೆಕ್ಷಣದಲ್ಲಿ ಈಶ್ವರಪ್ಪ ನಾಮಪತ್ರ ಹಿಂಪಡೆಯಬಹುದು ಎಂದು ಕಾದುನೋಡಿದ ಪಕ್ಷದ ನಾಯಕರು ನಿನ್ನೆ ಅಂತಿಮವಾಗಿ ಈ ತೀರ್ಮಾನ ಕೈಗೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ (Ticket) ಸಿಗದಿದ್ದಕ್ಕೆ ಈಶ್ವರಪ್ಪ ತಮ್ಮದೇ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. ರಾಜ್ಯ ಬಿಜೆಪಿ (Bjp) ನಾಯಕರ ಮನವೊಲಿಕೆಗೆ ಸೊಪ್ಪು ಹಾಕದ, ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ನೆನ್ನೆ ನಾಮಪತ್ರ (Nomination) ವಾಪಸ್ ಪಡೆಯಲು ಕೊನೆಯ ದಿನ ಆಗಿತ್ತು.ಆದ್ರೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯಲಿಲ್ಲ. ಇದರಿಂದ ಬಿಜೆಪಿ ಪಕ್ಷ ಈಶ್ವರಪ್ಪ ಅವರಿಂದ ಶಿಸ್ತು ಉಲ್ಲಂಘನೆ ಆಗಿದೆ ಎಂದು ಪಕ್ಷದ ಶಿಸ್ತು ಸಮಿತಿಯಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಆರ್ಎಸ್ಎಸ್ (RSS) ಸಂಘಟನೆಯಿಂದ ಬಂದು ಪಕ್ಷದಲ್ಲಿ ಸುಧೀರ್ಘವಾದ ರಾಜಕಾರಣ ಮಾಡಿದ್ದ ಈಶ್ವರಪ್ಪ ಇದೀಗ ಅದೇ ಪಕ್ಷದಿಂದ ಉಚ್ಚಆಟನೆಯಾಗಿದ್ದಾರೆ.