• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

RR vs PBKS – IPL 2023 : ಪಂಜಾಬ್​ಗೆ ರೋಚಕ ಜಯ

Any Mind by Any Mind
April 6, 2023
in Top Story, ಕ್ರೀಡೆ
0
RR vs PBKS – IPL 2023 : ಪಂಜಾಬ್​ಗೆ ರೋಚಕ ಜಯ
Share on WhatsAppShare on FacebookShare on Telegram

ಗುವಾಹಟಿ : ಏ.06: ನೇಥನ್ ಎಲಿಸ್‌ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ ಎದುರಿನ ಐಪಿಎಲ್ ಪಂದ್ಯದಲ್ಲಿ ಜಯ ಗಳಿಸಿತು. ಆ ಮೂಲಕ ಟೂರ್ನಿಯಲ್ಲಿ ಸತತ 2ನೇ ಗೆಲುವಿಗೆ ಮುತ್ತಿಕ್ಕಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​​ ತಂಡವನ್ನು ಪಂಜಾಬ್​ ಕಿಂಗ್ಸ್ ತಂಡ ಕೊನೆಯ ಓವರ್​​ನಲ್ಲಿ ಮಣಿಸಿದೆ. ಪಂಜಾಬ್​ ನೀಡಿದ್ದ ದೊಡ್ಡ ಮೊತ್ತವನ್ನು ಚೇಸ್​​​ ಮಾಡುವಲ್ಲಿ ವೈಫಲ್ಯ ಅನುಭವಿಸಿದ ರಾಯಲ್ಸ್​​, ಕೇವಲ 5 ರನ್​ಗಳಿಂದ ಶರಣಾಗಿದೆ.

ADVERTISEMENT

ಶಿಖರ್ ಧವನ್​ (ಅಜೇಯ 86) ಮತ್ತು ಪ್ರಭು ಶಿಮ್ರಾನ್ (60) ಅವರ ಅರ್ಧಶತಕದ ಬಲದಿಂದ ಪಂಜಾಬ್​ ಕಿಂಗ್ಸ್​, 4 ವಿಕೆಟ್​ ನಷ್ಟಕ್ಕೆ 197 ರನ್​ ಗಳಿಸಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್​​ ತಂಡಕ್ಕೆ ನಥನ್​ ಎಲ್ಲಿಸ್​ ಶಾಕ್​ ನೀಡಿದರು. ಇದರ ನಡುವೆ ಶಿಮ್ರಾನ್​ ಹೆಟ್ಮೆಯರ್​​​ ಮತ್ತು ಧ್ರುವ್​ ಜುರೆಲ್​​​ ಆಟದ ದಿಕ್ಕನ್ನೇ ಬದಲಿಸಿದರು. ಆದರೆ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು. ಇದರೊಂದಿಗೆ ಸಂಜು ಪಡೆ, 192 ರನ್​ ಗಳಿಸಿತು.

ಪಂಜಾಬ್ ನೀಡಿದ್ದ ಬೃಹತ್​ ಬೆನ್ನತ್ತಿದ ರಾಜಸ್ಥಾನ್​​ ರಾಯಲ್ಸ್​, ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್,​ 11 ರನ್​ಗಳಿಗೆ ಆಟ ಮುಗಿಸಿದರು. ಇನ್ನು ಆರಂಭಿಕರಾಗಿ ಬಡ್ತಿ ಪಡೆದಿದ್ದ ಆರ್​ ಅಶ್ವಿನ್​​, 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಜೋಸ್​ ಬಟ್ಲರ್​​ 19 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ರಾಜಸ್ಥಾನ್​​ಗೆ ಸೋಲಿನ ಆತಂಕ್ಕೆ ಸಿಲುಕಿತು.

ಬಳಿಕ ನಾಯಕ ಸಂಜು ಸ್ಯಾಮ್ಸನ್​, ಪ್ರತಿ ಹೋರಾಟ ನಡೆಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಚಚ್ಚಿದ್ದ ಸಂಜು, ತಂಡಕ್ಕೆ ಜೀವ ತುಂಬಿದರು. ಆದರೆ 42 ರನ್ ​​ಗಳಿಸಿದ್ದಾಗ ನಥನ್​ ಎಲ್ಲಿಸ್​ಗೆ ವಿಕೆಟ್​ ಒಪ್ಪಿಸಿದರು. ರಿಯಾನ್​ ಪರಾಗ್​​ ಸ್ಪೋಟಕ ಇನ್ನಿಂಗ್ಸ್​ ಕಟ್ಟಿದರೂ ಗೆಲುವನ್ನು ಹತ್ತಿರಕ್ಕೆ ತಂದು ನಿಲ್ಲಿಸುವಲ್ಲಿ ವಿಫಲರಾದರು. ದೇವದತ್​ ಪಡಿಕ್ಕಲ್​ ಸ್ಲೋ ಇನ್ನಿಂಗ್ಸ್​ ಕಟ್ಟಿ ಟೀಕೆಗೆ ಗುರಿಯಾದರು. 26 ಎಸೆತಗಳಲ್ಲಿ 21 ರನ್​ಗಳಿಸಿದರು. ಅತ್ತ ಸೋಲಿನ ಸುಳಿಗೆ ಸಿಲುಕ್ಕಿದ್ದ ರಾಜಸ್ಥಾನ್​​​ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದು ಶಿಮ್ರಾನ್​ ಹೆಟ್ಮೆಯರ್​​​​-ಧ್ರುವ್​​ ಜುರೆಕ್​​. ಕೊನೆಯಲ್ಲಿ ಮನಮೋಹಕ ಬ್ಯಾಟಿಂಗ್​ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 7 ವಿಕೆಟ್​​ಗೆ ಅರ್ಧಶತಕದ ಜೊತೆಯಾಟವನ್ನೂ ಆಡಿದರು. ಕೊನೆಯ 2 ಓವರ್​​​ಗಳಲ್ಲಿ 34 ರನ್​ ಅಗತ್ಯ ಇತ್ತು. 19ನೇ ಓವರ್​​​ನಲ್ಲಿ ಧ್ರುವ್​ ಜುರೆಲ್​​​, ಆರ್ಷ್​ದೀಪ್​ ಬೌಲಿಂಗ್​​ನಲ್ಲಿ 18 ರನ್​ ಚಚ್ಚಿದರು.

ಇದ್ರಿಂದ ಕೊನೆಯ ಓವರ್​​​​ನಲ್ಲಿ ರಾಜಸ್ಥಾನ್​ ರಾಯಲ್ಸ್​ ಜಯಿಸಲು 16 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಪೋಟಕ ಬ್ಯಾಟಿಂಗ್​ ಪ್ರದರ್ಶಿಸಿದ ಶಿಮ್ರಾನ್​​​​​​​​ ಹೆಟ್ಮೆಯರ್​​, ರನೌಟ್​ ಆದರು. ಆದರೆ ಧ್ರುವ್​ ಕೊನೆಯವರೆಗೂ ಹೋರಾಟ ನಡೆಸಿದರೂ, ಗೆಲುವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಐಪಿಎಲ್​ನ ದುಬಾರಿ ಆಟಗಾರ ಸ್ಯಾಮ್​ ಕರನ್​, 16 ರನ್​ಗಳನ್ನು ಡಿಪೆಂಡ್​ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಪಂಜಾಬ್​ ಗೆಲುವನ್ನು ಖಚಿತಪಡಿಸಿದರು. ರಾಜಸ್ಥಾನ್ 20 ಓವರ್​​​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 192 ರನ್​ ಗಳಿಸಿತು. ಪಂಜಾಬ್​ ಪರ ಎಲ್ಲಿಸ್​ 4 ವಿಕೆಟ್​, ಆರ್ಷದೀಪ್​ 2 ವಿಕೆಟ್ ಪಡೆದು ಮಿಂಚಿದರು.

ಅರ್ಧಶತಕ ಸಿಡಿಸಿದ ಪ್ರಭು-ಧವನ್​ :

ಟಾಸ್​​ ಸೋತು ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್​, ಅದ್ಭುತ ಆರಂಭ ಪಡೆಯಿತು. ಆರಂಭಿಕರಾಗಿ ಇನ್ನಿಂಗ್ಸ್​​ ಆರಂಭಿಸಿದ ಪ್ರಭು ಶಿಮ್ರಾನ್​ ಸಿಂಗ್​ ಮತ್ತು ಶಿಖರ್​​ ಧವನ್​​, ರಾಜಸ್ಥಾನ್​ ರಾಯಲ್ಸ್​ ಬೌಲರ್​​​ಗಳ ಬೆವರಿಳಿಸಿದರು. ಅದರಲ್ಲೂ ಪ್ರಭು ಶಿಮ್ರಾನ್​, ಸ್ಪೋಟಕ ಇನ್ನಿಂಗ್ಸ್​ ಕಟ್ಟುವ ಮೂಲಕ ಅರ್ಧಶತಕ ಸಿಡಿಸಿದರು. ಬೌಲರ್​​ಗಳ ಮೇಲೆ ಸವಾರಿ ಮಾಡಿದ ಈ ಜೋಡಿ, ಮೊದಲ ವಿಕೆಟ್​ಗೆ ಕಲೆ ಹಾಕಿದ್ದು, 90 ರನ್​.

ಸಂಜು ಪಡೆಯ ಬೌಲರ್​ಗಳ ವಿರುದ್ಧ ದಂಡಯಾತ್ರೆ ನಡೆಸಿದ ಪ್ರಭು, ಐಪಿಎಲ್​​​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಗಮನ ಸೆಳೆದರು. 34 ಎಸೆತಗಳನ್ನು ಎದುರಿಸಿದ 7 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ ತಂಡದ 60 ರನ್​ ಸಿಡಿಸಿದರು. ವೇಗದ ಮತ್ತು ಸ್ಪಿನ್​​ ಬೌಲರ್​​ಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ಗಬ್ಬರ್​​, ನಾಯಕನಾಗಿ ರನ್​​ ತೇರು ಎಳೆದರು. 56 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್​​ಗಳ ನೆರವಿನಿಂದ ಅಜೇಯ​ 86 ರನ್​ ಸಿಡಿಸಿದರು.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾನುಕ ರಾಜಪಕ್ಸೆ ಅವರ ಕೈಗೆ ಚೆಂಡು ಬಡಿದ ಕಾರಣ, ರಿಟೈರ್ಡ್​ ಹರ್ಟ್​ ಆಗಿ ಮೈದಾನ ತೊರೆದರು. ಆ ಬಳಿಕ ಕ್ರೀಸ್​ಗೆ ಬಂದ ಜಿತೇಶ್​ ಶರ್ಮಾ ಅಗ್ರೆಸ್ಸಿವ್​ ಬ್ಯಾಟಿಂಗ್​ ನಡೆಸಿದರು. 16 ಎಸೆತಗಳಲ್ಲಿ 27 ರನ್​ ಗಳಿಸಿ ಚಹಲ್​ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದರು. ಸಿಕಂದರ್​ ರಾಝಾ 1 ರನ್​​ಗೆ ಅಶ್ವಿನ್​ ಬೌಲಿಂಗ್​​ನಲ್ಲಿ ಬೋಲ್ಡ್​ ಆದರು. ಶಾರೂಖ್​ ಖಾನ್​ 11 ರನ್​ ಗಳಿಸಿ ನಿರ್ಗಮಿಸಿದರು. ರಾಜಸ್ಥಾನ ಪರ ಹೋಲ್ಡರ್ 2 ವಿಕೆಟ್​ ಪಡೆದರೆ ಅಶ್ವಿನ್​, ಚಹಲ್​ ತಲಾ 1 ವಿಕೆಟ್​ ಪಡೆದರು.

Tags: ButtlerDhawanIPL 2023PBKS win 2 on the trotR AshwinRR vs PBKSRR vs PBKS IPLRRvPBKSSam CurranShikhar DhawanTATAIPL 2023
Previous Post

ಸಾಮಾಜಿಕ ಅವನತಿಯೂ ರಾಜಕೀಯ ಸಂಕಥನಗಳೂ..ಅಧಿಕಾರ ರಾಜಕಾರಣದಿಂದಾಚೆಗೂ ಒಂದು ಸಮಾಜ ಎನ್ನುವುದಿದೆ ಎನ್ನುವುದನ್ನು ಗಮನಿಸಲೇಬೇಕಿದೆ

Next Post

ವಂದೇಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಕಲ್ಲು ತೂರಾಟ: 1 ಲಕ್ಷ ರೂ. ಅಧಿಕ ಮೌಲ್ಯದ ಹಾನಿ

Related Posts

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
0

ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ: ಡಿಸಿಎಂ ಡಿ.ಕೆ. ಶಿವಕುಮಾರ್ ದೇವನಹಳ್ಳಿಗೆ ಕಾವೇರಿ, ಎತ್ತಿನಹೊಳೆ ನೀರು *ಯೋಜನಾ ಪ್ರಾಧಿಕಾರದಿಂದ 30-40 ಮೀಟರ್ ರಸ್ತೆ...

Read moreDetails
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

December 13, 2025
Next Post
ವಂದೇಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಕಲ್ಲು ತೂರಾಟ: 1 ಲಕ್ಷ ರೂ. ಅಧಿಕ ಮೌಲ್ಯದ ಹಾನಿ

ವಂದೇಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಕಲ್ಲು ತೂರಾಟ: 1 ಲಕ್ಷ ರೂ. ಅಧಿಕ ಮೌಲ್ಯದ ಹಾನಿ

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!