ಅತ್ಯಾಚಾರ ಆರೋಪದಡಿ (Rape case) ವಕೀಲ ದೇವರಾಜೇಗೌಡರನ್ನ (Devarajegowda) ಪೊಲೀಸರು ವಶಕ್ಕೆ ಪಡೆದು ನ್ಯಾಯಾಲದ ಮುಂದೆ ಹಾಜರು ಪಡಿಸಿ ತಮ್ಮ ಕಸ್ಟಡಿಗೆ ಕೇಳಿದ್ದರು. ಆದ್ರೆ ನ್ಯಾಯಾಲಯ ಈ ಹಿಂದೆ ಅವರನ್ನು ನ್ಯಾಯಾಂಗ ಬಂಧನಕ್ಕೆ (judicial custody)ಒಪ್ಪಿಸಿತ್ತು.

ಇದೀಗ ಸದ್ಯ ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ (Police custody) ಇಂದು ದೇವರಾಜೇಗೌಡ ವಶಕ್ಕೆ ಪಡೆಯಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ದೇವರಾಜೇಗೌಡ ವಿಚಾರಣೆ ನಡೆಯಲಿದ್ದು, ದೇವರಾಜೇಗೌಡನನ್ನು ಕಸ್ಟಡಿಗೆ ಪಡೆಯಲು ಡಿವೈಎಸ್‌ಪಿ (DYSP) ಅಶೋಕ್ ನೇತೃತ್ವದ ತಂಡ ಜೈಲಿಗೆ ಆಗಮಿಸಿದ್ದಾರೆ.

ಇನ್ನು ಅತ್ಯಾಚಾರದ ಆರೋಪದಡಿಯಲ್ಲಿ ದೇವರಾಜೇಗೌಡ ಬಂಧನವಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪೊಲೀಸರು ಪಡೆದಿದ್ದು, ಕೆಲ ಕಡೆಗಳಲ್ಲಿ ಸ್ಥಳ ಮಹಜರಿಗೂ ಮುಂದಾಗಿದ್ದಾರೆ.










