• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ರಾಜಕಾರಣಿಗಳ ಜೊತೆ ಗುಂಡುಹಾಕಿಲ್ಲ ಅಂದ್ರೆ ಅವರು ಪತ್ರಕರ್ತರೇ ಅಲ್ಲಾ”

ಪತ್ರಕರ್ತನಾಗಿ ನಾನೇನಾದರೂ ಚೂರುಪಾರು ಯಶಸ್ಸನ್ನು ಕಂಡಿದ್ದರೆ ಅದಕ್ಕೆ ಈ ಗುಂಡು ಪಾರ್ಟಿಗಳು ಕೂಡಾ ಕಾರಣ ಎಂದು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ....

ಪ್ರತಿಧ್ವನಿ by ಪ್ರತಿಧ್ವನಿ
March 8, 2026
in Top Story, ಇದೀಗ, ಕರ್ನಾಟಕ, ರಾಜಕೀಯ
0
“ರಾಜಕಾರಣಿಗಳ ಜೊತೆ ಗುಂಡುಹಾಕಿಲ್ಲ ಅಂದ್ರೆ ಅವರು ಪತ್ರಕರ್ತರೇ ಅಲ್ಲಾ”
Share on WhatsAppShare on FacebookShare on Telegram

ವಿಶೇಷ ಲೇಖನ : ದಿನೇಶ್‌ ಅಮೀನ್‌ ಮಟ್ಟು, ಹಿರಿಯ ಪತ್ರಕರ್ತರು..

ADVERTISEMENT

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಟೇಬಲ್‌ ಮೇಲೆ ಮದ್ಯದ ಬಾಟಲ್‌ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದರ ಬಗ್ಗೆ ಪರ – ವಿರೋಧದ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಇದೇ ವಿಚಾರಕ್ಕೆ ಹಿರಿಯ ಪತ್ರಕರ್ತರಾದ ದಿನೇಶ್‌ ಅಮೀನ್‌ ಮಟ್ಟು ವಿಶೇಷ ಲೇಖನ ಬರೆದಿದ್ದಾರೆ. ಇಲ್ಲಿದೆ ನೋಡಿ..!

ಮುಖ್ಯಮಂತ್ರಿಗಳು ಏರ್ಪಡಿಸಿರುವ ಬಜೆಟ್ ಪೂರ್ವ ‘’ಗುಂಡು ಪಾರ್ಟಿ’’ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ನಾನು ಐದು ವರ್ಷ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರನಾಗಿದ್ದೆ ಮತ್ತು ಆಗಲೂ ಈ ಬಜೆಟ್ ಪೂರ್ವ ಪಾರ್ಟಿ ನಡೆದಿತ್ತು ಎನ್ನುವ ಕಾರಣಕ್ಕಾಗಿ ನನ್ನ ಅಭಿಪ್ರಾಯವನ್ನು ಮುಂದಿಡುವುದು ಕರ್ತವ್ಯವೆಂದು ಭಾವಿಸಿದ್ದೇನೆ. ರಾಜಕಾರಣಿಗಳ ಮತ್ತು ಪತ್ರಕರ್ತರ ನಡುವಿನ ಪಾರ್ಟಿಗಳ ಸಂಬಂಧ ಎರಡು ವೃತ್ತಿಗಳು ಶುರುವಾದ ದಿನದಿಂದಲೇ ಪ್ರಾರಂಭವಾಗಿರಬಹುದು.

ಭಾರತದಲ್ಲಿ ಪತ್ರಕರ್ತರಾಗುವುದು ಹೇಗೆ -ವೃತ್ತಿ ಮಾರ್ಗದರ್ಶನ 2026

ಕುಡಿಯುವ ಅಭ್ಯಾಸ ಇರುವ ಯಾರಾದರೂ ಕಾರ್ಯನಿರತ ವರದಿಗಾರರು ಇಲ್ಲವೇ ಸಂಪಾದಕರು ಇಲ್ಲಿಯ ವರೆಗೆ ರಾಜಕಾರಣಿಗಳ ಜೊತೆ ಗುಂಡುಹಾಕಿಲ್ಲ ಎಂದು ಹೇಳಿದರೆ ಅಷ್ಟರ ಮಟ್ಟಿಗೆ ಅವರು ಪತ್ರಕರ್ತರೇ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ನಾನು ನೂರಾರು ರಾಜಕಾರಣಿಗಳ ಜೊತೆ ಗುಂಡುಹಾಕಿದ್ದೇನೆ. ಪತ್ರಕರ್ತನಾಗಿ ನಾನೇನಾದರೂ ಚೂರುಪಾರು ಯಶಸ್ಸನ್ನು ಕಂಡಿದ್ದರೆ ಅದಕ್ಕೆ ಈ ಗುಂಡು ಪಾರ್ಟಿಗಳು ಕೂಡಾ ಕಾರಣ ಎಂದು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ.

After Attending Semi-Final In Mumbai, MS Dhoni Arrives In Ahmedabad For T20 World Cup Final

ಒಬ್ಬ ಪತ್ರಕರ್ತನಿಗೆ ಸುದ್ದಿಗಳು ಪತ್ರಿಕಾಗೋಷ್ಠಿಗಳಲ್ಲಿ ಸಿಗುತ್ತವೆ, ಸುದ್ದಿಯಾಚೆಗಿನ ಸತ್ಯಗಳು ಗೊತ್ತಾಗುವುದು ರಾಜಕಾರಣಿಗಳು ಜೊತೆಗಿನ ಊಟ-ತಿಂಡಿ-ತೀರ್ಥಗಳ ಪಾರ್ಟಿಗಳಲ್ಲಿ. ಗುಂಡು ಮನುಷ್ಯನನ್ನು ಸ್ವಲ್ಪ ಭಾವುಕನನ್ನಾಗಿಯೂ ಮತ್ತು ಸ್ವಲ್ಪ ಪ್ರಾಮಾಣಿಕನನ್ನಾಗಿಯೂ ಮಾಡುತ್ತದೆ. ಆ ಮೂಡಿನಲ್ಲಿ ಆತ ಹಳೆಯ ನೆನಪುಗಳನ್ನು ಅಗೆದು ಅಗೆದು ತೆಗೆದು ಹೊರ ಹಾಕುತ್ತಿರುತ್ತಾನೆ, ಅವುಗಳಲ್ಲಿ ಸತ್ಯ ಸಂಗತಿಗಳೂ ಇರುತ್ತವೆ. ಒಬ್ಬ ಕಸುಬುದಾರ ವರದಿಗಾರನಿಗೆ ಇವೆಲ್ಲ ಬಹಳ ಅಮೂಲ್ಯವಾದ ಮಾಹಿತಿಗಳು. ಚಹದ ಕಪ್ ಇಲ್ಲವೇ ನಿಂಬೆಹಣ್ಣಿನ ರಸದ ಗ್ಲಾಸ್ ಹಿಡ್ಕೊಂಡು ಎಷ್ಟು ಹೊತ್ತು ಮಾತನಾಡಬಹುದು? ಏನು ಮಾತನಾಡಬಹುದು?

ಮುಖ್ಯಮಂತ್ರಿ ಸಿದ್ದರಾಮಯ್ಯನವರೇನು ಈ ಪಾರ್ಟಿ ಶುರುಮಾಡಿದ್ದಲ್ಲ. ಮುಖ್ಯಮಂತ್ರಿ ದೇವರಾಜ ಅರಸು ಅವರು ಆಗಾಗ ಹಿರಿಯ ವರದಿಗಾರರು ಮತ್ತು ಪತ್ರಕರ್ತರನ್ನು ಕರೆದು ಜೊತೆಯಲ್ಲಿಯೇ ಗುಂಡು (ಬಹುಷ: ರಾಯಲ್ ಸೆಲ್ಯೂಟ್ ಇರಬಹುದು) ಹಾಕಿಕೊಂಡು ಊಟ ಮಾಡಿಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಅವರಿಗಿಂತ ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಅದರ ನಂತರದ ಬಹುತೇಕ ಮುಖ್ಯಮಂತ್ರಿಗಳು ಗುಂಡು ಪಾರ್ಟಿ ಆಯೋಜಿಸಿದ್ದಾರೆ. ಕೆಲವು ಮುಖ್ಯಮಂತ್ರಿಗಳು ಪತ್ರಕರ್ತರ ಜೊತೆ ಕುಡಿಯತ್ತಿದ್ದರು, ಕೆಲವರು ಕುಡಿಯುತ್ತಿರಲಿಲ್ಲ. ದೆಹಲಿಯಲ್ಲಿ ಅನಂತಕುಮಾರ್ ಅವರ ಮನೆಯಲ್ಲಿ ನಾವೆಲ್ಲ ಕನ್ನಡದ ಪತ್ರಕರ್ತರು ಹಲವಾರು ಬಾರಿ ರಾತ್ರಿ ಗುಂಡು ಪಾರ್ಟಿ ನಡೆಸಿದ್ದೆವು. ಅನಂತಕುಮಾರ್ ಕೈಯಲ್ಲಿ ನಿಂಬೆಹಣ್ಣಿನ ರಸದ ಗ್ಲಾಸ್ ಹಿಡಿದುಕೊಂಡಿರುತ್ತಿದ್ದರು. ಆದರೆ ಅವರು ಆಗಾಗ ಕೋಣೆಯೊಳಗೆ ಹೋಗಿ ಬರುತ್ತಿದ್ದರು. ಯಾಕೆಂದು ಗೊತ್ತಿಲ್ಲ.‌

ಪತ್ರಕರ್ತರೆಂದರೆ ? - Karunada Kanda

ಇದನ್ನೂ ಓದಿ : ಚಿಕ್ಕಮಗಳೂರಿಗರನ್ನೇ ಉಸ್ತುವಾರಿ ಮಾಡಿ, ನನಗೆ ಈ ಜವಾಬ್ದಾರಿ ಸಾಕು! : ಸಚಿವ ಜಾರ್ಜ್‌ ತ್ಯಾಗದ ಮಾತು..

ಸಿದ್ದರಾಮಯ್ಯನವರು ಹಿಂದೆಲ್ಲ ಪತ್ರಕರ್ತರ ಜೊತೆ ಕುಡಿಯುತ್ತಿರಲಿಲ್ಲ, ನಾನು ಯಾವತ್ತೂ ಅವರ ಜೊತೆ ಕುಡಿದಿಲ್ಲ. ನನಗಿನ್ನೂ ನೆನಪಿದೆ, ಅವರು ವಿರೋಧಪಕ್ಷದ ನಾಯಕರಾಗಿದ್ದಾಗ ಬಹುಷ: 2008-09 ರಲ್ಲಿರಬಹುದು. ಒಮ್ಮೆ ಸಿದ್ದರಾಮಯ್ಯನವರ ಬೆಂಬಲಿಗರೊಬ್ಬರು ದೆಹಲಿಯ ಕರ್ನಾಟಕ ಭವನದಲ್ಲಿ ಊಟಕ್ಕೆ ಕರೆದಿದ್ದರು. ಅಲ್ಲಿ ಸಿದ್ದರಾಮಯ್ಯನವರು ಕುಡಿಯಲಿಲ್ಲ ಎನ್ನುವ ಕಾರಣಕ್ಕೆ ನಾನು ಮತ್ತು ಡಿ.ಉಮಾಪತಿ ಕುಡಿಯಲಿಲ್ಲ. ನಾನು ಬೆಂಗಳೂರಿಗೆ ಬಂದ ನಂತರ ಪ್ರಜಾವಾಣಿಯಲ್ಲಿದ್ದಾಗ ಸಿದ್ದರಾಮಯ್ಯನವರ ಸ್ನೇಹಿತರೊಬ್ಬರು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ನಾವಿಬ್ಬರೇ ಇದ್ದೆವು, ಅತಿಥೇಯ ಗೆಳೆಯರು ಕುಡಿಯೋಣ ಎಂದರು, ಸಿದ್ದರಾಮಯ್ಯನವರು ತಲೆಯಾಡಿಸಿದರು, ಆದರೆ ಬೆಂಗಳೂರಿಗೆ ಬಂದ ನಂತರ ನಾನು ಕುಡಿಯುವುದನ್ನು ಬಿಟ್ಟಿರುವ ಕಾರಣಕ್ಕೆ ಕುಡಿಯೋದಿಲ್ಲ ಎಂದು ಹೇಳಿದೆ, ಅವರೂ ಕುಡಿಯಲಿಲ್ಲ.

ನಾನು ನೋಡಿದ ಮತ್ತು ಅರ್ಥಮಾಡಿಕೊಂಡ ಹಾಗೆ ಸಿದ್ದರಾಮಯ್ಯನವರಿಗೆ ಕುಡಿತದ ಬಗ್ಗೆ ಬಹಳ ವ್ಯಾಮೋಹ ಇಲ್ಲ. ಗುಂಡು ಪಾರ್ಟಿ ಏನು ಎನ್ನುವುದು ಹೆಚ್. ವಿಶ್ವನಾಥ್ ಅವರ ಜೊತೆ ಕುಡಿದ ಪತ್ರಕರ್ತರಿಗೆ ಗೊತ್ತಿರುತ್ತದೆ, ಅದೊಂದು ಬೇರೆಯೇ ಲೆವೆಲ್. ನಾನು ಅವರ ಜೊತೆ ಹತ್ತಾರು ಬಾರಿ ಗುಂಡು ಹಾಕಿರುವ ಅನುಭವದಿಂದ ಹೇಳುತ್ತಿದ್ದೇನೆ.

UPSC Topper Kiran Kamate Interview | UPSC Topper Kiran Kamate Shares Success Tips Tips to Face UPSC

ಈ ಗುಂಡು ಪಾರ್ಟಿಗಳನ್ನೆಲ್ಲ ದೊಡ್ಡ ಅಪರಾಧ ಎಂದು ಬಿಂಬಿಸುವ ಅಗತ್ಯ ಇಲ್ಲ. ಪತ್ರಕರ್ತರ ಭ್ರಷ್ಟಾಚಾರ ರಾಯಲ್ ಸೆಲ್ಯೂಟ್, ಶಿವಾಸ್ ರೀಗಲ್ ಗಳನ್ನು ಮೀರಿ ಬೆಳೆದಿವೆ. ನನಗೆ ತಿಳಿದ ಹಾಗೆ ಇಂತಹ ಪಾರ್ಟಿಗೆ ಸರ್ಕಾರದ ಖಜಾನೆಯಿಂದ ದುಡ್ಡು ಪಾವತಿಯಾಗುವುದಿಲ್ಲ. ಯಾರೋ ಒಬ್ಬ ಸಚಿವ ಬಿಲ್ ಪಾವತಿಸಿರುತ್ತಾರೆ. ಯಾರೋ ಹೇಳಿದ ಹಾಗೆ ಮುಖ್ಯಮಂತ್ರಿಗಳು ಯಾರೋ ಕೆಲವು ಪತ್ರಕರ್ತರನ್ನು ಆಯ್ದು ಕೈಹಿಡಿದು ಕರೆತಂದು ಪಕ್ಕದಲ್ಲಿ ಕೂರಿಸುವುದಿಲ್ಲ. ಕೆಲವರು ಮೊದಲೇ ಬಂದು ಸೀಟ್ ರಿಸರ್ವ್ ಮಾಡುತ್ತಾರೆ. ಅವರು ಮುಖ್ಯಮಂತ್ರಿ ನಿರ್ಗಮಿಸುವ ವರೆಗೆ ಜಪ್ಪಯ್ಯ ಎಂದರೂ ಕುರ್ಚಿಯಿಂದ ಮೇಲೆಳುವುದಿಲ್ಲ.

Types of Journalism: Examining the Vital Roles and Diverse Styles of News  Communication | Types

ಇತ್ತೀಚೆಗೆ ಕುಡಿತದ ಬಗ್ಗೆ ಸಿದ್ದರಾಮಯ್ಯನವರು ಮಡಿವಂತಿಕೆ ಬಿಟ್ಟು ಹೆಚ್ಚು ಉದಾರಿಗಳಾಗಿದ್ದಾರೆ, ಇದರಿಂದಾಗಿ ಹಿಂದೆಯೂ ಬಜೆಟ್ ಪೂರ್ವ ಗುಂಡು ಪಾರ್ಟಿಗಳಲ್ಲಿ ಒಂದು ಸಣ್ಣ ಪೆಗ್ ಹಾಕುತ್ತಿದ್ದರು. ಅದರ ನಂತರ ಎಲ್ಲರ ಕೈಕುಲುಕಿ ಹೊರಟು ಹೋಗುತ್ತಿದ್ದರು. ಈ ಬಾರಿಯ ರೀತಿಯ ಆಭಾಸಗಳು ಆಗಬಾರದೆಂದು ನಾನು ಮತ್ತು ಪ್ರಭಾಕರ್ ಸ್ವಲ್ಪ ಎಚ್ಚರವಾಗಿದ್ದು ಬಾಟಲಿ ಮತ್ತು ಗ್ಲಾಸ್ ಗಳ ಜೊತೆ ಪೋಟೊ ಬರದ ಹಾಗೆ ನೋಡಿಕೊಳ್ಳುತ್ತಿದ್ದೆವು. ಈ ಬಾರಿ ಹಾಗಾಗಿಲ್ಲ. ಮುಖ್ಯಮಂತ್ರಿ ಗಳು ಗುಂಡು ಪಾರ್ಟಿ ಆಯೋಜಿಸಿರುವುದು ಅಪರಾಧ ಅಲ್ಲ. ಆದರೆ ಪತ್ರಕರ್ತರೊಬ್ಬರು ಆ ಪಾರ್ಟಿಯ ಪೋಟೊ ತೆಗೆದು ಬೇಜವಾಬ್ದಾರಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದು ಅಪರಾಧ ಅಲ್ಲದೆ ಇದ್ದರೂ ಸಜ್ಜನಿಕೆಯ ನಡವಳಿಕೆ ಖಂಡಿತ ಅಲ್ಲ.

Tags: CM SiddaramaiahD Devarajursdinesh amin mattuDinner PartyDinner With Journalistsdrinking habitsh n ananatakumarH VishwanathJournalistMediaNew DelhiNewsNews EditorsPoliticiansPrajavaniPratidhvaniPress Reporterrelationship
Previous Post

ನನ್ನ ತಂದೆ ಕನಸು ಕಂಡಿದ್ರು, ನಾನು ನನಸು ಮಾಡಿದ್ದೇನೆ

Next Post

ಪವರ್ ಪ್ಲೇನಲ್ಲಿ ಭಾರತ ವಿಶ್ವ ದಾಖಲೆ! : ಕಿವೀಸ್‌ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ..

Related Posts

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ
Top Story

ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಹಲವೆಡೆ ಅಕ್ರಮ ಬೀಜ ದಾಸ್ತಾನು ಜಪ್ತಿ

by ಪ್ರತಿಧ್ವನಿ
July 5, 2026
0

ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ರಾಜ್ಯದ ಹಾಸನ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ...

Read moreDetails
ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

July 5, 2026
Rain Damage

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

July 5, 2026
ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

July 5, 2026
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
Next Post
ಪವರ್ ಪ್ಲೇನಲ್ಲಿ ಭಾರತ ವಿಶ್ವ ದಾಖಲೆ! : ಕಿವೀಸ್‌ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ..

ಪವರ್ ಪ್ಲೇನಲ್ಲಿ ಭಾರತ ವಿಶ್ವ ದಾಖಲೆ! : ಕಿವೀಸ್‌ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada