• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುಸ್ಲಿಂ ಓಲೈಕೆ ಬಜೆಟ್‌ ಎಂದಿದ್ದ ತೇಜಸ್ವಿ ಸೂರ್ಯಗೆ ದಾಖಲೆ ಸಮೇತ ಅಮೀನ್‌ ಮಟ್ಟು ತಿರುಗೇಟು..!

ಅಲ್ಪಸಂಖ್ಯಾತರ ಓಲೈಕೆ ಎಂದು ಯಾಕ್ರೀ ಎದೆ ಬಡ್ಕೊಳ್ತೀರಾ? ಇಂತಹವರೆಲ್ಲ ನಮ್ಮ ಸಂಸದರು! : ಅಮೀನ್‌ ಮುಟ್ಟು ಟೀಕೆ..

ಪ್ರತಿಧ್ವನಿ by ಪ್ರತಿಧ್ವನಿ
March 7, 2026
in Top Story, ಕರ್ನಾಟಕ, ದೇಶ, ರಾಜಕೀಯ
0
ಮುಸ್ಲಿಂ ಓಲೈಕೆ ಬಜೆಟ್‌ ಎಂದಿದ್ದ ತೇಜಸ್ವಿ ಸೂರ್ಯಗೆ ದಾಖಲೆ ಸಮೇತ  ಅಮೀನ್‌ ಮಟ್ಟು ತಿರುಗೇಟು..!
Share on WhatsAppShare on FacebookShare on Telegram
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ದಾಖಲೆಯ 17ನೇ ಬಜೆಟ್‌ ಬಗ್ಗೆ , ಅಲ್ಪಸಂಖ್ಯಾತರ ಓಲೈಕೆ ಬಜೆಟ್‌ ಎಂದು ವ್ಯಂಗ್ಯವಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
Podcast with Kanthakumar R : ಉನ್ನತ ಶಿಕ್ಷಣ ಸಚಿವ ಸುಧಾಕರ್ ವಿರುದ್ಧ ಗಂಭೀರ ಆರೋಪ..! #mcsudhakar #congress

ಅಲ್ಪಸಂಖ್ಯಾತರ ಓಲೈಕೆ ಎಂದು ಯಾಕ್ರೀ ಎದೆ ಬಡ್ಕೊಳ್ತೀರಾ? ಇಂತಹವರೆಲ್ಲ ನಮ್ಮ ಸಂಸದರು!
ಸರಿಯಾಗಿ ಓದಿಕೊಳ್ಳಿ, ರಾಜ್ಯದಲ್ಲಿ ಮುಸ್ಲಿಮ್, ಕ್ರಿಶ್ಚಿಯನ್, ಜೈನರು, ಬೌದ್ದರು ಮತ್ತು ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರ ಒಟ್ಟು ಜನಸಂಖ್ಯೆ 15.79% ಎಂದು ತಿವಿದಿದ್ದಾರೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಕರ್ನಾಟಕ ರಾಜ್ಯ ಬಜೆಟ್ ಗಾತ್ರ- ರೂ.4.48 ಲಕ್ಷ ಕೋಟಿ, ಈ ಲೆಕ್ಕದಲ್ಲಿ ಶೇಕಡಾ 15.79ರಷ್ಟಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ರೂ. 25,000 ಕೋಟಿಯಷ್ಟಾದರೂ ಕೊಡಬೇಕಾಗುತ್ತದೆ. ಈ ವರ್ಷದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಟ್ಟಿರುವ ಹಣ 4,761 ಕೋಟಿ ರೂಪಾಯಿ, ಕಳೆದ ವರ್ಷ ನೀಡಿದ್ದು ರೂ.4384 ಕೋಟಿ ಎಂದು ಅಂಕಿ ಆಂಶ ಬಹಿರಂಗ ಪಡಿಸಿದ್ದಾರೆ.

ಸಾಮಾಜಿಕ ನ್ಯಾಯ ಎಂದರೆ ಒಬ್ಬರಿಂದ ಕಿತ್ತುಕೊಂಡು ಮತ್ತೊಬ್ಬರಿಗೆ ಹಂಚುವುದಲ್ಲ, ಇದ್ದುದನ್ನು ಸಮನಾಗಿ ಹಂಚಿಕೊಂಡು ತಿನ್ನುವುದು. ಉದಾಹರಣೆಗೆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 24ರಷ್ಟಿರುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಡಿ ನೀಡಲಾಗಿರುವ ಹಣ- ರೂ.44,632 ಕೋಟಿ ಎಂದು ತಿಳಿಸಿದ್ದಾರೆ.

( ದಲಿತರ ಹಣ ನುಂಗಿಹಾಕ್ತಿದ್ದಿರಲ್ಲಾ ಎಂದು ದಯವಿಟ್ಟು ಮೋದಿಭಕ್ತರು ಪ್ರಶ್ನಿಸಲು ಹೋಗಬೇಡಿ, ಮೊದಲು ನಿಮ್ಮ ದೇವರಿಗೆ ರಾಷ್ಟ್ರಮಟ್ಟದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌‌ಪಿ ಕಾಯ್ದೆ ಜಾರಿಗೆ ತರಲು ಬುದ್ದಿ ಹೇಳಿ, ಆ ಮೇಲೆ ಮಾತನಾಡಿ ಎಂದು ಬಿಜೆಪಿ ನಾಯಕರ ವಿರುದ್ಧ ದಿನೇಶ್‌ ಅಮೀನ್‌ ಮಟ್ಟು ಕಿಡಿ ಕಾರಿದ್ದಾರೆ.
ತೇಜಸ್ವಿ ಸೂರ್ಯ ಏನು ಹೇಳಿದ್ದರು..?

ಮಾನ್ಯ ಮುಖ್ಯಮಂತ್ರಿಗಳೇ, ಇದು ‘ಸರ್ವರಿಗೂ ಸಮಪಾಲು’ ಅಲ್ಲ, ಕೇವಲ ‘ಅಲ್ಪಸಂಖ್ಯಾತರಿಗೆ ಮಾತ್ರ ಬೊಕ್ಕಸದ ಪಾಲು’! ಅಲ್ಪಸಂಖ್ಯಾತರಿಗೆ 1000 ಕೋಟಿ ವೆಚ್ಚದಲ್ಲಿ ಶಾಲಾ ಉನ್ನತೀಕರಣ, ಆದರೆ ಹಿಂದೂಗಳ ದೇವಸ್ಥಾನದ ದುರಸ್ತಿಗೆ ಹಣವಿಲ್ಲವೇ? ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ₹3 ಲಕ್ಷ ಸಹಾಯಧನ, ಆದ್ರೆ ಸಾಮಾನ್ಯ ವರ್ಗದ ನಿರುದ್ಯೋಗಿಗಳಿಗೆ ಬರಿ ಭರವಸೆಯ ಹುತ್ತವೇ? ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದರು.

ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ಕಟ್ಟುವ ನಿಮಗೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೂಲಸೌಕರ್ಯ ನೆನಪಾಗುವುದೇ ಇಲ್ಲ! ಅಲ್ಪಸಂಖ್ಯಾತರಿಗೆ ಮೃಷ್ಟಾನ್ನ ಭೋಜನ, ಬಹುಸಂಖ್ಯಾತ ಹಿಂದೂಗಳಿಗೆ ಬಜೆಟ್‌ನಲ್ಲಿ ಶೂನ್ಯ ದರ್ಶನ! ಮಾನ್ಯ ಸಿದ್ದರಾಮಯ್ಯನವರೇ, ನೀವು ಕೇವಲ ಒಂದು ಸಮುದಾಯದ ಮುಖ್ಯಮಂತ್ರಿಯೇ? ಬೊಕ್ಕಸದ ಬಹುಪಾಲನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಬರೆದುಕೊಡುತ್ತಿರುವ ಸಾಲ ರಾಮಯ್ಯ ಅವರೇ, ನಿಮ್ಮ ಈ ಅತಿರೇಕದ ಓಲೈಕೆ ರಾಜಕಾರಣಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತೇಜಸ್ವಿ ಸೂರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ರಾಜ್ಯ ಸರ್ಕಾರದ ಬಜೆಟ್‌ ಎಂದು ಟೀಕಿಸಿದ್ದರು.

Tags: ‌ tejasvi suryabjp karnatakaBJP MPBuddhistChristianCM Siddaramaiahcongress karnatakadinesh amin mattuGovernement Of karnatakaHindu PopulationJain CommunityJournalistMinorities BudgetMuslim CommunityPratidhvaniSIkh Communitysocial Justice
Previous Post

ಇಸ್ರೇಲ್ ನಲ್ಲಿ  ಕೆಂಪು ಹಸು ಜನನ ! ಇದು ವಿನಾಶದ ಸಂಕೇತವೇ??

Next Post

ಅವಮಾನ, ಅಪಮಾನಗಳೇ ಯಶಸ್ಸಿನ ಮೆಟ್ಟಿಲು…!

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
Next Post
ಅವಮಾನ, ಅಪಮಾನಗಳೇ ಯಶಸ್ಸಿನ ಮೆಟ್ಟಿಲು…!

ಅವಮಾನ, ಅಪಮಾನಗಳೇ ಯಶಸ್ಸಿನ ಮೆಟ್ಟಿಲು...!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada