
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ S.M ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿರುವ ಪ್ರಹ್ಲಾದ್ ಜೋಶಿ, ರಾಜ್ಯದ ಹಿಂದಿನ ಸಿಎಂ, ವಿದೇಶಾಂಗ ಸಚಿವರಾಗಿ ದೇಶ ಮತ್ತು ರಾಜ್ಯಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ್ದಾರೆ.ಇಂದು ಎಸ್ ಎಂ ಕೃಷ್ಣ ಸ್ವರ್ಗಸ್ಥರಾಗಿದ್ದಾರೆ.ಪ್ರಧಾನಮಂತ್ರಿಗಳು ಇಂದು ನನ್ನನ್ನ ಕರೆದು ಶೋಕ ಸಂದೇಶ ಪತ್ರ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.


ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಪ್ರಧಾನ ಮಂತ್ರಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅವರ ಶೋಕ ಸಂದೇಶ ಪತ್ರವನ್ನ ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ತಲುಪಿಸಿದ್ದೇನೆ. ಅವರು ಅತ್ಯಂತ ಪ್ರೀತಿ ಆತ್ಮೀಯತೆಯಿಂದ ಮಾತಾಡಿಸುತ್ತಿದ್ರು. ನಾವು ಬಿಜೆಪಿಯಲ್ಲಿದ್ರು, ಅವರಿಗೆ ಮನವಿ ಕೊಟ್ಟ ಕೂಡಲೇ ಕೆಲಸ ಮಾಡಿ ಕೊಡ್ತಿದ್ರು. ಹುಬ್ಬಳ್ಳಿಯಲ್ಲಿ ಪಾಸ್ ಪೋರ್ಟ್ ಕಚೇರಿ ಮಾಡಿಕೊಟ್ರು ಎಂದು ನೆನಪಿಸಿಕೊಂಡಿದ್ದಾರೆ.


ಉದಾರತೆಯ ವ್ಯಕ್ತಿತ್ವ, ಶ್ರೀ ಶಕ್ತಿ ಯೋಜನೆ, ಯಶಸ್ವಿನಿ ಯೋಜನೆ ರಾಜ್ಯದಲ್ಲಿ ಪ್ರಾರಂಭಿಸಿದವರು ಎಸ್.ಎಂ ಕೃಷ್ಣ ಎಂದಿರುವ ಪ್ರಹ್ಲಾದ್ ಜೋಶಿ, ಕಲೆ ಸಾಹಿತ್ಯ, ಸಂಗೀತ, ಕ್ರೀಡೆಯಲ್ಲಿ ಅಪಾರ ಆಸಕ್ತಿ ಇಟ್ಕೊಂಡಿದ್ದರು. ಟೆನ್ನಿಸ್‌ನಲ್ಲಿ ಆಸಕ್ತಿ ಹೊಂದಿದ್ದರು. ಡಿಸೆಂಟ್ ರಾಜಕಾರಣಿ. ಧ್ವನಿ ಜೋರು ಮಾಡಲಿಲ್ಲ, ಅಡ್ಮಿನಿಸ್ಟ್ರೇಟಿವ್ ರಾಜಕಾರಣಿ. ಯಾರಿಗೂ ಏಕವಚನದಲ್ಲಿ ಮಾತಾಡುತ್ತಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ದೇಶದ ನಾಲ್ಕು ಪ್ರಮುಖ ಶಾಸಕಾಂಗ ಸಭೆಗಳಲ್ಲಿ ಎಸ್.ಎಂ ಕೃಷ್ಣ ಭಾಗವಹಿಸಿದ್ದು ವಿಶೇಷ ಎಂದಿರುವ ಪ್ರಹ್ಲಾದ್ ಜೋಶಿ, ಸ್ಪೀಕರ್ ಆಗಿ ಮಾಡಿದ ಕೆಲಸ ದಾಖಲಾರ್ಹ. ಅವರು ಸಿಎಂ ಆಗಿದ್ದಾಗ ಹಲವಾರು ಸವಾಲುಗಳನ್ನ ಎದುರಿಸಿದ್ದಾರೆ. ಸುದೀರ್ಘವಾದ ಬರಗಾಲ, ಸುಮಾರು ಮೂರು ವರ್ಷಗಳ ಕಾಲ ಬರಗಾಲ ಇತ್ತು. ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ರು ಎಂದು ನೆನಪು ಮಾಡಿಕೊಂಡಿದ್ದಾರೆ.
ಬೆಂಗಳೂರನ್ನ ಐಟಿ ಬಿಟಿ ಹಬ್ ಆಗಿ ಮಾಡಿದ್ರು. ಭಾರತದ ಸಿಲಿಕಾನ್ ಸಿಟಿ ಮಾಡಿದ್ರು. ಇದು ಕನ್ನಡಿಗರಿಗೆ ಭಾರತ ದೇಶಕ್ಕೆ ಲಾಭವಾಗಿದೆ. ಮಹಾರಾಷ್ಟ್ರ ಗವರ್ನರ್ ಆಗಿದ್ದಾಗ ವಿದರ್ಭ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಒತ್ತು ನೀಡಿದ್ದರು. ಹಿಲರಿ ಕ್ಲಿಂಟನ್ ಜೊತೆಗೆ ವಿಶೇಷ ಸಂಬಂಧ ಇದ್ದಿದ್ದರಿಂದ, ಎರಡು ದೇಶಗಳ ನಡುವೆ ಸಂಬಂಧ ಬೆಳೆಯೋದಕ್ಕೆ ಕಾರಣವಾಗಿದೆ ಎಂದಿದ್ದಾರೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.
