ಮುಡಾ ದಾಖಲೆಯನ್ನು (Muda documents) ವೈಟ್ನರ್ ಹಾಕಿ ತಿರುಚಿದ್ದ “ವೈಟ್ನರ್ ರಾಮಯ್ಯ”ನ ಅಕ್ರಮವನ್ನು ಇಡಿ (ED) ತನಿಖೆಯಿಂದ ಪತ್ತೆ ಹಚ್ಚಿದೆ ಎಂದು ಸಿಎಂ ರನ್ನ ಕುಟುಕಿ ಜೆಡಿಎಸ್ (Jds) ಟ್ವೀಟ್ ಮಾಡಿದೆ.
ಮೈಸೂರಿನ ಮುಡಾ ಅವ್ಯವಹಾರದಲ್ಲಿ ತನ್ನದೇನು ತಪ್ಪೇ ಇಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ “ಭಂಡರಾಮಯ್ಯ”ನ ಬಂಡವಾಳ ಬಯಲಾಗಿದೆ.
ಮುಡಾ ಪ್ರಕರಣದ A1 ಆರೋಪಿ ಪ್ರಭಾವ ಬಳಸಿ ಅಕ್ರಮವಾಗಿ ಸೈಟುಗಳನ್ನು ಪಡೆದಿದ್ದಷ್ಟೆ ಅಲ್ಲದೇ, ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿಯೂ ಭಾಗಿಯಾಗಿದ್ದಾರೆ ಎಂದು ಇಡಿ ವರದಿಯಲ್ಲಿ ಉಲ್ಲೇಖಿಸಿರುವುದು “ಭ್ರಷ್ಟರಾಮಯ್ಯ” ದಾಖಲೆ ತಿರುಚಿರುವುದಕ್ಕೆ ಸಾಕ್ಷ್ಯಸಿಕ್ಕಿದೆ.
ಇನ್ನಾದರೂ ಭಂಡತನ ಬಿಟ್ಟು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ ಸಿದ್ದರಾಮಯ್ಯ ಎಂದು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ.