ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ವಿರುದ್ಧ ಸಿ.ಟಿ.ರವಿ (CT Ravi) ಅಶ್ಲೀಲ ಪದ ಬಳಕೆ ವಿಚಾರಕ್ಕೆ ಸಂಬಂಧಪಟ್ಟಂತೆ, ಸಿ.ಟಿ.ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ (Highcourt) ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಫೆ.20 ವರೆಗೆ ಮಧ್ಯಂತರ ರಿಲೀಫ್ ಮುಂದುವರಿಸಿ ಹೈಕೋರ್ಟ್ ಆದೇಶ ನೀಡಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ನೋಟಿಸ್ ಜಾರಿ ಮಾಡುವಂತೆ ಕೂಡ ಹೈಕೋರ್ಟ್ ಆದೇಶ ನೀಡಿದ್ದು , ಸದನದೊಳಗೆ ಭೀತಿರಹಿತವಾಗಿ ಮಾತನ್ನಾಡಲು ಅವಕಾಶವಿದೆ.ಮಾನನಷ್ಟ ಪ್ರಕರಣದ ಭೀತಿಯಿಲ್ಲದೇ ಚರ್ಚೆ ನಡೆಸಬಹುದು,ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಮಾತುಗಳಿದ್ದರೂ ಸಭಾಪತಿ ಕ್ರಮ ಕೈಗೊಳ್ಳಬಹುದು ಎಂದು ಸಿ.ಟಿ.ರವಿ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ.

ಈ ವೇಳೆ ಸಿ.ಟಿ.ರವಿ ಧ್ವನಿ ಮಾದರಿ ಪಡೆಯಲು ಅವಕಾಶ ನೀಡಬೇಕೆಂದು ಎಸ್‌ಪಿಪಿ ವಾದ ಮಂಡನೆ ಮಾಡಿದ್ದು, ಸದನದ ವ್ಯಾಪ್ತಿಯ ಚರ್ಚೆಗೆ ಮಾತ್ರ ಕ್ರಮದಿಂದ ವಿನಾಯಿತಿ ಇದೆ.ಟೇಬಲ್ ಮುರಿದು ದಾಂಧಲೆ, ಅಶ್ಲೀಲ ಪದ ಬಳಕೆಗೆ ವಿನಾಯಿತಿ ಇಲ್ಲ ಎಂದು ಸರ್ಕಾರದ ಪರ ಎಸ್ ಪಿಪಿ ಬಿ.ಎ.ಬೆಳ್ಳಿಯಪ್ಪ ವಾದ ಮಾಡಿದ್ದಾರೆ.
ಇನ್ನು ತನಿಖೆಯ ವ್ಯಾಪ್ತಿಯ ಪ್ರಶ್ನೆಯನ್ನು ಹೈಕೋರ್ಟ್ ತೀರ್ಮಾನಿಸಬೇಕಿದೆ. ಹೀಗಾಗಿ ಫೆ.20 ರವರೆಗೆ ಮಧ್ಯಂತರ ತಡೆ ಮುಂದುವರಿಕೆಯಾಗಿದ್ದು ನ್ಯಾ.ಎಂ.ನಾಗಪ್ರಸನ್ನ ರ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಿದೆ.