ಚನ್ನಪಟ್ಟಣ ಟಿಕೆಟ್‌ಗೆ ಯೋಗೇಶ್ವರ್ ಪಟ್ಟು ಹಿಡಿದು ಕುಳಿತಿದ್ದಾರೆ. ನಾನೇ NDA ಅಭ್ಯರ್ಥಿ ಅಂತಾನೂ ಹೇಳ್ಕೊಂಡಿದ್ದಾರೆ. ಆದರೆ ಸಿ.ಪಿ ಯೋಗೇಶ್ವರ್‌ಗೆ ಟಿಕೆಟ್ ನೀಡಲು ಕುಮಾರಸ್ವಾಮಿ ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದ್ದು,ಯೋಗೇಶ್ವರ್ ಮನವೊಲಿಸಿ ಜೆಡಿಎಸ್ ನಾಯಕರಿಗೆ ಟಿಕೆಟ್ ಕೊಡುವ ತಯಾರಿ ನಡೆಯುತ್ತಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿ.ಪಿ ಯೋಗೇಶ್ವರ್ ಜೊತೆ ಜೆಡಿಎಸ್ ನಾಯಕರು ಸಭೆ ನಡೆಸಿದ್ದಾರೆ, ಹೆಚ್. ಡಿ ಕುಮಾರಸ್ವಾಮಿ ಸೂಚನೆ ಮೇರೆಗೆ ಯೋಗೇಶ್ವರ್ ಜೊತೆ ಸಭೆ ಮಾಡುತ್ತಿದ್ದು, ಚನ್ನಪಟ್ಟಣ ಉಪಸಮರ ಟಿಕೆಟ್ ಗೊಂದಲ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎ.ಮಂಜು, ಮಾಜಿ ಶಾಸಕ ಸುರೇಶ್ ಗೌಡ ಮತ್ತಿತರರು ಯೋಗೇಶ್ವರ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಆದರೆ ಸಭೆಯಲ್ಲಿ ಯಾವುದೇ ಸಂಧಾನ ಆಗದ ಕಾರಣಕ್ಕೆ ಸಭೆಯಿಂದ ತುರ್ತಾಗಿ ಹೊರಕ್ಕೆ ಹೋದ ಸಿ.ಎಸ್.ಪುಟ್ಟರಾಜು, ಮತ್ತೆ ಬರ್ತೇನೆ, ಸ್ವಲ್ಪ ಹೊತ್ತು ಕ್ಲಿಯರ್ ಆಗುತ್ತೆ ಎಂದು ಹೇಳಿದ್ದಾರೆ.

ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ, ನಮಗೆ ಬಿಟ್ಟುಕೊಡಿ ಎನ್ನುತ್ತಿರುವ ದಳಪತಿಗಳು. ಆದರೆ ಇದು ನನ್ನ ಅಸ್ತಿತ್ವದ ಪ್ರಶ್ನೆ, ನಾನೇನು ಮಾಡಬೇಕು..? ಎಂದು ಯೋಗೇಶ್ವರ್ ಮರು ಪ್ರಶ್ನೆ ಹಾಕುತ್ತಿದ್ದಾರೆ ಎನ್ನಲಾಗಿದೆ. ನಾಳೆ ಎನ್‌ಡಿಎ ನಾಯಕರ ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲೇ ಅಂತಿಮ ತೀರ್ಮಾನ ಆಗುವ ಸಾಧ್ಯತೆಯಿದೆ.