ರಾಜ್ಯ ಜೆಡಿಎಸ್ (Jds) ಪಾಳಯದಲ್ಲಿ ಒಳ ಬೇಗುದಿ ಶಮನವಾದಂತೆ ಕಾಣುತ್ತಿಲ್ಲ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸರ್ವ ಪ್ರಯತ್ನದ ನಂತರವೂ ಮತ್ತೆ ಪಕ್ಷದೊಳಗೆ ಗೊಂದಲ ಹಾಗೇ ಮುಂದುವರಿದಿದೆ. ಇದು ದಳಪತಿಗಳಿಗೆ ಟೆನ್ಶನ್ ಹೆಚ್ಚಿಸಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಹೆಚ್ಡಿ ಕುಮಾರಸ್ವಾಮಿ ಪಕ್ಷದ ಎಲ್ಲಾ ಶಾಸಕರನ್ನೂ ಒಟ್ಟುಗೂಡಿಸಿ ಸಮನ್ವಯತೆಯ ಪಾಠ ಮಾಡಿದ್ದರು. ಆದ್ರೆ ಆ ಬಳಿಕವೂ ಶಾಸಕರಲ್ಲಿ ಒಗ್ಗಟ್ಟು ಮೂಡಿದ ಹಾಗೆ ಭಾಸವಾಗುತ್ತಿಲ್ಲ.
ಯಾಕಂದ್ರೆ ಹೆಚ್ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಶಾಸಕಾಂಗ ಸಭೆಗೂ ಕೂಡ ಕೆಲ ಶಾಸಕರು ಗೈರಾಗಿದ್ರು.ಆ ನಂತರ ಇದೀಗ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸ್ವತಃ HDK ಸೂಚನೆ ನೀಡಿದ್ದರೂ ಶಾಸಕರು ಆಗಮಿಸಿಲ್ಲ.

ಇನ್ನು ನಿನ್ನೆ (ಮಾ .೪) ನಿಖಿಲ್ ಕುಮಾರಸ್ವಾಮಿ ಸ್ವತಃ ಪ್ರತಿಭಟನೆ ಆಹ್ವಾನ ನೀಡಿದರು. ಹಾಗಿದ್ದರೂ ಶಾಸಕರು ಭಾಗಿಯಾಗಿಲ್ಲ. ಗಾಂಧಿ ಪ್ರತಿಮೆ ಮುಂದೆ ನಡೆದ ಧರಣಿಗೆ 8-9 ಶಾಸಕರು ಮಾತ್ರ ಭಾಗವಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಏನೇ ನೀತಿಪಾಠ ಹೇಳಿದ್ರೂ, ಎಷ್ಟೇ ಮನವೊಲಿಸಿದ್ರೂ ಯಾಕೋ ಏನೋ ಜೆಡಿಎಸ್ ಅಸಮಾಧಾನ ಸರಿಯಾಗುವಂತೆ ಕಾಣುತ್ತಿಲ್ಲ.