ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೇರುವುದನ್ನು ನೋಡುವುದೇ ದೇವೇಗೌಡರ ಕೊನೆ ಆಸೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 123 ಸ್ಥಾನಗಳನ್ನು ಗೆಲುವ ಮೂಲಕ ಅಧಿಕಾರವನ್ನ ಹಿಡಿಯುತ್ತದೆ ಎಂದು ಜನತಾ ಪರ್ವ ಎರಡನೇ ಹಂತದ ಕಾರ್ಯಗಾರವನ್ನ ಉದ್ಘಾಟಿಸಿ ಮಾತನಾಡಿದ್ದಾರೆ.
ನಾವು ಹಿಂದೆ ಎಲ್ಲಿ ತಪ್ಪು ಮಾಡಿದ್ದೇವೆ ಮತ್ತು ಮುಂದೆ ನಾವು ಏನನ್ನೂ ಮಾಡಬೇಕು ಎಂಬುದರ ಬಗ್ಗೆ ಗಮನಹರಿಸಬೇಕು. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಎಂಬುದು ದೇವೇಗೌಡರ ಕೊನೆಯ ಆಸೆ. ಮುಂದಿನ ವಿಧಾನಸಭೆ ಚುನಾವಣೆ ಗೆಲುವುದಕ್ಕೆ ನಾವು ಈಗಾಗಲೇ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ನಿಮಗೆ ಬೇಕಾದ ಎಲ್ಲಾ ತರಹದ ಸಹಕಾರವನ್ನ ನಾವು ನೀಡುತ್ತೇವೆ ಎಂದು ಕಾರ್ಯಾಗಾರದಲ್ಲಿ ಕಾರ್ಯಕರ್ತರಿಗೆ ಹೇಳಿದ್ದಾರೆ.
ಇದೇ ವೇಳೆ ಜೆಡಿಎಸ್ ಪಕ್ಷ ನೂತನವಾಗಿ ಪ್ರಾರಂಭ ಮಾಡಿರುವ ಜನತಾ ಪತ್ರಿಕೆ ಎಂಬ ಮಾಸ ಪತ್ರಿಕೆಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.
ಜನತಾ ಪತ್ರಿಕೆಯು ಪಕ್ಷದ ಮುಖವಾಣಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೆಚ್.ಡಿ.ಕೆ ಹೇಳಿದ್ದಾರೆ. ಪತ್ರಿಕೆಯು ಮುಖ್ಯವಾಗಿ ಪಕ್ಷದ ಚಟುವಟಿಕೆಗಳಿಗೆ ಸೀಮಿತವಾಗುವುದಿಲ್ಲ. ಪತ್ರಿಕೆಯು ಮುಖ್ಯವಾಗಿ ಕೇಂದ್ರದ ನೀತಿಗಳು ಮತ್ತು ಗ್ರಾಮ ಮಟ್ಟದ ಸಮಸ್ಯೆಗಳ ಬಗ್ಗೆ ಮಾತನಾಡುವ ಆಲೋಚನೆ ಇದೆ ಎಂದು ಹೇಳಿದ್ದಾರೆ.