
ಬೀದರ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸಭೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸಮನ್ವಯ ಸಭೆ ಮಾಡಲಾಗಿದೆ. ಕೇಂದ್ರ ಸಚಿವ ಭಗವಂತ್ ಖೂಬಾ ಅವರ ಶಿವನಗರ ನಿವಾಸದಲ್ಲಿ ಸಭೆ ಮಾಡಲಾಗಿದೆ. ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾದ ಶರಣು ಸಲಗರ್, ಸಿದ್ದು ಪಾಟೀಲ್, ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
ಜೆಡಿಎಸ್‌ನ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಜೆಡಿಎಸ್ ಮುಖಂಡರು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಮೈತ್ರಿ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿ ಆಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿರುವ ವಿಚಾರದ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಈ ಕಾಂಗ್ರೆಸ್ ವ್ಯಂಗ್ಯ ಮಾಡಲು ಅವಕಾಶ ನೀಡಬಾರದು, ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ ಗೆದ್ದೇ ಗೆಲ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ಯೋಗ್ಯತೆಗೆ, ಮಾನಮರ್ಯಾದೆ ಇದ್ರೆ ಅವರ ಬಗ್ಗೆ ಒಂದೇ ಮೈನಸ್ ಪಾಯಿಂಟ್ ಹೇಳಲಿ ಎಂದಿರುವ ಅಶೋಕ್,
ಡಿ.ಕೆ ಸುರೇಶ್ ರೌಡಿ, ಒರಟ ಎಂದು ಜನರೇ ಹೇಳುತ್ತಾರೆ. ದೇಶ ಒಡೆಯುವ ಬ್ರದರ್ಸ್‌ಗೆ ಮತ ಹಾಕಬಾರದು. ರಾಹುಲ್ ಗಾಂಧಿ ಇದ್ದಕ್ಕೆ ಇದ್ದಂತ್ತೆ ಕಾಣೆಯಾಗುತ್ತಾರೆ. ಅವರ ನಾಯಕರನ್ನು ಹುಡುಕಬೇಕು. ಬಿಜೆಪಿ – ಜೆಡಿಎಸ್ ಮೈತ್ರಿ ಹಾಲು – ಜೇನು ತರ ಇರಬೇಕು. ಕಳೆದ ಸಮ್ಮಿಶ್ರ ಸರ್ಕಾರ ಬಿದ್ದಿದ್ದು ಹೇಗೆ..? ಕಾಂಗ್ರೆಸ್ ಹುಳಿ ಹಾಕಿದ ತಕ್ಷಣ ಹಾಲು ಒಡೆದು ಹೋಯಿತ್ತು. ಹುಳಿ ಹಾಕಿದ್ದು ಸಿಎಂ ಸಿದ್ದರಾಮಯ್ಯ ಎಂದಿದ್ದಾರೆ.
ಕಾಂಗ್ರೆಸ್‌ನ ಮನೆ ಹಾಳ ಸರ್ಕಾರ ಬಂದ ಮೇಲೆ ಬರಗಾಲ, ಕುಡಿಯಲು ನೀರು ಇಲ್ಲ. ಇದು ಲಂಚ ಹೊಡೆಯುವ ಮೀಟರ್ ಸರ್ಕಾರ ಇದು. ಕೆಎನ್ ರಾಜಣ್ಣಗೆ ಮಾನ ಮರ್ಯಾದೆ ಇದೆಯಾ..? ದೇವೇಗೌಡ್ರು ಸಾಯುವ ಬಗ್ಗೆ ಮಾತನಾಡುತ್ತಾರೆ. ರಾಜಕೀಯವಾಗಿ ವಿರೋಧ ಇರಬಹುದು. ಆದ್ರೆ ಆ ರೀತಿ ಸಾಯೋ ಟೈಂ ನಲ್ಲಿ ಮೈತ್ರಿ ಬೇಕಾ..? ಅಂತಾರೆ. ಕುಮಾರಸ್ವಾಮಿಗೆ ಹಾರ್ಟ್ ಆಪರೇಶನ್ ಹೇಗೆ ಆಯ್ತು ಅಂತಾರೆ. ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ, ದೇವೇಗೌಡ್ರನ್ನ ಬೈಯ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.ಬೀದರ್‌ನಲ್ಲಿ ಹೊಂದಾದ ದೋಸ್ತಿ ನಾಯಕರು.. ಕಾಂಗ್ರೆಸ್ ವಿರುದ್ಧ ಕಿಡಿ ಬೀದರ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸಭೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸಮನ್ವಯ ಸಭೆ ಮಾಡಲಾಗಿದೆ. ಕೇಂದ್ರ ಸಚಿವ ಭಗವಂತ್ ಖೂಬಾ ಅವರ ಶಿವನಗರ ನಿವಾಸದಲ್ಲಿ ಸಭೆ ಮಾಡಲಾಗಿದೆ. ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾದ ಶರಣು ಸಲಗರ್, ಸಿದ್ದು ಪಾಟೀಲ್, ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಜೆಡಿಎಸ್‌ನ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಜೆಡಿಎಸ್ ಮುಖಂಡರು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಮೈತ್ರಿ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿ ಆಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿರುವ ವಿಚಾರದ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಈ ಕಾಂಗ್ರೆಸ್ ವ್ಯಂಗ್ಯ ಮಾಡಲು ಅವಕಾಶ ನೀಡಬಾರದು, ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ ಗೆದ್ದೇ ಗೆಲ್ತಾರೆ ಎಂದಿದ್ದಾರೆ. ಕಾಂಗ್ರೆಸ್ ಯೋಗ್ಯತೆಗೆ, ಮಾನಮರ್ಯಾದೆ ಇದ್ರೆ ಅವರ ಬಗ್ಗೆ ಒಂದೇ ಮೈನಸ್ ಪಾಯಿಂಟ್ ಹೇಳಲಿ ಎಂದಿರುವ ಅಶೋಕ್, ಡಿ.ಕೆ ಸುರೇಶ್ ರೌಡಿ, ಒರಟ ಎಂದು ಜನರೇ ಹೇಳುತ್ತಾರೆ. ದೇಶ ಒಡೆಯುವ ಬ್ರದರ್ಸ್‌ಗೆ ಮತ ಹಾಕಬಾರದು. ರಾಹುಲ್ ಗಾಂಧಿ ಇದ್ದಕ್ಕೆ ಇದ್ದಂತ್ತೆ ಕಾಣೆಯಾಗುತ್ತಾರೆ. ಅವರ ನಾಯಕರನ್ನು ಹುಡುಕಬೇಕು. ಬಿಜೆಪಿ – ಜೆಡಿಎಸ್ ಮೈತ್ರಿ ಹಾಲು – ಜೇನು ತರ ಇರಬೇಕು. ಕಳೆದ ಸಮ್ಮಿಶ್ರ ಸರ್ಕಾರ ಬಿದ್ದಿದ್ದು ಹೇಗೆ..? ಕಾಂಗ್ರೆಸ್ ಹುಳಿ ಹಾಕಿದ ತಕ್ಷಣ ಹಾಲು ಒಡೆದು ಹೋಯಿತ್ತು. ಹುಳಿ ಹಾಕಿದ್ದು ಸಿಎಂ ಸಿದ್ದರಾಮಯ್ಯ ಎಂದಿದ್ದಾರೆ. ಕಾಂಗ್ರೆಸ್‌ನ ಮನೆ ಹಾಳ ಸರ್ಕಾರ ಬಂದ ಮೇಲೆ ಬರಗಾಲ, ಕುಡಿಯಲು ನೀರು ಇಲ್ಲ. ಇದು ಲಂಚ ಹೊಡೆಯುವ ಮೀಟರ್ ಸರ್ಕಾರ ಇದು. ಕೆಎನ್ ರಾಜಣ್ಣಗೆ ಮಾನ ಮರ್ಯಾದೆ ಇದೆಯಾ..? ದೇವೇಗೌಡ್ರು ಸಾಯುವ ಬಗ್ಗೆ ಮಾತನಾಡುತ್ತಾರೆ. ರಾಜಕೀಯವಾಗಿ ವಿರೋಧ ಇರಬಹುದು. ಆದ್ರೆ ಆ ರೀತಿ ಸಾಯೋ ಟೈಂ ನಲ್ಲಿ ಮೈತ್ರಿ ಬೇಕಾ..? ಅಂತಾರೆ. ಕುಮಾರಸ್ವಾಮಿಗೆ ಹಾರ್ಟ್ ಆಪರೇಶನ್ ಹೇಗೆ ಆಯ್ತು ಅಂತಾರೆ. ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ, ದೇವೇಗೌಡ್ರನ್ನ ಬೈಯ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.