ಪಂಚಮಸಾಲಿ (Panchamasali) ಪೀಠದ ಜಯಮೃತ್ಯುಂಜಯ ಶ್ರೀ (Jaya Murthyynjaya swamiji) ಹೇಳಿಕೆ ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ್ದು , ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡದೇ, ಲಾಠಿ, ಬೂಟಿನ ಏಟಿಗೆ ಗಾಯಗೊಂಡವರ ಮನೆಗಳಿಗೆ ನಾನು ಭೇಟಿ ನೀಡಿದ್ದೇನೆ. ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಗಾಯಾಳುಗಳ ಮನೆಗಳಿಗೆ ತೆರಳುತ್ತೇವೆ ಎಂದಿದ್ದಾರೆ.

2025ರ ಜನವರಿ 16 ರಿಂದ ಪ್ರತಿಹಳ್ಳಿ, ಹಳ್ಳಿಗೂ ಪಂಚಮಸಾಲಿ ಜಾಗೃತಿ ಸಭೆ ಮಾಡಲಾಗುತ್ತದೆ.ಮುಂದಿನ ಮೂರು ವರ್ಷಗಳ ಕಾಲ ನಾವು ಹಳ್ಳಿ, ಹಳ್ಳಿಗೂ ಹೋರಾಟದ ಜಾಗೃತಿ ಮೂಡಿಸುತ್ತೇವೆ..
ನಾವು ಮೀಸಲಾತಿ ಹೋರಾಟ (Reservation protest) ಮಾಡಿದಾಗ ನಮ್ಮವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.ಬಹಳ ಅಪಮಾನ ಮಾಡಿದೆ ಕಾಂಗ್ರೆಸ್ ಸರ್ಕಾರ ಎಂದು ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯನವರು (Cm siddaramaiah) ಮೀಸಲಾತಿ ಕೊಡೋಕೆ ಆಗೋಲ್ಲಾ ಅಂತ ಸದನದಲ್ಲಿ ನೇರವಾಗಿ ಹೇಳಿದ್ದಾರೆ. ನಮ್ಮನ್ನು ಅಪ್ಪಿಕೊಳ್ಳುವ ಸರ್ಕಾರ ತಂದು ನಾವು ಮೀಸಲಾತಿ ಪಡೆಯುತ್ತೇವೆ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. ಇನ್ನು ಲಾಠಿ ಚಾರ್ಜ್ ಮಾಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಿ ಅಂತ ಹೇಳಿದ್ರು ಕ್ರಮವೂ ಕೈಗೊಂಡಿಲ್ಲ.ರಾಜ್ಯ ಸರ್ಕಾರ ಇದುವರೆಗೆ ಪಂಚಮಸಾಲಿಗಳ ಕ್ಷಮೆ ಕೇಳಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.