ಇಂಗ್ಲೆಂಡ್(England) ವಿರುದ್ಧದ 3ನೇ ಟೆಸ್ಟ್ನಲ್ಲಿ ಐತಿಹಾಸಿಕ ಗೆಲುವು(Historic Win) ಸಾಧಿಸಿರುವ ಟೀಮ್ ಇಂಡಿಯಾ(Team India) 4ನೇ ಟೆಸ್ಟ್ ಪಂದ್ಯಕ್ಕೆ ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪ್ರಮುಖವಾಗಿ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ(Jasprit Bumrah) ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ನಾಲ್ಕನೇ ಟೆಸ್ಟ್ನಿಂದ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಬುಮ್ರಾ ತಂಡದೊಂದಿಗೆ ರಾಂಚಿಗೆ ತೆರಳಿಲ್ಲ ಎನ್ನಲಾಗಿದ್ದು, ಉಳಿದಂತೆ ರೋಹಿತ್ ಶರ್ಮ(Rohit Sharma) ಸಾರಥ್ಯದ ಭಾರತ ತಂಡದ ಆಟಗಾರರು 4ನೇ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ರಾಂಚಿ(Ranchi)ಗೆ ತೆರಳಿದ್ದಾರೆ.
![](https://pratidhvani.com/wp-content/uploads/2024/02/111-3-1024x683.webp)
ಇನ್ನೂ ಗಾಯದ ಸಮಸ್ಯೆಯ ಕಾರಣದಿಂದ ಎರಡು ಹಾಗೂ 3ನೇ ಟೆಸ್ಟ್ನಿಂದ ಹೊರಗುಳಿದಿದ್ದ ಕನ್ನಡಿಗೆ ಕೆ.ಎಲ್.ರಾಹುಲ್(KL Rahul) 4ನೇ ಟೆಸ್ಟ್ ಪಂದ್ಯಕ್ಕೆ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಮೊದಲ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಕಳೆದ ಎರಡು ಟೆಸ್ಟ್ಗಳಿಂದ ಹೊರಗುಳಿದಿದ್ದರು.
![](https://pratidhvani.com/wp-content/uploads/2024/02/KL-Rahul-1024x670.png)
ಜಸ್ಪ್ರೀತ್ ಬುಮ್ರಾ ಅದ್ಭುತ ಫಾರ್ಮ್ನಲ್ಲಿದ್ದು ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸರಣಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 17 ವಿಕೆ್ಟ್ ಪಡೆದಿರುವ ಬುಮ್ರಾ, ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಆದರೆ ಬುಮ್ರಾ ಅವರಿಗೆ 4ನೇ ಟೆಸ್ಟ್ನಿಂದ ವಿಶ್ರಾಂತಿ ನೀಡಿದ್ದು, ಇವರ ಸ್ಥಾನಕ್ಕೆ ಯಾರು? ಪ್ಲೇಯಿಂಗ್ ಇಲವೆನ್ನಲ್ಲಿ ಸ್ಥಾನ ಪಡೆಯುತ್ತಾರೆ ಕಾದು ನೋಡಬೇಕಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದ್ದು, ಸರಣಿಯ 4ನೇ ಟೆಸ್ಟ್ ಪಂದ್ಯ ಫೆ.23ರಿಂದ ರಾಂಚಿಯಲ್ಲಿ ನಡೆಯಲಿದೆ.
#TeamIndia #BCCI #JaspritBumrah #KLRahul #England #TestSeries