ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜಾಮರ್ ಹಾಕಿರುವ ಪರಿಣಾಮ ಸೆಂಟ್ರಲ್ ಜೈಲ್ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಜೈಲಿಗೆ ಮುತ್ತಿಗೆ ಹಾಕಲು ಸ್ಥಳೀಯ ನಿವಾಸಿಗಳು ಯತ್ನಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಮುತ್ತಿಗೆ ಯತ್ನವನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಪ್ರತಿಭಟನಾಕಾರರು. ಕೊನೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸದ್ದಾರೆ.


ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು ಸುತ್ತಮುತ್ತ ಸುಮಾರು 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಜಾಮರ್ನಿಂದ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ನಿವಾಸಿಗಳಿಂದ ಪ್ರತಿಭಟನೆ ಮಾಡಿದ್ದಾರೆ. ಜೈಲಿನಲ್ಲಿರುವ ಕೈದಿಗಳ ಮೊಬೈಲ್ ಬಳಕೆ ನಿಯಂತ್ರಣ ನೆಪದಲ್ಲಿ ಜಾಮರ್ ಹಾಕಿದ್ದಾರೆ. ಆದರೆ ಜಾಮರ್ನಿಂದ ಸ್ಥಳೀಯರಿಗೆ ಸಮಸ್ಯೆ ಆಗ್ತಿದೆ ಎಂದು ದೂರಿದ್ದಾರೆ.
ಕಳೆದ 7 ತಿಂಗಳಿಂದ ಮೊಬೈಲ್ ಜಾಮರ್ ಪರಿಣಾಮ ಜೋರಾಗಿದ್ದು, ಸ್ಥಳೀಯ ನಿವ…










