ಯುದ್ದ ಪೀಡಿತ ಉಕ್ರೇನ್ನಿಂದ ಸಾವಿರಾರು ಭಾರತೀಯ ಪ್ರಜೆಗಳು ಭಾರತಕ್ಕೆ ರಸ್ತೆ ಹಾಗೂ ವಾಯು ಮಾರ್ಗದ ಮೂಲಕ ದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ಇತ್ತ ಯುವತಿ ಒಬ್ಬರು ತಾವು ತಾಯ್ನಾಡಿಗೆ ವಾಪಾಸಾಗಲು ಸಹಾಯ ಮಾಡುವಂತೆ ವಿಡಿಯೋ ಮೂಲಕ ಕೋರಿಕೊಂಡಿದ್ದಾರೆ.
ʻಜೈ ಹಿಂದ್, ಜೈ ಭಾರತ್ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಯುವತಿ ಅಂಗಲಾಚುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಮತ್ತು ಆ ಯುವತಿಯ ಕಷ್ಟಕ್ಕೆ ಧಾವಿಸುವಂತೆ ಸರ್ಕಾರಕ್ಕೆ ಕೋರಿದ್ದಾರೆ.
ರಷ್ಯಾದ ಸೇನೆಯೂ ಉಕ್ರೇನ್ನ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ತೀವ್ರಗೊಳಿಸಿದ್ದು ಭಾರತ ಮೂಲದ ವಿದ್ಯಾರ್ಥಿಗಳು Romania, Hungary ಮತ್ತು ಪೋಲೆಂಡ್ ಮೂಲಕ ಉಕ್ರೇನ್ನ ಗಡಿ ಭಾಗಗಳಿಗೆ ಬಸ್ಗಳ ಮೂಲಕ ಕರೆದೊಯ್ಯಲಾಗುತ್ತಿದೆ. ಅಲ್ಲಿಂದ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.
ವಿಡಿಯೋದಲ್ಲಿ ಮಾತನಾಡಿರುವ ಲಕ್ನೋ ಮೂಲದ ಗರಿಮಾ ಮಿಶ್ರಾ, ಸಹಾಯ ಮಾಡಲು ಕರೆ ಮಾಡಿದ್ದರೆ ಯಾರೂ ತನ್ನ ಕರೆಗೆ ಸ್ಪಂದಿಸುತ್ತಿಲ್ಲ. ನಾವು ಭಯಬೀತರಾಗಿದ್ದೇವೆ ಎಲ್ಲರು ಇಲಿ ನಮ್ಮನ್ನು ಸುತ್ತುವರೆದಿದ್ದಾರೆ ಯಾರು ನಮ್ಮಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ನಾವು ಎಲ್ಲಿದ್ದೇವೆ ಎಂದು ನಮ್ಮಗೆ ತಿಳಿಯುತ್ತಿಲ್ಲ ಜನರು ಇಲ್ಲಿ ಬರುತ್ತಾರೆ ಗಲಾಟೆ ಮಾಡಿ ಒಳಗೆ ಬರಲು ಪ್ರಯತ್ನಿಸುತ್ತಾರೆ ಇಲ್ಲಿ ಏನಾಗುತ್ತಿದೆ ಎಂದು ನಮ್ಮಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು, ಉಕ್ರೇನ್ ಗಡಿಗೆ ನಮ್ಮ ಸ್ನೇಹಿತರು ರಸ್ತೆ ಮಾರ್ಗವಾಗಿ ಹೋಗಿದ್ದಾರೆ. ಆದರೆ, ಅವರನ್ನು ಅಲ್ಲಿ ತಡೆದಿದ್ದಾರೆ. ಗುಂಡು ಹಾರಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಹುಡುಗರಿಗೆ ಇಲ್ಲಿಯವರೆಗೂ ಏನಾಗಿದೆ ಎಂದು ನಮ್ಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ನಾವು ಇದನ್ನೆಲ್ಲ ಚಲನಚಿತ್ರಗಳಲ್ಲಿ ನೋಡಿದ್ದೆ ಆದರೆ, ಇದು ನಮ್ಮ ಜೀವನದಲ್ಲೂ ನಡೆಯುತ್ತದೆ ಎಂದು ಊಹಿಸಿರಲಿಲ್ಲ ದಯವಿಟ್ಟು ನಮ್ಮಗೆ ಸಹಾಯ ಮಾಡಲು ವಿಮಾನದಲ್ಲಿ ಯಾರನ್ನಾರೂ ಕಳುಹಿಸಿ. ಸೈನ್ಯ ಇಲ್ಲದೆ ನಾವು ಇಲ್ಲಿಂದ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ನಮ್ಮಗೆ ಈ ಸ್ಥಳ ಅಷ್ಟು ಸುರಕ್ಷಿತ ಎನ್ನಿಸುತ್ತಿಲ್ಲ ಎಂದು ಹೇಳಿದ್ದಾರೆ.