ರೌಡಿ ಶೀಟರ್ ಬಿಕ್ಲು ಶಿವ (Biklu shiva) ಕೊಲೆ ಪ್ರಕರಣದ ಮಾಸ್ಟರ್ ಮೈಂಡ್, A1 ಆರೋಪಿ ಜಗ್ಗ (Jagga) ಅಂತಿಮವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಿಕ್ಲು ಶಿವ ಕೊಲೆ ಬಳಿಕ ಆರೋಪಿ ಜಗ್ಗ ಜುಲೈ 16 ರಂದು ಚೆನೈ ಏರ್ ಪೋರ್ಟ್ ನಿಂದ (Airport) ದುಬೈಗೆ (Dubai) ಎಸ್ಕೆಪ್ ಆಗಿದ್ದ. ಆರೋಪಿಗಳ ಬಂಧನಕ್ಕೆ ಟೀಂ ರಚನೆ ಬೆನ್ನಲೇ ಚೆನೈ ಏರ್ ಪೋರ್ಟ್ ನಿಂದ ಆರೋಪಿ ಜಗ್ಗ ದುಬೈಗೆ ಪರಾರಿಯಾಗಿದ್ದ ಎನ್ನಲಾಗಿದೆ.

ದುಬೈನಲ್ಲಿ ಒಂದು ವಾರದ ಉಳಿದಿದ್ದ ಜಗ್ಗ ನಂತರ ಇಂಡೋನೇಷ್ಯಾಗೆ ಶಿಫ್ಟ್ ಆಗಿದ್ದ. ಆ ನಂತರ ಇಂಡೋನೇಷ್ಯಾದಿಂದ ಶ್ರೀಲಂಕಾ ಕೊಲಂಬೋ ಬಳಿಕ ಥಾಯ್ಲೆಂಡ್ ಶಿಫ್ಟ್ ಆಗಿದ್ದ. ಆದ್ರೆ ಜಗ್ಗ ಥಾಯ್ಲೆಂಡ್ ಹೋಗುವಷ್ಟರಲ್ಲಿ ಬ್ಲೂಕಾರ್ನರ್ ನೋಟೀಸ್ ಜಾರಿಯಾಗಿತ್ತು.

ಹೀಗಾಗಿ ಜಗ್ಗ ಮತ್ತೆ ಕೊಲೊಂಬೋಗೆ ಶಿಫ್ಟ್ ಆಗಿದ್ದ ಎನ್ನಲಾಗಿದೆ. ಅಲ್ಲಿ ಏರ್‌ಪೋರ್ಟ್ ಸಿಬ್ಬಂದಿ ನೋಟಿಸ್ ಜಾರಿಯಾಗಿರುವ ಬಗ್ಗೆ ಮಾಹಿತಿ ಕೊಡ್ತಿದ್ದಂತೆ ಜಗ್ಗ ಕೊಲಂಬೋದಿಂದ ನೇರವಾಗಿ ದೆಹಲಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ.





