ಬೆಂಗಳೂರು (Bengaluru): ಮಾಜಿ ಸಿಎಂ (CM̧̧) ಬಿಜೆಪಿ (BJP) ಮುಖಂಡ ಜಗದೀಶ್ ಶೆಟ್ಟರ್ (Jagadish Shettar) ಮನವೊಲಿಕೆ ಸರ್ಕಸ್ ಕೊನೆಯಾಗಿದೆ. ಬೆಳಗಾವಿ (Belagavi) ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜಗದೀಶ್ ಶೆಟ್ಟರ್ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣೆಗೆ ನಿನ್ನೆ ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ರನ್ನು ಭೇಟಿಯಾದ ಶೆಟ್ಟರ್ ಅವರು ಮಾತುಕತೆ ನಡೆಸಿದ್ದರು.

ಯಡಿಯೂರಪ್ಪರ ನಿವಾಸದಲ್ಲಿ ನಡೆದ ಸಭೆ ಅಂತ್ಯವಾಗಿದ್ದು, ಅಮಿತ್ ಶಾ (Amit Shah) ಅವರಿಗೆ ಸಂದೇಶ ಕಳಿಹಿಸಿ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಹೀಗಾಗಿ ಮುಂದಿನ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್‌ಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ಘೋಷಣೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ಗುರುವಾರ ಬೆಂಬಲಿಗರ ಸಭೆ ನಡೆಸಿದ ಬಳಿಕ ಯಡಿಯೂರಪ್ಪ ಮನೆಗೆ ಆಗಮಿಸಿದ್ದ ಶೆಟ್ಟರ್ ಸುದೀರ್ಘವಾಗಿ ಮಾತುಕತೆ ನಡೆಸಿದರು. ಸಭೆಯಲ್ಲಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರ (B̤Y̤̤ Vijayendra) ಮುಂದೆ ಹೊಸ ಪ್ರಸ್ತಾಪವನ್ನ ಮುಂದಿಟ್ಟಿದ್ದರು. ದಿವಂಗತ ಸುರೇಶ್ ಅಂಗಡಿಯ ಇಬ್ಬರು ಪುತ್ರಿಯರ ಪೈಕಿ ಒಬ್ಬರಿಗೆ MP ಟಿಕೆಟ್ ಕೊಡಿಸುವಂತೆ ಒತ್ತಡ ಹೇರುವ ಪ್ರಯತ್ನ ಮಾಡಿದ್ರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಜೊತೆಗಿನ ಸಭೆ ಬಳಿಕ ಬೆಳಗಾವಿಯಿಂದ ಸ್ಪರ್ಧೆ ಮಾಡೋಕೆ ಶೆಟ್ಟರ್ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಬೆಳಿಗ್ಗೆಯಿಂದಲೇ ಕಾರ್ಯಕರ್ತರ ಜೊತೆಗೆ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದ ಜಗದೀಶ್ ಶೆಟ್ಟರ್, ಮಧ್ಯಾಹ್ನ ಹುಬ್ಬಳ್ಳಿಯ ನಿವಾಸದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು
ಧಾರವಾಡ ಕ್ಚೇತ್ರ ಸದ್ಯ ಹಾಲಿ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (pralhad joshi) ಅವರ ಪಾಲಾಗಿದೆ ಹಾವೇರಿ-ಗದಗ (Haveri gadaga) ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ (Basavaraj bommai) ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಎರಡು ಕ್ಷೇತ್ರ ಕೈ ತಪ್ಪಿದ ಹಿನ್ನೆಲೆ ಶೆಟ್ಟರ್ ಅಸಮಾಧಾನಗೊಂಡಿದ್ದರು ಎಂಬ ಮಾತುಗಳು ಹರಿದಾಡುತಿತ್ತು. ಯಡಿಯೂರಪ್ಪ ನಿವಾಸದ ಮೀಟಿಂಗ್ ಬಳಿಕ ಎಲ್ಲವೂ ಸುಖಾಂತ್ಯವಾಗುವ ಲಕ್ಷಣ ಗೋಚರಿಸಿದೆ.
ಸಭೆಯ ಬಳಿಕ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಿದೇ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರ ನಿವಾಸದಿಂದ ತೆರಳಿದ್ದಾರೆ.
#karnataka #bengaluru #loksabhaelection #bjp #bsyediyurappa #jagdishshettar #byvijayendra