ಶಿವಮೊಗ್ಗ : ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಕಾಂಗ್ರೆಸ್ಗೆ ಮರಳಿರೋದು ಹಳೆಯ ವಿಚಾರ. ಈ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಜಗದೀಶ್ ಶೆಟ್ಟರ್ ಖಂಡಿತವಾಗಿಯೂ ಶೀಘ್ರದಲ್ಲಿಯೇ ಬಿಜೆಪಿಗೆ ಮರಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜುಗೌಡ ಮೂಲದಿಂದ ಹಿಂದೂತ್ವ ಹೊಂದಿದವನಲ್ಲ. ಆದರೆ ಜಗದೀಶ್ ಶೆಟ್ಟರ್ ಹಾಗಲ್ಲ. ಅವರು ಹುಟ್ಟು ಹಿಂದೂಪರ ಹೋರಾಟಗಾರ ಶಿವಪ್ಪ ಶೆಟ್ಟರ್ ಪುತ್ರ . ಅವರ ಮೈಯಲ್ಲಿ ಹರಿಯುತ್ತಿರೋದು ಹಿಂದೂ ರಕ್ತ. ಅವರು ಈಗ ಏನೋ ಪಕ್ಷದ ಮೇಲೆ ಮುನಿಸಿಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಹುಬ್ಬಳ್ಳಿ – ಧಾರವಾಡ ಭಾಗದಲ್ಲಿ ಆಗಿನ ಕಾಲದಲ್ಲಿಯೇ ಶಿವಪ್ಪ ಶೆಟ್ಟರ್ ಹಿಂದೂ ಪರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಹೀಗಿರುವಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಕ್ತ ಜಗದೀಶ್ ಶೆಟ್ಟರ್ ಮೈಯಲ್ಲಿ ಹರಿಯಲು ಸಾಧ್ಯವೇ ಇಲ್ಲ. ಅವರು ಶೀಘ್ರದಲ್ಲಿಯೇ ಬಿಜೆಪಿಗೆ ಮರಳುತ್ತಾರೆ ಎಂದು ಹೇಳಿದರು.