ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ (Loksabha election) ಬಿಜೆಪಿ (bjp) ಅಭ್ಯರ್ಥಿಯಾಗಲು ರೆಡಿಯಾಗಿರುವ ಜಗದೀಶ್ ಶೆಟ್ಟರ್‌ಗೂ (jagadish shettar) ಬಂಡಾಯದ ಬಿಸಿ ನಿಧಾನವಾಗಿ ಆರಂಭವಾಗುತ್ತಿದೆ.
ಇಂದು ನಡೆದಿರುವ ಮಹತ್ವದ ಬೆಳವಣಿಗೆಯಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರುಗಳು ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದಂತೆ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಇಂದು ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ್ ಕೋರೆ, ವಿಧಾನಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ್, ರಾಜ್ಯಸಭಾ ಸದಸ್ಯ ಈರಣ್ಣಾ ಕದಾಡಿ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರುಗಳು ಸಭೆ ಸೇರಿದ್ದು, ಬೆಳಗಾವಿ ಕ್ಷೇತ್ರದ ಟಿಕೆಟ್ ವೀರಶೈವ-ಲಿಂಗಾಯತ ಸಮುದಾಯದ ಪಂಚಮಸಾಲಿ ಸಮಾಜದವರಿಗೆ ನೀಡಬೇಕು. ಇದರ ಜೊತೆಗೆ ಜಿಲ್ಲೆಯಲ್ಲಿರುವ ಒಬ್ಬ ಪಂಚಮಸಾಲಿಗಳಿಗೆ ನೀಡಬೇಕೆಂದು ಹೈಕಮಾಂಡ್ ನಾಯಕರ ಮುಂದೆ ಮಾತುಕತೆ ಮಡೋಣ ಎಂಬ ನಿರ್ಧಾರಕ್ಕೆ ಬಂದಿದ್ದು, ಇದು ಜಗದೀಶ್ ಶೆಟ್ಟರ್ ಅವರಿಗೆ ಬಿಸಿ ತುಪ್ಪವಾಗುವ ಲಕ್ಷಣಗಳು ಗೋಚರವಾಗುತ್ತಿದೆ.
ಕ್ಷೇತ್ರಕ್ಕೆ ಬರುವ ಮುನ್ನವೇ ಗೋಬ್ಯಾಕ್ ಅಭಿಯಾನ ಮಾಡಲು ನಿರ್ಧಾರ!
ಇತ್ತ ಜಗದೀಶ್ ಶೆಟ್ಟರ್ ಕ್ಷೇತ್ರಕ್ಕೆ ಕಾಲಿಡುವ ಮುನ್ನವೇ, ಅವರ ವಿರುದ್ಧ ಗೋಬ್ಯಾಕ್ ಅಭಿಯಾನ ಮಾಡಲು ಸ್ಥಳೀಯ ನಾಯಕರುಗಳು ನಿರ್ಧರಿಸಿದ್ದು, ನಾಳೆಯಿಂದ ಕುಂದಾನಗರಿ ಬೆಳಗಾವಿ ನಗರದಲ್ಲೂ ಬಂಡಾಯದ ಬಿಸಿ ತೀವ್ರ ಸ್ವರೂಪ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ಇನ್ನೊಂದು ಕಡೆ, ಜಗದೀಶ್ ಶೆಟ್ಟರ್ ಅವರೇ ಈಗ ಮಾಧ್ಯಮಗಳ ಮುಂದೆ ನಾನು ಬೆಳಗಾವಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದು, ಸ್ಥಳೀಯ ನಾಯಕರನ್ನು ಇದು ಕೆರಳಿಸಿದೆ. ನಾವೆಲ್ಲಾ ಕ್ಷೇತ್ರದಲ್ಲಿದ್ದು ಕೆಲಸ ಮಾಡುವುದು. ಬೇರೆ ಯಾರೋ ಬಂದು ಸ್ಫರ್ಧೆ ಮಾಡಿ ನಮ್ಮ ಮೇಲೆ ಅಧಿಕಾರ ಚಲಾಯಿಸುವುದು. ಇದಕ್ಕೆ ನಾವು ಒಪ್ಪುವುದಿಲ್ಲ ಎನ್ನುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಮುಂದೆ ಮಾಡುವುದೇನು?
ಈಗಾಗಲೇ ರಾಜ್ಯದ ಹಿರಿಯ ನಾಯಕರು ಹಾಗೂ ರಾಷ್ಟ್ರೀಯ ನಾಯಕರ ಮಾರ್ಗದರ್ಶನದಂತೆ ಒಂದು ಹೆಜ್ಜೆ ಎತ್ತಿ ಮುಂದಿಟ್ಟಿರುವ ಜಗದೀಶ್ ಶೆಟ್ಟರ್, ಸ್ಫರ್ಧೆ ಮಾಡುವುದಂತೂ ಖಚಿತ. ಆದ್ರೆ, ಬಂಡಾಯದ ಬಿಸಿ ತಣ್ಣಗೆ ಮಾಡುವವರು ಯಾರು? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಬೇಕಿದೆ.
ಇನ್ನು ಈಗಾಗಲೇ ಯಡಿಯೂರಪ್ಪ ಅವರೇ ನಿಮ್ಮ ಗೆಲುವು ನಿಶ್ಚಿತ. ನಾವೆಲ್ಲಾ ಇದ್ದೇವೆ ಎಂದಿದ್ದು, ಸದ್ಯ ಬೆಳಗಾವಿಯಲ್ಲಿ ನಿಧಾನಗತಿಯಲ್ಲಿ ಬಂಡಾಯ ಕಾವೇರುತ್ತಿದ್ದು ಇದನ್ನು ಈಗಲೇ ಶಮನ ಮಾಡದೇ ಹೋದ್ರೆ, ಮುಂದೆ ಕಷ್ಟವಾಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ.
#karnataka #Bengaluru #loksabhaelection #bjp #jagdishshettar












