
– ಆರ್.ಅಶೋಕ್ ವ್ಯಂಗ್ಯಚಿತ್ರದುರ್ಗ: ನಾಯಕತ್ವ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಆಡಿರುವ ಮಾತು ಡಿ.ಕೆ ಶಿವಕುಮಾರ್ ರನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಆರ್.ಅಶೋಕ್, ಈ ಹಿಂದೆಯೇ ಡಿ.ಕೆ.ಶಿವಕುಮಾರ್ ನಾನೇ ಸಿಎಂ ಅಂತ ಕುರ್ಚಿ ಮೇಲೆ ಟಾವೆಲ್ ಹಾಕಿಕೊಂಡಿದ್ರು. ಈಗ ಡಿಕೆಶಿಗೆ ನಿರಾಸೆಯಾಗಿದೆ. ಡಿಕೆ ಶಿವಕುಮಾರ್ ಮುಂದೆ ಯಾವತ್ತು ಕೂಡ ಸಿಎಂ ಆಗಬಾರದೆಂದು ಸಿದ್ದರಾಮಯ್ಯ ಅವರ ಬೆಂಬಲಿಗರು, ಮಗನ ಮೂಲಕ ಸ್ಟ್ಯಾಟರ್ಜಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ನವೆಂಬರ್ ಕ್ರಾಂತಿ ಆಗಿತ್ತೆ ಎಂದು ನಾವು ಹೇಳಿದ್ದಕ್ಕೆ, ಕಾಂಗ್ರೆಸ್ ನಾಯಕರು ಕ್ರಾಂತಿನೂ ಇಲ್ಲ ಭ್ರಾಂತಿನೂ ಇಲ್ಲ ಎನ್ನುತ್ತಿದ್ದರು. ಆದರೆ ಹೀಗ್ಯಾಕೆ ಈ ರೀತಿ ಮಾತಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಅಷ್ಟಲ್ಲದೇ ಯತೀಂದ್ರ ಸಿದ್ದರಾಮಯ್ಯ ತಮ್ಮ ಮಾತಿನ ಮೂಲಕ ಬೆಳಗಾವಿಯಿಂದಲೇ ಸರ್ಕಾರ ಬೀಳುವುದಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ನಾವು ಮಾತಾಡಿದಾಗ ಸುಳ್ಳು ಸುಳ್ಳು ಎಂದು ಹೇಳುತ್ತಿದ್ದರು. ಆದರೆ ನಾವು ಹೇಳಿದ್ದೇ ಈಗ ನಿಜ ಆಗ್ತಿದೆ ಅನ್ನೋದು ಸ್ಪಷ್ಟವಾಗಿ ಅರ್ಥ ಆಗ್ತಿದೆ ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಒಂದು ರೀತಿ ಗೊಂದಲದ ಗೂಡಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಇಂತ ವಿಚಾರಗಳ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಆಗ್ತಿದೆ. ಇಂತ ಗೊಂದಲದಿಂದ ಸರ್ಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲದಂತ ಪರಿಸ್ಥಿತಿ ಇದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
