ಬೆಂಗಳೂರು: ಮನೆಗೆಲಸಕ್ಕೆ ಇದ್ದ ನೇಪಾಳಿ ದಂಪತಿ ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, ನಗದು ದರೋಡೆ ನಡೆಸಿದ್ದಾರೆ.
ಮಾರತ್ ಹಳ್ಳಿಯ ಯಮಲೂರಿನ ಬಿಲ್ಡರ್ ಶಿವಕುಮಾರ್ ಮನೆಯಲ್ಲಿ 20 ದಿನದ ಹಿಂದೆ ಕೆಲಸಕ್ಕೆ ಸೇರಿದ್ದ ದಿನೇಶ್, ಕಮಲಾ ಎಂಬ ದಂಪತಿಯಿಂದ ದರೋಡೆ ನಡೆಸಿದ್ದಾರೆ.
ಜ.25ರಂದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೆಲಮಹಡಿ, ಮೊದಲ ಮಹಡಿ ಬೆಡ್ ರೂಂನಲ್ಲಿ ಬೀರುವಿನ ಲಾಕರ್ ಮುರಿದು 11.5 ಕೆ.ಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ, 11.5 ಲಕ್ಷ ನಗದು ದರೋಡೆ ನಡೆಸಿದ್ದಾರೆ.
ಸಂಜೆ ಮನೆಯವರು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿತ್ತು ತಕ್ಷಣ ಮಾರತ್ ಹಳ್ಳಿ ಠಾಣೆಗೆ ದೂರು ನೀಡಲಾಗಿದೆ
ಸದ್ಯ ಮಾರತ್ ಹಳ್ಳಿ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳು ನೇಪಾಳ ಮೂಲದವರು ಎಂದು ಗೊತ್ತಾಗಿದೆ. ದರೋಡೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ













